Gen Z protest : ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ದೇಶ ಬಿಟ್ಟು ಪಲಾಯನ ಸಾಧ್ಯತೆ

ಸಮಯವಾಣಿ ನ್ಯೂಸ್ : ನೇಪಾಳ ಕಠ್ಮಾಂಡು‌ ನಗರದಲ್ಲಿ ಒಂದೇ ಒಂದು ಕರೆಗೆ ಓಗೊಟ್ಟ ನೇಪಾಳದ ಯುವಕರು ಹಿಂಸಾತ್ಮಕ ಪ್ರತಿಭಟನೆ ನಡೆಸಿ ಪ್ರಧಾನಿ ರಾಜೀನಾಮೆಗೆ ವರೆಗೆ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾಗಿದ್ದು ಅಲ್ಲಿನ ಕೇಂದ್ರ ಸರ್ಕಾರ, ಸಾಮಾಜಿಕ ಜಾಲತಾಣವನ್ನು ಬ್ಯಾನ್ ಮಾಡಲು ನಿರ್ಧರಿಸಿತ್ತು. ಇದು ಪ್ರತಿಭಟನೆಗೆ ಮೂಲ ಕಾರಣ. ಆದರೆ, ಈ ಪ್ರತಿಭಟನೆಗೆ ಪುಷ್ಟಿ ನೀಡಿದ್ದು ಆ 36 ವರ್ಷದ ವ್ಯಕ್ತಿ ಸುದಾನ್ ಗುರಂಗ  ಒಂದೇ ಒಂದು ನೀಡಿದ ಕರೆ ಲಕ್ಷಾಂತರ ಯುವಜನರು ಒಗ್ಗಟ್ಟು.

ಅಷ್ಟಕ್ಕೂ ಈ ಸುದಾನ್ ಗುರುಂಗ್ ಯಾರು?

ಸುದಾನ್ ಗುರುಂಗ್ “ಹಮಿ ನೇಪಾಳದ” ಸಂಘಟನೆ ‌ಅದ್ಯಕ್ಷ ಈಗ ನೇಪಾಳದಲ್ಲಿ ಯೂತ್ ಐಕಾನ್. ಈತ, ನೇಪಾಳದ ಒಬ್ಬ ಪದವೀಧರ. ಇವೆಂಟ್ ಮ್ಯಾನೇಜರ್ ಆಗಿ ತನ್ನದೇ ಒಂದು ಸ್ವಂತ ಕಂಪನಿಯನ್ನು ನಡೆಸಿಕೊಂಡಿದ್ದು. ಪತ್ನಿ ಮಗಳೊಂದಿಗೆ ಆರಾಮಾಗಿ ಜೀವನ ಸಾಗಿಸುತ್ತಿದ್ದ. ಆದರೆ, 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪ ಈತನ ಜೀವನವನ್ನೇ ಬದಲಿಸಿತು. ಆ ಭೂಕಂಪದಲ್ಲಿ ಆತ ತನ್ನ ಪುತ್ರಿಯನ್ನು ಕಳೆದುಕೊಂಡ.

ಆ ದುಃಖದಿಂದ ಚೇತರಿಸಿಕೊಂಡಾದ ನಂತರ ಆತ ಭೂಕಂಪಕ್ಕೆ ಬಲಿಯಾದವರ ಕುಟುಂಬಸ್ಥರಿಗೆ ಸರ್ಕಾರದಿಂದ ನೆರವು ಒದಗಿಸಿಕೊಡುವ ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ. ಅದೇ ಕಾರಣಕ್ಕಾಗಿಯೇ ಹಮಿ ನೇಪಾಳ್ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟುಹಾಕಿದ. ಈಗಲೂ ಆತನೇ ಆ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ. ದೊಡ್ಡ ಹೆಸರು ತಂದುಕೊಟ್ಟ ‘ಸೇವ್ ಘೊಪಾ’ ಪ್ರತಿಭಟನೆ ಕ್ರಮೇಣ ಈತನ ಸರ್ಕಾರೇತರ ಸಂಸ್ಥೆಯು ಜನವಿರೋಧಿ ಧೋರಣೆಗಳನ್ನು ಖಂಡಿಸುವ ಹಾಗೂ ಅವುಗಳ ವಿರುದ್ಧ ಹೋರಾಟ ಮಾಡಿ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡುವ ಕೆಲಸಕ್ಕೆ ಕೈ ಹಾಕಿತು. ಆ ನಿಟ್ಟಿನಲ್ಲಿ ಈ ಸಂಸ್ಥೆ ಮಾಡಿದ್ದ ದೊಡ್ಡ ಹೋರಾಟವೆಂದರೆ, ಅದು 2022ರಲ್ಲಿ ನಡೆದಿದ್ದ ಬಿ.ಪಿ. ಕೊಯಿರಾಲಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ (ಬಿಪಿಕೆಐಎಚ್‌ಎಸ್) ಹೆಸರಿನ ವೈದ್ಯಕೀಯ ಕಾಲೇಜಿನಲ್ಲಿ ಇದ್ದ ಅವ್ಯವಸ್ಥೆಗಳ ವಿರುದ್ಧದ ಹೋರಾಟ.

