ಭೂದೇವಿಯ ಮಡಿಲಲ್ಲಿ ಬೀಜಗಳನ್ನು ಬಿತ್ತುವ ರೈತರು ಪವಿತ್ರ ಕೂರಿಗೆ (ಕೂರಿಗೆಮ್ಮ್) ಶ್ರದ್ದಾ ಭಕ್ತಿಯಿಂದ ಪೂಜಿಸುತ್ತಾರೆ

ಸಮಯವಾಣಿ ಡೆಸ್ಕ್ : ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನ ಗ್ರಾಮದಲ್ಲಿ ರೈತರು ಶ್ರದ್ದಾ ಭಕ್ತಿಯಿಂದ ಕೂರಿಗೆ ಪೂಜೆಯನ್ನು ನೆರವೇರಿಸಿದರು. ಪ್ರತಿ ವರ್ಷ ಬಿತ್ತನೆ ಕಾರ್ಯ ಮುಗಿದ ನಂತರ ಆಷಾಢ ಮಾಸದಲ್ಲಿ  ಮಂಗಳವಾರ ಹಾಗೂ ಶುಕ್ರವಾರ ಭೂಮಿತಾಯಿಯ ಸ್ವರೂಪವಾದ ಕೂರಿಗೆಗೆ ಪೂಜೆ ಮಾಡುವುದು ಮೊದಲಿನಿಂದಲೂ ನಡೆದು ಬಂದ ಪದ್ಧತಿಯಾಗಿದೆ. 

ಭೂದೇವಿಯ ಮಡಿಲಲ್ಲಿ ಬಿತ್ತನೆ ಮಾಡಿದ ಕೂರಿಗೆ (ಬಿತ್ತನೆಗೆ ಪ್ರಮುಖವಾಗಿ ಬಳಸುವ ಸಲಕರಣೆ) ಕೂರಿಗೆಗೆ ಹೊಸ ಸೀರೆ ಉಡಿಸಿ, ತಾಳಿ ಮತ್ತು ಆಭರಣಗಳನ್ನು ಹಾಕಿ ಮುತ್ತೈದೆ ತರ ಶೃಂಗಾರ ಮಾಡುತ್ತರೆ. ಆರತಿ ಬೆಳಗಿ ಉಡಿ ತುಂಬುವವರು. ಕಡುಬು, ಹೋಳಿಗೆ, ಹುಗ್ಗಿ ಸಿಹಿ ಪದಾರ್ಥಗಳಿಂದ ನೈವೇದ್ಯ ಮಾಡಿ ಶ್ರದ್ದಾ ಭಕ್ತಿಯಿಂದ ರೈತರು ಪೂಜೆ ಸಲ್ಲಿಸುತ್ತಾರೆ. ರೈತನಿಗೆ ವರ್ಷವಿಡೀ ಹೊಲಗದ್ದೆ ಇತರೆ ಕೆಲಸಗಳ ಸಹಾಯ ಮಾಡಿದ ಬಡಿಗ,‌ ಕಂಬಾರ, ರೈತ ಕೂಲಿ ಕಾರ್ಮಿಕರು ರೈತ ಮಿತ್ರರೆಲ್ಲರನ್ನೂ ಹಾಗೂ ಅಕ್ಕ ಪಕ್ಕದ ಮನೆಯರೆಲ್ಲ ಸೇರಿ ಸಿಹಿ ಭೋಜನ ಸವಿಯುತ್ತಾರೆ.

