ಸಾಧನೆಗೆ ಸಾಧಕನ ಪರಿಶ್ರಮ ಮತ್ತು ಗುರುವಿನ ಆಶೀರ್ವಾದ ಇದ್ದರೆ ಯಾವುದು ಅಡ್ಡಿ ಬರುವುದಿಲ್ಲ : ಡಾ ಮಹಾದೇವ್ ಮೇದಾರ

ಖಾನಾಪುರ : ತಾಲೂಕಿನ ಗಂದಿಗವಾಡ ಗ್ರಾಮದ ಜಿ ಇ ಸೊಸೈಟಿಯ ಪರಮ ಜ್ಯೋತಿ ಪ್ರೌಢಶಾಲೆಯ 2003 ಮತ್ತು 2004ನೇ ಸಾಲಿನ ಎಸ್ ಎಸ್ ಎಲ್ ಸಿ ಬ್ಯಾಚ್ನ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮೇಳನವನ್ನು ಆಯೋಜಿಸಲಾಗಿತ್ತು ಸ್ನೇಹ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಿದ ವಿದ್ಯಾರ್ಥಿಗಳು ತಮಗೆ ಕಲುಸಿದ ಗುರುಗಳಿಗೆ ಬೃಹತ್ ಸಮಾರಂಭ ಏರ್ಪಡಿಸಿ ಫಲ ಪುಷ್ಪ ನೀಡಿ ಸನ್ಮಾನಿಸಿದರು.

ಜೀ ಈ ಸೊಸೈಟಿಯ ಅಧ್ಯಕ್ಷ ಉಮೇಶ್ ಮೂಲಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಪರಮಪೂಜ್ಯ ಮೃತ್ಯುಂಜಯ ಸ್ವಾಮೀಜಿ ಹಿರೇಮಠ ಅವರು ಸಾನಿಧ್ಯ ವಹಿಸಿದ್ದರು ಬೆಳಗಾವಿ ಬಿಇಓ ಕಚೇರಿಯ ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಮಹಾದೇವ ಮೇದಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು ಪರಮ ಜ್ಯೋತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾ ಯರಾದ ಎಸ್ ಎಂ ನಾಯಕ್ ಉಪಸ್ಥಿತರಿದ್ದರು ಗುರುಗಳಾದ ಪಿಎಸ್ ಹುಲಮನಿ ಪಿ ವೈ ಪಾಟೀಲ್ ಸುಭಾಷ್ ಕುಲಕರಣಿ ಎಲ್ ಎಸ್ ಕುಂದೇಕಾರ್ ಬಾಬು ಮೂಲಿಮನಿ ಬಿವಿ ಕರವಿ ನವರ್ ರುದ್ರಪ್ಪ ಕೊಲ್ಕರ್ ಹಿಟ್ಟಿನ ಮೇಡಂ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ನಿವೃತ್ತ ಗುರುಗಳಾದ ಪಿ ವೈ ಪಾಟೀಲ್ ಅವರು ಮಾತನಾಡಿ ಜೀವನದಲ್ಲಿ ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿ ಒಳ್ಳೆಯ ಸ್ನೇಹಿತರಲ್ಲಿ ಬೆರೆಯಿರಿ ಸಂತೋಷವನ್ನು ಹಂಚಿಕೊಂಡರೆ ಅದು ಹೆಚ್ಚಾಗುತ್ತದೆ ದುಃಖವನ್ನು ಹಂಚಿಕೊಂಡರೆ ಅದು ಕಡಿಮೆಯಾಗುತ್ತದೆ ಇವೆರಡು ಅವಶ್ಯಕವಾಗಿದ್ದು ಸ್ನೇಹ ಸಮ್ಮೇಳನದಿಂದ ಈ ಸೌಭಾಗ್ಯ ಕೂಡಿಬಂದಿದೆ ಎಂದರು ಕ್ಷೇತ್ರ ಸಮನ್ವ ಅಧಿಕಾರಿ ಡಾ ಮಹದೇವ್ ಮೇದಾರ್ ಅವರು ಮಾತನಾಡಿ ಸಾಧನೆಗೆ ಯಾವುದು ಅಡ್ಡಿ ಬರುವುದಿಲ್ಲ ಸಾಧಕನ ಪರಿಶ್ರಮ ಗುರುವಿನ ಆಶೀರ್ವಾದ ಇವೆರಡೂ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ನಾನೇ ಉದಾಹರಣೆ ಎಂದರು.

ಕಾರ್ಯಕ್ರಮಕ್ಕೆ ಅಮೆರಿಕಾ ಸೇರಿದಂತೆ ಬೇರೆಬೇರೆ ದೇಶ ರಾಜ್ಯಗಳಲ್ಲಿ ಕಾರ್ಯನಿರ್ಸುತ್ತಿರುವ ಸ್ನೇಹಿತರು ಆಗಮಿಸಿದ್ದು ವಿಶೇಷವಾಗಿತ್ತು. ಕುಮಾರ್ ಕಡೆಮನಿ ನಿಯಾಜ್ ನೂರ್ ಅಹಮದ್ ಸೈಯದ್ ಜಂಟಿಯಾಗಿ ಕಾರ್ಯಕ್ರಮ ನಿರುಪಿಸಿದರು

Leave a Comment

और पढ़ें

Cricket Live Score

और पढ़ें

error: Content is protected !!