ಹಿರೇನಂದಿಹಳ್ಳಿ ಪಿಕೆಪಿಎಸ್ ಗೆ ಗೋದಾಮ ಮಂಜೂರು : ಮಾಜಿ ಶಾಸಕ ಮಹಾಂತೇಶ ದೊಡಗೌಡರ ಹಾಗೂ ವಿಕ್ರಂ ಇನಾಮದಾರ ಜಂಟಿಯಾಗಿ ಭೂಮಿಪೂಜೆ

ಸಮಯವಾಣಿ ನ್ಯೂಸ್  : ಚನ್ನಮ್ಮನ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ  ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿ., ಬೆಳಗಾವಿ ಗೋಡಾವನ (ಎಮ್ ಎಸ್ ಸಿ) ಸಾಲದ ಮಂಜೂರಿ ಹಿರೇನಂದಿಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ., ಹಿರೇನಂದಿಹಳ್ಳಿ “ಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ” (AIF) ಯೋಜನೆ ಮತ್ತು ಪ್ರಾಕೃ. ಪ. ಸ. ಸಂಘಗಳನ್ನು “ಬಹು ಉದ್ದೇಶ ಸೇವಾ ಕೇಂದ್ರ” (MSC) ಗಳನ್ನಾಗಿ ಮಾರ್ಪಾಡಿಸುವ ಯೋಜನೆಗಳಲ್ಲಿ, ಉಗ್ರಾಣ (ಗೋಡಾವಣ) ನಿರ್ಮಿಸಲು ಧೀರ್ಘಾವಧಿ ಸಾಲದ ಮಂಜೂರಿ ಪತ್ರ ಉಲ್ಲೇಖ ದಿನಾಂಕ : 02.07.2025 ನಬಾರ್ಡ ಪತ್ರದ ಸಂಖ್ಯೆ: ಎನ್‌ಬಿ, ಕೆಆರ್‌ಒ/ಡಿಒಆರ್ ಪ್ಯಾಕ್ಸ್-ಎಮ್ ಎಸ್ /275/2022-23 ದಿನಾಂಕ : 18.08.2023 ರಂದು ಮೂಂಜುರಾದ ಉಗ್ರಾಣ (ಗೋಡಾವಣ) ನಿರ್ಮಿಸಲು ಇಂದು ಹಿರೇನಂದಿಹಳ್ಳಿಯಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

ಕಿತ್ತೂರು ಮತಕ್ಷೇತ್ರದ ಹಿರೇನಂದಿಹಳ್ಳಿ ಕೃಷಿಪತ್ತಿನ ಸೌಹಾರ್ದ ಸಹಕಾರಿ ಸಂಘದ ಗೋಡಾವನ್ ನಿರ್ಮಾಣಕ್ಕೆ ಮಾಜಿ ಜನಪ್ರಿಯ ಶಾಸಕರಾದ ಮಹಾಂತೇಶ್ ದೊಡ್ಡಗೌಡ್ರು ಹಾಗೂ ಬಿಜೆಪಿ ಯುವ ನಾಯಕ ವಿಕ್ರಂ ಇನಾಮ್ದಾರ್ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ಥರು ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದರು.

