Search
Close this search box.

ಕಲಾ ಸಮನ್ವಯ – ಕೊಡಗಿನ ಸೈನಿಕ ಶಾಲೆಯಲ್ಲಿ ಕಲಾ ಏಕೀಕರಣ ಕಾರ್ಯಾಗಾರ

ಕುಶಾಲನಗರ, ಆಗಸ್ಟ್ ೧೬ ಸೈನಿಕ ಶಾಲೆ ಕೊಡಗಿನ ರಾಧಾಕೃಷ್ಣನ್ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 (NEP 2020) ಅನುಸಾರ ಎನ್‌ ಡಿ ಎ ಪ್ರೇರಣಾ ಕ್ಲಬ್ ವತಿಯಿಂದ ಕಲಾ ಏಕೀಕರಣ (Art Integrated) ಕುರಿತ ಕಾರ್ಯಾಗಾರವನ್ನು ಆಯೋಜಿ ಸಲಾಯಿತು. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಾಲೆಯ ಪ್ರಥಮ ಮಹಿಳೆ ಶ್ರೀಮತಿ ದಿವ್ಯಾ ಸಿಂಗ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಶಾಲೆಯ 11ನೇ ತರಗತಿಯ ಒಟ್ಟು 65 ವಿದ್ಯಾರ್ಥಿಗಳು ಹಾಗೂ 05 ವಿದ್ಯಾರ್ಥಿನಿಯರು ಕಾರ್ಯಾಗಾರದಲ್ಲಿ ಸಕ್ರೀಯವಾಗಿ ಪಾಲ್ಗೊಂಡ್ಡಿದರು. ಶಾಲೆಯ ಕಲಾ ಶಿಕ್ಷಕಿ ಭೀಮಾಂಬಿಕಾ ಜಿ. ಭೋವಿ ಅವರು ಕಾರ್ಯಾಗಾರದ ನಿರ್ವಹಣೆಯಲ್ಲಿ ಮಹತ್ವದ ಪಾತ್ರವಹಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಶ್ರೀ ದಿವ್ಯಾಸಿಂಗ್ ರವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಕಲೆಯ ಮಹತ್ವವನ್ನು ಕುರಿತು ವಿವರಿಸುವುದರೊಂದಿಗೆ, ವಿದ್ಯಾರ್ಥಿಗಳಿಗೆ ಕಲೆಯೊಂದಿಗೆ ಅಧ್ಯಯನವನ್ನು ಹೇಗೆ ಊರ್ಜಿಸಿಕೊಳ್ಳಬಹುದು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಕಲೆಯ ಮೂಲಕ ಸೃಜನಶೀಲತೆ, ವ್ಯಕ್ತಿತ್ವ ವಿಕಾಸ ಹಾಗೂ ಅಧ್ಯಯನದ ಮೇಲಿನ ಆಸಕ್ತಿ ಹೆಚ್ಚಿಸಬಹುದೆಂಬುದನ್ನು ಸಂಪನ್ಮೂಲ ವ್ಯಕ್ತಿಯು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.

ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ತಮ್ಮ ಸೃಜನ ಶೀಲತೆ ಹಾಗೂ ಕಲ್ಪನೆಯನ್ನಾಧರಿಸಿದ ಆಕರ್ಷಕ ಚಿತ್ರಗಳನ್ನು ರಚಿಸುವುದರ ಮೂಲಕ ಕಾರ್ಯಾಗಾರದ ಮೆರುಗನ್ನು ಹೆಚ್ಚಿಸಿದರು.

ಕಾರ್ಯಕ್ರಮವನ್ನು ಎನ್‌ ಡಿ ಎ ಕ್ಲಬ್ ಮೇಲ್ವಿಚಾ ರಕರಾದ  ಶ್ರೀಮತಿ  ಶ್ರೀಲೇಖಾ ವಿ ಎಸ್ ಹಾಗೂ ದಾದಾ ಕೆ ಕುಸನಾಳೆ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ,  ಉಪಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮದ್ ಷಾಜಿ, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್, ಹಿರಿಯ ಶಿಕ್ಷಕ ಶ್ರೀ ವಿಬಿನ್ ಕುಮಾರ್, ರವರು ಉಪಸ್ಥಿತರಿದ್ದು, ತಮ್ಮ ಪ್ರೇರಣದಾಯಕ ಮಾತುಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ವರದಿ : ಪ್ರಸಾದ ಎಚ್‌ ಎಮ್

Leave a Comment

error: Content is protected !!