ಕರ್ನಾಟಕದ ಭಟ್ಕಳದಿಂದ ಅಮೆರಿಕದ ಸೆನೆಟ್‌ವರೆಗೆ : ಇತಿಹಾಸ ಸೃಷ್ಟಿಸಿದ ಅಬ್ದುಲ್ ಅಲ್-ಸಯೀದ್!

ಗಡಿನಾಡು ಸಮಾಚಾರ/ ಸಮಯವಾಣಿ ಸುದ್ದಿ ಭಟ್ಕಳ / ಕರ್ನಾಟಕ: “ಎತ್ತಣ ಮಾಮರ, ಎತ್ತಣ ಕೋಗಿಲೆ! ಎತ್ತಣಿಂದೆತ್ತ ಸಂಬಂಧವಯ್ಯಾ!” ಎಂಬ ಅಲ್ಲಮಪ್ರಭುಗಳ ವಚನದಂತೆ, ಕರ್ನಾಟಕದ ಕರಾವಳಿ ಭಾಗದ ಭಟ್ಕಳಕ್ಕೂ ಅಮೆರಿಕದ ಉನ್ನತ ರಾಜಕೀಯ ವ್ಯವಸ್ಥೆಯಾದ ಯುಎಸ್ ಸೆನೆಟ್‌ಗೂ ಬೆಸುಗೆಯೊಂದು ಬೆಸೆದುಕೊಂಡಿದೆ.

ಅಮೆರಿಕದ ಮಿಚಿಗನ್ ರಾಜ್ಯದ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ 42 ವರ್ಷದ ನಾಯಕ ಡಾ. ಅಬ್ದುಲ್ ಅಲ್-ಸಯೀದ್ ಅವರು ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಗೆಲುವಿನ ವಿಶೇಷವೆಂದರೆ, ಅಬ್ದುಲ್ ಅಲ್-ಸಯೀದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರ ಕುಟುಂಬದ ಬೇರುಗಳು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿವೆ.

ಸಾರಾ ಅವರ ಅಜ್ಜ ಜುಕಾಕು ಶಂಸುದ್ದೀನ್ ಅವರು ಭಟ್ಕಳದ ಪ್ರಸಿದ್ಧ ವಕೀಲರು ಹಾಗೂ ಕಾಂಗ್ರೆಸ್ ನಾಯಕರಾಗಿದ್ದರು. ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಡಿ. ಜತ್ತಿ ಅವರ ಸಂಪುಟದಲ್ಲಿ 1958ರಿಂದ ಹಣಕಾಸು ಇಲಾಖೆಯ ಉಪಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಎಸ್. ನಿಜಲಿಂಗಪ್ಪ ಅವರ ಅವಧಿಯಲ್ಲಿ ವಿದ್ಯುತ್ ಇಲಾಖೆಯ ಉಪಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಭಟ್ಕಳದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದ ಶಂಸುದ್ದೀನ್ ಅವರ ಸೇವೆ ಇಂದಿಗೂ ಸ್ಮರಣೀಯವಾಗಿದೆ.

ವಿದೇಶದಲ್ಲಿ ನೆಲೆಸಿದ್ದರೂ ತಮ್ಮ ಕುಟುಂಬದ ಭಾರತೀಯ ಪರಂಪರೆ ಮತ್ತು ಭಟ್ಕಳದೊಂದಿಗಿನ ಸಂಬಂಧವನ್ನು ಸಾರಾ ಅವರ ಕುಟುಂಬ ಉಳಿಸಿಕೊಂಡಿದೆ ಎಂಬುದು ವಿಶೇಷ.

ಒಂದು ಕಡೆ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗಿದ್ದರೆ, ಮತ್ತೊಂದೆಡೆ ಕರ್ನಾಟಕದ ಭಟ್ಕಳದ ಕುಟುಂಬವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವುದು ರಾಜ್ಯದ ಜನರಲ್ಲಿ ಸಂತಸ ಮೂಡಿಸಿದೆ.

ಕರ್ನಾಟಕದ ಮಣ್ಣಿನ ನಂಟು ಅಮೆರಿಕದ ಸೆನೆಟ್‌ವರೆಗೆ ತಲುಪಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಸೆನೆಟರ್ ಡಾ. ಅಬ್ದುಲ್ ಅಲ್-ಸಯೀದ್ ಹಾಗೂ ಡಾ. ಸಾರಾ ಜುಕಾಕು ದಂಪತಿಗೆ ಕರ್ನಾಟಕದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.

ಸಮಯವಾಣಿ ನ್ಯೂಸ್ | www.samayavani.com

Leave a Comment

और पढ़ें

Cricket Live Score

और पढ़ें

error: Content is protected !!