ಇತ್ತೀಚಿಗೆ ಬಿತ್ತನೆ ಕಾರ್ಯ ಮಾಡಲು ಯಂತ್ರಗಳ ಬಳಕೆ ಹೆಚ್ಚಾಗಿದ್ದರಿಂದ ಕೂರಿಗೆಗೆ ಬಳಕೆ ವಿರಳವಾಗಿದೆ. ಹಿರೇನಂದಿಹಳ್ಳಿ ಹಾಗೂ ಸುತ್ತ ಮುತ್ತು ಗ್ರಾಮಗಳಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ವಾಡಿಕೆಗಿಂದ ಸ್ವಲ್ಪ ಹೆಚ್ಚಾಗಿ ಆಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಭೂಮಿ ಬಿತ್ತನೆಗೆ ಮಳೆರಾಯ ಅನುಕೂಲ ಕಲ್ಪಿಸಿದ್ದರಿಂದ ಬಿತ್ತನೆ ಕಾರ್ಯ ಬಹುತೇಕ ಮುಕ್ತಾಯವಾಗಿದೆ. ರೋಹಿಣಿ ಮಳೆ ಉತ್ತಮವಾಗಿ ಸುರಿದಿರುವುದರಿಂದ ಜೂನ್ ಮೊದಲನೆ ವಾರದಿಂದಲೆ ಬಿತ್ತನೆ ಕಾರ್ಯ ಪ್ರಾರಂಭವಾಗಿತ್ತು.

ಬೀಜ, ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆಯ ನಡುವೆಯೂ ರೈತ ಬಿತ್ತನೆಗೆ ಮಾಡಿ ಮುಗಿಸಿದ್ದಾನೆ. ಮಳೆಯನ್ನೇ ನಂಬಿ ಬದುಕುತ್ತಿರುವ ಅನ್ನದಾತ ಈ ವರ್ಷವಾದರೂ ಒಳ್ಳೆಯ ಬೆಳೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದಾನೆ. ಪ್ರಮುಖ ಬೆಳೆಗಳಾದ ಹತ್ತಿ, ಜೋಳ, ಸಾವಿ,  ಸೋಯಾಬಿನ್,  ಮುಂತಾದ ಬೀಜಗಳನ್ನು ಬಿತ್ತನೆ ಮಾಡಿರುವ ರೈತರು ಬೆಳೆಯ ಸಿರಿಯು ಈಗ ಕಾಣುತ್ತಿದೆ. ಭೂದೇವಿಯು ಹಸಿರುನಿಂದ ಕಂಗೋಳಿಸುತ್ತಿದ್ದು ಸರಿಯಾಗಿ ಫಸಲು ಬಂದರೆ ರೈತರ ಜೀವನ ಹಸನಾಗಲಿದೆ. ಈ ವರ್ಷ ಸೋಯಾಬಿನ್ ಬೀಜದಲ್ಲಿ ಕಲಬೆರಕೆ ಇರುವುದರಿಂದ ಕೆಲವು ರೈತರು ಎರಡು ಬಾರಿ ಬಿತ್ತನೆ ಮಾಡುವ ಸಂದರ್ಭ ಬಂತು.

ಈ ದಿನ‌ ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣಿನಿಂದ ಮಾಡಿದ ಎತ್ತುಗಳಿಗೆ ಅಲಂಕರಿಸಿ ಹಬ್ಬವನ್ನು ಆಚರಿಸಲಾಗುವುದು