ಸನ್ಮಾನವನ್ನು ಸ್ವೀಕರಿಸಿ ವಿಕ್ರಂ ಇನಾಮ್ದಾರ್ ಅವರು ಮಾತನಾಡಿ ಕೃಷಿಪತ್ತಿನ ಸೌಹಾರ್ದ ಸಹಕಾರಿ ಸಂಘಗಳು ರೈತರ ಜೀವನಾಡಿಯಾಗಿವೆ ಡಿಸಿಸಿ ಬ್ಯಾಂಕಿನ ಆಧೀನಕ್ಕೆ ಒಳಪಡಿವ ಇವುಗಳನ್ನು ಅಭಿವೃದ್ಧಿಪಡಿಸಿದರೆ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗುತ್ತದೆ. ಇವುಗಳ ಅಭಿವೃದ್ಧಿಗೆ ನಾನು ಮುಂಬರುವ ದಿನಗಳಲ್ಲಿ ಶ್ರಮಿಸುತ್ತೇನೆ ಅಕ್ಟೋಬರ್ ತಿಂಗಳಲ್ಲಿ ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಯುತ್ತಿದ್ದು ನನ್ನನ್ನು ಕಿತ್ತೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ನನಗೆ ಖುಷಿ ತಂದಿದೆ ಡಿಸಿಸಿ ಬ್ಯಾಂಕ್ ಚುನಾವಣೆ ರೈತರ ಸೇವೆ ಮಾಡಲು ನನಗೆ ಒದಗಿ ಬಂದ ಸೌಭಾಗ್ಯ ನಿಮ್ಮ ನಿರೀಕ್ಷೆಗೆ ತಕ್ಕಂತೆ ದುಡಿದು ಕೃಷಿ ಪತ್ತಿನ ಸಂಘಗಳನ್ನು ಅಭಿವೃದ್ಧಿ ಪಡಿಸುವುದು ನನ್ನ ಗುರಿಯಾಗಿದೆ.  ಮಹಾಂತೇಶ್ ದೊಡ್ಡಗೌಡ್ರು ಅವರ ಮಾರ್ಗದರ್ಶನದಂತೆ ನಡೆಯುತ್ತೇನೆ ಬಾಲಚಂದ್ರ ಜಾರಕಿಹೊಳಿಯವರು ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯವಿದೆ ನನ್ನನ್ನು ಡಿಸಿಸಿ ಬ್ಯಾಂಕ್ ಚುನಾವಣೆಯ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಬಾಲಚಂದ್ರ ಜಾರಕಿಹೊಳಿಯವರಿಗೆ ನಿಮ್ಮೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಲವು ಸಂಘಗಳು ನನ್ನ ಬೆಂಬಲಕ್ಕೆ ನಿಂತಿವೆ ನಿಮ್ಮ ವಿಶ್ವಾಸಕ್ಕೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಮಹಾಂತೇಶ್ ದೊಡ್ಡಗೌಡರ್ ಅವರು ಮಾತನಾಡಿ ನನ್ನ ಮೇಲೆ ಇರುವ ಪ್ರೀತಿ ಗೌರವವನ್ನು ವಿಕ್ರಂ ಧನಿ ಅವರ ಮೇಲು ಇರಲಿ ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ನಾವು ಜಂಟಿಯಾಗಿ ಶ್ರಮಿಸುತ್ತೇವೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ವಿಕ್ರಂ ಇನಾಮ್ದಾರ್ ಅವರನ್ನು ಗೆಲ್ಲಿಸಿ ಎಂದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ನೀಲಪ್ಪ ನೇಗಿನಾಳ, ಗ್ರಾಮ ಪಂಚಾಯತ ಅಧ್ಯಕ್ಷ ಗುರುಸಿದ್ದಪ್ಪ ದಾಸನಕೊಪ್ಪ, ಎಲ್ಲಪ್ಪ ಕೊಟಬಾಗಿ, ಸಂಗಯ್ಯ ದೇಗಲೊಳ್ಳಿಮಠ ಉಳವಪ್ಪ ಉಳ್ಳೆಗಡ್ಡಿ ಹಾಗೂ ಹಿರೇನಂದಿಹಳ್ಳಿ, ಚಿಕ್ಕನಂದಿಹಳ್ಳಿ ಮತ್ತು ಜಮಳೂರ ಮೂರು ಊರುಗಳ  ಸದಸ್ಯರು ಗುರು ಹಿರಿಯರು ಸಂಘದ ಕಾರ್ಯಕರ್ತರು
ಮೊದಲಾದವರು ಉಪಸ್ಥಿತಿ ಇದ್ದರು.

ವರದಿ : ಎಂ ಎಂ ರಾಜಾಬಾಯಿ, ಚನ್ನಮ್ಮನ ಕಿತ್ತೂರು

Leave a Comment

और पढ़ें

Cricket Live Score

और पढ़ें

error: Content is protected !!