ಅಲ್ಲಿನ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಗೆ ಎಂಟ್ರಿಯಾದ ಈತನ ಸಂಘಟನೆ ಬರೋಬ್ಬರಿ 138 ದಿನಗಳವರೆಗೆ ಪ್ರತಿಭಟನೆ ನಡೆಸಿತು. ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈತನ ನೇತೃತ್ವದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದ 32 ಡಿಮ್ಯಾಂಡ್ ಗಳಲ್ಲಿ ಹಲವನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿತು. ಇನ್ನೂ ಕೆಲವು ಡಿಮ್ಯಾಂಡ್ ಗಳನ್ನು ಈಡೇರಿಸಲು ಸ್ವಲ್ಪ ಸಮಯ ಬೇಕು ಎಂದು ಕೇಳಿಕೊಂಡಿತು. ಅಲ್ಲಿಗೆ, ಗುರುಂಗ್ ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಯಿತು.

ವಿದ್ಯಾರ್ಥಿಗಳು ಈ ಮುಷ್ಕರಕ್ಕೆ ಗುರುಂಗ್ ಅವರ ಹಮಿ ನೇಪಾಳ್ ಸಂಸ್ಥೆ ಎಂಟ್ರಿ ಕೊಟ್ಟಿದ್ದಕ್ಕೆ ಯಶಸ್ವಿಯಂದು ಕೊಂಡಾಡಿದರು. ಇಂಥ ಅನೇಕ ವಿದ್ಯಾರ್ಥಿಪರ ಮುಷ್ಕರಗಳಲ್ಲಿ ಗುರುಂಗ್ ಹಾಗೂ ಆತನ ಎನ್.ಜಿ.ಒ ಭಾಗಿಯಾಗಲು ಇದು ಪ್ರೇರಣೆ ನೀಡಿತು. ಯೂತ್ ಐಕಾನ್.

ಮೇಲೆ ತಿಳಿಸಲಾದ ಹೋರಾಟಗಳಿಂದ ಇಂದು ಗುರುಂಗ್, ನೇಪಾಳದ ದೊಡ್ಡ ಯೂತ್ ಐಕಾನ್ ಎಂಬಂತಾಗಿದ್ದಾನೆ. ಆತ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಒಂದು ಕರೆ ಕೊಟ್ಟರೂ ಸಾಕು, ಲಕ್ಷಾಂತರ ವಿದ್ಯಾರ್ಥಿಗಳು ಸೇರುತ್ತಾರೆ. ಅಷ್ಟರ ಮಟ್ಟಿಗೆ ಯುವ ಶಕ್ತಿಯಾಗಿ ಆತ ಬೆಳೆದು ನಿಂತಿದ್ದಾನೆ. ಈಗ ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ಭಾರೀ ಪ್ರತಿಭಟನೆಗೂ ಈತ ಕರೆ ಕೊಟ್ಟಿದ್ದು ಅದು ಖುದ್ದು ನೇಪಾಳ ಪ್ರಧಾನಿ ಕೆ.ಪಿ. ಓಲಿಯವರೇ ದೇಶ ಬಿಟ್ಟು ಓಡಿ ಹೋಗುವಂಥ ಪರಿಸ್ಥಿತಿಯನ್ನು ತಂದೊಡ್ಡಿದೆ.

ನೇಪಾಳದನಲ್ಲಿ ಭುಗಿಲೆದ್ದಿರುವ ಪ್ರತಿಭಟನೆವ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಪ್ರಧಾನಿ ಕೆ.ಪಿ ಶರ್ಮಾ ಓಲಿ (KP Sharma Oli) ರಾಜೀನಾಮೆ ನೀಡಿದ್ದಾರೆ. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಓಲಿ ದೇಶ ಬಿಟ್ಟು ಪಲಾಯನ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಭ್ರಷ್ಟಾಚಾರ ಆರೋಪದ ಮೇಲೆ ಕಾಠ್ಮಂಡುವಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವನ್ನು ತೆಗೆದು ಹಾಕಿರುವುದಾಗಿ ಸರ್ಕಾರ ಘೋಷಿಸಿದ್ದರೂ, ನೇಪಾಳದಲ್ಲಿ ಎರಡನೇ ದಿನವೂ ಪ್ರತಿಭಟನೆಗಳು ಮುಂದುವರೆದವು. ಸೋಮವಾರ 20 ಜನರು ಸಾವನ್ನಪ್ಪಿ 250 ಕ್ಕೂ ಹೆಚ್ಚು ಜನರು ಗಾಯಗೊಂಡ ನಂತರ ಪ್ರತಿಭಟನಾಕಾರರು ಓಲಿ ಅವರನ್ನು ಪದಚ್ಯುತಗೊಳಿಸಬೇಕು ಮತ್ತು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

Leave a Comment

और पढ़ें

Cricket Live Score

और पढ़ें

error: Content is protected !!