ಮಣ್ಣೆತ್ತಿನ ಅಮವಾಸ್ಯೆ ದಿನದಿಂದ ಮಣ್ಣಿನಿಂದ ಮಾಡಿದ ಎತ್ತುಗಳ ಪ್ರತಿಮೆಗಳಿಗೆ ಸಿಂಗರಿಸಿ ಪೂಜೆ ಮಾಡುತ್ತಾರೆ. ಈ ಸಂಭ್ರಮವನ್ನು ಆಚರಿಸಲು ರೈತರು ಹೊಲಕ್ಕೆ ಹೋಗಿ, ಹೊಲದ ಮಣ್ಣು ತಂದು ಕಪ್ಪು ಮಣ್ಣಿನಿಂದ ಜೋಡಿ ಎತ್ತುಗಳನ್ನು ತಯಾರಿಸಿದ. ಎತ್ತುಗಳನ್ನು ಕೂರಿಗೆಮ್ಮ ಪೂಜೆಯ ದಿನ ಮೊದಲಿನಿಂದಲೂ ‌ಮಾಡಿದ ಮಣ್ಣಿನ  ಎತ್ತುಗಳನ್ನು  ಕೂರಿಗೆ ಮುಂದೆ ಇಟ್ಟು ಅವುಗಳಿಗೆ ಸಿಂಗಾರ ಮಾಡಿ ಪೂಜಿಸಲಾಗುವುದು. ನಂತರ ತಮ್ಮ ಜಮೀನಿನಲ್ಲಿ ಆ ಎತ್ತುಗಳನ್ನು ಇಟ್ಟು ಭೂತಾಯಿ ಹಾಗೂ ಎತ್ತುಗಳು ತಮ್ಮ ಬೆಳೆಯನ್ನು ರಕ್ಷಣೆ ಮಾಡಿ ಎಂದು ಬೇಡಿಕೊಳ್ಳುವುದು ವಾಡಿಕೆ. ಜೊತೆಗೆ ಮಣ್ಣಿನ ಹಾಗೂ ಆರಾಧನೆಯನ್ನು ಕೂಡ ಮಾಡಲಾಗುವುದು. ಮಣ್ಣಿನಿಂದ ಮಾಡಿದ ಗಣಪತಿ, ನಾಗಪ್ಪನ ಹಾವು ಗಣೇಶ ಚತುರ್ಥಿ ಮತ್ತು ನಾಗರಚೌತಿ ದಿನ ಪೂಜಿಸುವಂತೆ ರೈತ ಮಣ್ಣು ಹಾಗೂ ರೈತನ ಜೀವನದಲ್ಲಿ ಬರುವ ಪ್ರತಿಯೊಂದು ವಸ್ತುವನ್ನು ಪೂಜಿಸುತ್ತಾನೆ ಅದನ್ನೇ ಹಬ್ಬ ಆಚರಿಸುತ್ತಾನೆ.

ಇನ್ನೊಂದು ವಿಷಯ ಕೂರಿಗೆ ಬಳದ ಆಗಲಿ ಕಡದ ಆಗಲಿ ಬಿತ್ತುವ ಸಮಯದಲ್ಲಿ ಕೂರಿಗೆ ಮುರಿದರೆ ಮಣ್ಣು ಬಿರಸಿತ್ತು ಮುರಿತು, ಬೀಜಗಳು ಹುಟ್ಟಲಿಲ್ಲ ಅಂದರೆ ಕಳಪೆ ಬೀಜ, ಇಲ್ಲ ಸರಿಯಾಗಿ ಹಸಿ ಇರಲಿಲ್ಲ, ಇಲ್ಲ ಬಿತ್ತವನು ಸರಿಯಾಗಿ ಬಿತ್ತಿಲ್ಲ  ಬಿತ್ತನೆಯಲ್ಲಿ ಎನೆ ಸಮಸ್ಯೆ ದೇವರ ನಮಗೆ ಆಶಿರ್ವದಿಸಿಲ್ಲ ಹೀಗೆ ಬೇರೆಯವರ ಮೇಲೆ ಅಪವಾದಿಸುತ್ತನೆ ಆದರೆ ತನ್ನ ತಾಯಿ ಕೂರಿಗೆಮ್ಮ ಎಂದು ಸರಿಯಲ್ಲ ಕೂರಿಗೆ ಹಾಗೂ ಎತ್ತುಗಳ ಮೇಲೆ ಅಪವಾದಿಸುವದಿಲ್ಲ ಇಂತಹ ಎಲ್ಲ ರಾಷ್ಟ್ರದ ಅನ್ನದಾತರಿಗೆ ನಮಿಸಿ “ಅನ್ನದಾತ ಸುಖಿನೋಭವಂತು”

Leave a Comment

और पढ़ें

Cricket Live Score

और पढ़ें

error: Content is protected !!