ವರದಿ : ಎಂ ರಾಜಿಬಾಯಿ, ರಾಜ್ಯ ಉಪಸಂಪಾದಕರು
ಚನ್ನಮ್ಮನ ಕಿತ್ತೂರು : ಹೋರಾಟದ ಪುಣ್ಯಭೂಮಿ ರಾಣಿ ಚೆನ್ನಮ್ಮಾಜಿಯ ಕಿತ್ತೂರು ಪಟ್ಟಣದ ಚನ್ನಾಪುರ ಗಿರಿಯಾಲ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ ಏಳನೇ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮಗಳು ರಥೋತ್ಸವ ಮಹಾಪ್ರಸಾದ ಹಾಗೂ ಜೀ ಕನ್ನಡ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮಗಳು ಜರುಗಿದವು.
ಸಹಸ್ರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸೂರ್ಯದೇವನ ಕೃಪೆಗೆ ಪಾತ್ರರಾದರು ತಮ್ಮ ಇಷ್ಟಾರ್ಥಗಳು ಈಡೇರಿದಕ್ಕಾಗಿ ಸೂರ್ಯದೇವನಿಗೆ ತಮ್ಮ ಹರಕೆಗಳನ್ನು ಸಮರ್ಪಿಸಿದರು ದೇವಾಲಯದ ಸಂಸ್ಥಾಪಕರಾದ ಸುರೇಶ್ ಕಲಾಲ್ ಅವರು ಬಂದ ಭಕ್ತರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಕಲ ವ್ಯವಸ್ಥೆಗಳನ್ನು ಕಲ್ಪಿಸಿದ್ದರು ನಮ್ಮ ವಾಹಿನಿ ಯೊಂದಿಗೆ ಮಾತನಾಡುತ್ತಾ ಕೆಲ ಸಮಯ ಭಾವುಕರಾಗಿ ಕಣ್ಣೀರನ್ನು ಸುರಿಸಿದರು.

ಸೂರ್ಯದೇವನ ದೇವಸ್ಥಾನ ನಿರ್ಮಾಣಕ್ಕೆ ಕೋನ ರ್ಕದಲ್ಲಿ ಇರುವ ಸೂರ್ಯದೇವನ ದೇವಾಲಯದಲ್ಲಿ ನಾನು ಸಂತಾನ ಪ್ರಾಪ್ತಿಗಾಗಿ ಹರಕೆ ಮಾಡಿಕೊಂಡಿದ್ದೆ ನನಗೆ ಸಂತಾನ ಪ್ರಾಪ್ತಿ ಆಯಿತು ನಾನು ಅದರ ದ್ಯೋತಕವಾಗಿ ಚನ್ನಾಪುರದಲ್ಲಿ ನನ್ನ ಸ್ವಂತ ಜಮೀನಿನಲ್ಲಿ ದೇವಾಲಯವನ್ನು ನಿರ್ಮಿಸಿದ್ದೇನೆ ನನ್ನಂತೆ ಹಲವಾರು ಜನ ಸಂತಾನ ಭಾಗ್ಯ ಇಲ್ಲದವರು ಇಲ್ಲಿ ಪೂಜೆ ಸಲ್ಲಿಸಿ ಸಂತಾನ ಪ್ರಾಪ್ತಿ ಹೊಂದಿದ್ದಾರೆ ಹಾಗೂ ಹಲವು ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುವಲ್ಲಿ ಈ ದೇವಸ್ಥಾನ ಪ್ರಸಿದ್ಧಿ ಪಡೆದಿದೆ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರೂ











