ಸುದ್ದಿ ವರದಿ | ಸಮಯವಾಣಿ ಕನ್ನಡ ನ್ಯೂಸ್ : ಹಾಲಿನ ದರವನ್ನು ಲೀಟರ್‌ಗೆ ಕೇವಲ ₹8 ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ವಾಸ್ತವದಲ್ಲಿ ವಿವಿಧ ಮಾದರಿಯ ಹಾಲಿನ ದರಗಳಲ್ಲಿ ₹8 ರಿಂದ ₹20ರ ವರೆಗೆ ಹೆಚ್ಚಳವಾಗಿರುವುದು ಗ್ರಾಹಕರಲ್ಲಿ ಅಸಮಾಧಾನ ಮೂಡಿಸಿದೆ.
ಹಾಲಿನ ವಿವಿಧ ವರ್ಗಗಳ ದರಗಳನ್ನು ಗಮನಿಸಿದರೆ, ಸರ್ಕಾರ ಹೇಳಿರುವ ₹8 ಹೆಚ್ಚಳವು ಕನಿಷ್ಠ ದರ ಏರಿಕೆಯಾಗಿದ್ದು, ಉಳಿದ ಮಾದರಿಗಳಲ್ಲಿ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾಗಿದೆ.
ಹಾಲಿನ ಪರಿಷ್ಕೃತ ದರಗಳ ವಿವರ
| ಹಾಲಿನ ವಿಧ | ಹಳೆಯ ದರ | ಹೊಸ ದರ | ಹೆಚ್ಚಳ |
|---|---|---|---|
| ಟೋನ್ಡ್ ಮಿಲ್ಕ್ | ₹48 | ₹56 | ₹8 |
| ಸ್ಟ್ಯಾಂಡರ್ಡ್ ಮಿಲ್ಕ್ | ₹54 | ₹64 | ₹10 |
| ಫುಲ್ ಕ್ರೀಮ್ ಮಿಲ್ಕ್ | ₹58 | ₹74 | ₹16 |
| ಬಫೆಲೋ ಮಿಲ್ಕ್ | ₹62 | ₹80 | ₹18 |
| ಪ್ರೀಮಿಯಂ ಮಿಲ್ಕ್ | ₹64 | ₹84 | ₹20 |
| ಮೊಸರು | ₹56 | ₹68 | ₹12 |
ರೈತರಿಗೆ ₹7, ಗ್ರಾಹಕರಿಗೆ ₹20 ಹೊರೆ ?
ಹಾಲಿನ ದರ ಹೆಚ್ಚಳದ ಮತ್ತೊಂದು ಪ್ರಮುಖ ವಿಚಾರವೆಂದರೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ₹7 ಹೆಚ್ಚುವರಿ ನೀಡುವುದಾಗಿ ಹಾಗೂ ಕೆಎಂಎಫ್ ₹1 ಉಳಿಸಿಕೊಳ್ಳುವುದಾಗಿ ಹೇಳಲಾಗಿದೆ.
ಆದರೆ ವಿವಿಧ ಮಾದರಿಯ ಹಾಲುಗಳಿಗೆ ₹8ರಿಂದ ₹20ರವರೆಗೆ ದರ ಹೆಚ್ಚಳವಾಗುತ್ತಿರುವಾಗ, ಹೆಚ್ಚುವರಿ ಹಣದ ಹಂಚಿಕೆ ಹೇಗೆ ನಡೆಯಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ಎಲ್ಲಾ ಮಾದರಿಯ ಹಾಲುಗಳಿಗೂ ರೈತರಿಗೆ ಕೇವಲ ₹7ರಷ್ಟು ಮಾತ್ರ ಹೆಚ್ಚುವರಿ ಹಣ ನೀಡಿದರೆ, ಉಳಿದ ಹೆಚ್ಚುವರಿ ಮೊತ್ತದ ಲೆಕ್ಕಾಚಾರ ಮತ್ತು ಹಂಚಿಕೆಯ ಬಗ್ಗೆ ಕೆಎಂಎಫ್ ಸ್ಪಷ್ಟನೆ ನೀಡಬೇಕಿದೆ.
ರೈತರು ಮತ್ತು ಗ್ರಾಹಕರಿಗೆ ಇಬ್ಬರಿಗೂ ಹೊರೆ?
ಒಂದೆಡೆ ಹಾಲು ಉತ್ಪಾದನಾ ವೆಚ್ಚ, ಪಶು ಆಹಾರ, ಮೇವು ಹಾಗೂ ನಿರ್ವಹಣಾ ವೆಚ್ಚಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮತ್ತೊಂದೆಡೆ ಹಾಲಿನ ದರ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ಮಾಸಿಕ ಖರ್ಚು ಹೆಚ್ಚಾಗಲಿದೆ.
ಹೀಗಾಗಿ ಹಾಲಿನ ದರ ಹೆಚ್ಚಳದ ಸಂಪೂರ್ಣ ವಿವರ, ರೈತರಿಗೆ ಸಿಗುವ ಹೆಚ್ಚುವರಿ ಹಣ ಹಾಗೂ ಕೆಎಂಎಫ್ ಉಳಿಸಿಕೊಳ್ಳುವ ಮೊತ್ತದ ಕುರಿತು ಸರ್ಕಾರ ಮತ್ತು ಕೆಎಂಎಫ್ ಪಾರದರ್ಶಕ ಮಾಹಿತಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಸರ್ಕಾರ ಘೋಷಿಸಿರುವುದು ₹8 ಹೆಚ್ಚಳ; ಆದರೆ ಕೆಲವು ಮಾದರಿಗಳಲ್ಲಿ ಏರಿಕೆ ₹20ರವರೆಗೆ! ಈ ವ್ಯತ್ಯಾಸಕ್ಕೆ ಉತ್ತರ ನೀಡುವವರು ಯಾರು? ರೈತರ ಹಿತವೂ ಮುಖ್ಯ, ಗ್ರಾಹಕರ ಹಿತವೂ ಮುಖ್ಯ.
