
ಚನ್ನಮ್ಮನ ಕಿತ್ತೂರು ಉತ್ಸವ-2025 : ಪೂರ್ವಭಾವಿ ಸಭೆ
ಬೆಳಗಾವಿ ಜಿಲ್ಲೆ : ಚನ್ನಮ್ಮನ ಕಿತ್ತೂರು ಉತ್ಸವ-2025ರ ಕಾರ್ಯಕ್ರಮವನ್ನು ಅಚ್ವುಕಟ್ಟಾಗಿ ಆಯೋಜಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು 2025 ನೇ ಸಾಲನ ಕಿತ್ತೂರು ಉತ್ಸವವನ್ನು ಆಚರಿಸುವುದಕ್ಕಾಗಿ ಚರ್ಚಿಸಲು ಹಾಗೂ ಸಲಹೆ ಪಡೆಯಲು ಸಭೆ ಜರುಗಿಸುವ ಕುರಿತು. ಶ್ರೀ ಪ್ರವೀಣ ಜೈನ ಮಾನ್ಯ ಉಪವಿಭಾಗಾಧಿಕಾರಿಗಳು ಬೈಲಹೊಂಗಲ ಇವರ ಪತ್ರ ಸಂಖ್ಯೆ:ಕಿತ್ತೂರ ಉತ್ಸವ/ವಿವ-01/2025, ದಿನಾಂಕ : 29-09-2025. ಭಾರತ ಸ್ವಾತಂತ್ರ್ಯ ಹೋರಾಟದ ವೀರರಾಣಿ ಕಿತ್ತೂರ ಚೆನ್ನಮ್ಮನವರ ಗೌರವಾರ್ಥ ಪ್ರತಿ ವರ್ಷ ಅಕ್ಟೋಬರ-23 ರಿಂದ ಮೂರು ದಿನಗಳ ಕಾಲ ಕಿತ್ತೂರಿನ ಕೋಟೆ ಆರವರಣದಲ್ಲಿ ಬೆಳಗಾವಿ ಜಿಲ್ಲಾಡಳತದಿಂದ ಕಿತ್ತೂರ ಉತ್ಸವವನ್ನು ಆಚರಿಸಲಾಗುತ್ತಿದೆ. ಹಾಗೂ ಈ ವರ್ಷವೂ ಕೂಡಾ “ ಕಿತ್ತೂರು ಉತ್ಸವವನ್ನು ಆಚರಿಸುವ ವಿಷಯದಲ್ಲಿ ಚರ್ಚಿಸಲು ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆಯಲು ಮಾನ್ಯ ಶ್ರೀ ಸತೀಶ ಲ ಜಾರಕಿಹೊಳಿ, ಮಾನ್ಯ ಲೋಕೋಪಯೋಗಿ ಸಚಿವರು ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬೆಳಗಾವಿ ಇವರ