ಚನ್ನಮ್ಮನ ಕಿತ್ತೂರು : ರಾಣಿ ಚೆನ್ನಮ್ಮ ಜಿ ಅವರ ಐತಿಹಾಸಿಕ ಪುಣ್ಯಭೂಮಿ ಕಿತ್ತೂರು ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ಚನ್ನಮ್ಮನ ಕಿತ್ತೂರು ರಾಜ್ಯಾಧ್ಯಕ್ಷರಾದ ಮಹಾಂತೇಶ್ ಕರಬಸನ್ನವರ ನೇತೃತ್ವದಲ್ಲಿ ಆಚರಿಸಲಾಯಿತು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಹಾಂತೇಶ್ ಅವರು ಮಾತನಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತ್ಯಾಗ ಮತ್ತು ಬಲಿದಾನ ಯುವ ಪೀಳಿಗೆಗೆ ಮಾದರಿಯಾಗಿದೆ ಅವರನ್ನು ಸ್ಮರಿಸಿ ನಾವು ದೇಶಕ್ಕಾಗಿ ಏನನ್ನಾದರೂ ಕೊಡುಗೆ ನೀಡಬೇಕು ಎಂದರು.
ಪತ್ರಕರ್ತ ಎಂ ಎಂ ರಾಜೀಬಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದಯವಿ ಪುರುಷ ಸೂರ್ಯ ಚಂದ್ರ ಇರುವವರೆಗೂ ಈ ಭೂಮಿ ಇರುವವರೆಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು ಜನ ಮಾನಸದಲ್ಲಿ ಅಜರಾಮರವಾಗಿ ಉಳಿಯುತ್ತದೆ ಸ್ವಾಭಿಮಾನದ ಪ್ರತಿಕವಾದ ರಾಯಣ್ಣ ತನ್ನ ತಾಯ್ನಾಡಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಮಹಾ ಸ್ವಾಭಿಮಾನಿ ಅಂತಹ ದೇಶಪ್ರೇಮಿಯ ಬಲಿದಾನದ ದಿನದಂದು ಅವನ ಸಮಾಧಿಗೆ ಸಾವಿರಾರು ಜನ ಆಗಮಿಸಿ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.
ಅವನ ಹೆಸರಿನಲ್ಲಿರುವ ನಂದಗಡ ಹಾಗೂ ಸಂಗೊಳ್ಳಿ ರಾಯಣ್ಣನ ಪುತ್ತೂರು ಸಂಗೊಳ್ಳಿಯಲ್ಲಿರುವ ಮ್ಯೂಸಿಯಂ ಗಳು ಇಂದು ಜನಪ್ರಿಯ ಪ್ರವಾಸಿ ತಾಣಗಳಾಗಿವೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿರೂಪವಾಗಿದ್ದು ಈ ನಾಡಿನ ಬಡವರ ದೀನದಲಿತರ ಅಭಿವೃದ್ಧಿಗಾಗಿ ಹೋರಾಡುತ್ತಿದ್ದಾರೆ ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ರಾಜ್ಯಾಧ್ಯಕ್ಷರು ಮಹಾಂತೇಶ್ ಕರಬಸನ್ನವರ್. ಉಪಾಧ್ಯಕ್ಷ ಸತೀಶ್ ನಾಯ್ಕರ್ ಕಾರ್ಯದರ್ಶಿ ಆನಂದ್ ಪಾಟೀಲ್ ಖಜಾಂಚಿ ರಾಜಪ್ಪ ಕೋಟಗಿ ಸರಿದಂತೆ ಇನ್ನೂ ಅನೇಕ ರಾಯಣ್ಣ ಸಂಘಟನೆಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಸಲ್ಲಿಸಿದರು.
ಗಡಿನಾಡು ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ್ ಬಂಗಿ ಕಲ್ಲಪ್ಪ ಆಗಶಿಮನಿ ರಾಯಣ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.











