ಬೈಲಹೊಂಗಲ : ನಗರದ ಕಿತ್ತೂರ ರಾಣಿ ಚನ್ನಮ್ಮ ಸಮಾಧಿ ರೋಡ್ ಹತ್ತೀರ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಾಲಯ ಎದುರುಗಡೆ ಆಚರಿಸಲಾಯಿತು. ಬೆಳಗಾವಿ ಜಿಲ್ಲಾ ಅಧ್ಯಕ್ಷರು ಪ್ರಮೋದಕುಮಾರ ವಕ್ಕುಂದಮಠ ಧ್ವಜಾರೋಹಣ ನೆರವೇರಿಸಿ ವಿಶ್ವದಲ್ಲೆ ದೊಡ್ಡ ಸಂವಿಧಾನ ಹೊಂದಿದ ರಾಷ್ಟ್ರ ಸಾರ್ವಭೌಮ,ಜ್ಯಾತ್ಯಾತೀತ, ಗಣರಾಜ್ಯ ಹೊಂದಿದ ರಾಷ್ಟ್ರ, ಹಲವು ಧರ್ಮ,ಜಾತಿಗಳನ್ನೊಳಗೊಂಡ ರಾಷ್ಟ್ರ, ನಾವು ಭಾರತಿಯರೆನ್ನಲು ಹೆಮ್ಮೆ ಪಡೋಣ.
ನಮ್ಮ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಶ್ರೇಷ್ಠ ಸಂವಿಧಾನವೇ ಆಧಾರ. ಸಂವಿಧಾನದ ಸದಾಶಯಗಳನ್ನು ಪಾಲಿಸುವ ಜೊತೆಗೆ ಭಾರತದ ಏಕತೆ, ವೈವಿಧ್ಯತೆ, ಅನನ್ಯತೆಗಳನ್ನು ಎತ್ತಿಹಿಡಿಯೋಣ.
ಈ ಸಂದರ್ಭದಲ್ಲಿ ವ್ಹಿ ಹಿಂ ಪ್ ಬೈಲಹೊಂಗಲ ತಾಲೂಕ ಅಧ್ಯಕ್ಷರು ಕಾಶೀನಾಥ ಬಿರಾದಾರ, ಬೆಳಗಾವಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ವಿವೇಕಾನಂದ ಪೂಜಾರ್, ಧರ್ಮಚಾರ್ಯ ಸಂಪರ್ಕ ಪ್ರಮುಖ ದಯಾನಂದ ಗೆಜ್ಜಿ,ವ್ಹಿ ಹಿಂ ಪ್ ತಾಲೂಕ ಕಾರ್ಯದರ್ಶಿ ಅಶೋಕ ಸವದತ್ತಿ,ವಿಧಿ ಪ್ರಕೋಷ್ಟ ಪ್ರಮುಖ ವಿಜಯ ಪತ್ತಾರ (ವಕೀಲರು )ನಗರ ಕಾರ್ಯದರ್ಶಿ ರಾಜಶೇಖರ್ ಹರಕುಣಿ ಕಾರ್ಯಕರ್ತರು, ಸಂಪರ್ಕ ಪ್ರಮುಖ ರಾಜು ಬೋಂಗಳೇ, ವಿಶಾಲ ಹೋಮಕರ, ಶಿವನಗೌಡ ಬರಬಳ್ಳಿ ಸಾರ್ವಜನಿಕರು ಉಪಸ್ಥಿತರಿದ್ದರು.











