ಚನ್ನಮ್ಮನ ಕಿತ್ತೂರು – ಅವರಾದಿ : ಆಧುನಿಕತೆಯ ಭರಾಟೆಯ ನಡುವೆಯೂ ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವರಾದಿ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಶ್ರಾವಣ ಮಾಸದ ಪುರಾಣ ಪಠಣ ನಡೆಯುತ್ತಿದ್ದು, ಈ ವರ್ಷವೂ ಭಕ್ತಿ-ಭಾವದಿಂದ ಸಂಪನ್ನಗೊಂಡಿತು.
ಗ್ರಾಮದ ಹಿರಿಯರಾದ ರಾಮಪ್ಪ ಅಳ್ನಾವರ ಅವರು ಹಾಕಿಕೊಟ್ಟ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಬುನಾದಿಯನ್ನು ಅವರ ಹಿರಿಯ ಪುತ್ರ ರಾಮಲಿಂಗ ಅಳ್ನಾವರ ಬಸವ ಭಕ್ತರು ಅವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರ ಮನೆಯಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಪವಿತ್ರ ದಿನಗಳಲ್ಲಿ ನಡೆಯುವ ಪುರಾಣ ಪಠಣ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವು ಗ್ರಾಮಸ್ಥರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಶ್ರೀ ಸಿದ್ದಾರೂಢ ಸ್ವಾಮೀಜಿ ಈ ಪುರಾಣ ಪಠಣ ಕಾರ್ಯಕ್ರಮವು ಭಕ್ತರಲ್ಲಿ ಆಧ್ಯಾತ್ಮಿಕ ಚಿಂತನೆ, ಧಾರ್ಮಿಕ ನಂಬಿಕೆ ಮತ್ತು ಸತ್ಸಂಗದ ಮನೋಭಾವವನ್ನು ಬೆಳೆಸುತ್ತಿದೆ. ಕಳೆದ ಕಾಲು ಶತಮಾನದಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಯುವ ಪೀಳಿಗೆಗೆ ಧರ್ಮ, ನೀತಿ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ಪರಿಚಯಿಸುವ ಮಹತ್ವದ ವೇದಿಕೆಯಾಗಿ ರೂಪುಗೊಂಡಿದೆ.
25ನೇ ವರ್ಷದ ರಜತ ಮಹೋತ್ಸವದ ವಿಶೇಷ ಸಂದರ್ಭದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಮಹಾರಾಷ್ಟ್ರದ ಶ್ರೀ ಅಲ್ಲಮಗೀರಿ ಪೀಠದ ಪೂಜ್ಯ ಶ್ರೀ ಡಾ ಬಸವಪ್ರಕಾಶ ಸ್ವಾಮೀಜಿಗಳು ಸಹ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಬಸವ ಭಕ್ತರು ಅಶೋಕ ಅಳ್ನಾವರ, ಬಸವರಾಜ ಅವರಾದಿ ರುದ್ರಗೌಡ ಪಾಟಿಲ್ ಶ್ರೀದರ ಮಲಶೆಟ್ಟಿ ನಾಗಪ್ಪ ಗೂಳದಕೊಪ್ಪ ಬಸವರಾಜ ಕುಂದರಗಿ ಇತ್ಯಾದಿ ಗ್ರಾಮದ ಹಿರಿಯರು, ಗಣ್ಯರು, ಭಕ್ತರು ಹಾಗೂ ಮಹಿಳೆಯರು, ಯುವಕರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಪುರಾಣ ಪಠಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಭಕ್ತಿಗೀತೆ, ಪ್ರವಚನ ಹಾಗೂ ಧಾರ್ಮಿಕ ಚಿಂತನೆಯ ಮೂಲಕ ಕಾರ್ಯಕ್ರಮವು ಭಕ್ತಿಮಯ ವಾತಾವರಣವನ್ನು ನಿರ್ಮಿಸಿತು.
25 ವರ್ಷಗಳ ನಿರಂತರ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಅಳನಾವರ ಕುಟುಂಬದ ಸೇವಾ ಮನೋಭಾವಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

