ಬೆಳಗಾವಿ : ಬೈಲಹೊಂಗಲ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ಪಿತೂರಿಯ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಧರ್ಮಸ್ಥಳದಲ್ಲಿ ಧರ್ಮಕ್ಕೆ ಜಯವಾಗಲಿ, ಸತ್ಯಕ್ಕೆ ಜಯಲಂಬಿಸಲಿ, ಧರ್ಮಸ್ಥಳದಲ್ಲಿ ಶಾಂತಿನೆಲಸೆಂದು ಸಂಕಲ್ಪಿಸಿ ಶಿವ ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯವನ್ನು 108 ಬಾರಿ ಪಠಿಸಲಾಯಿತು. ವಿಶ್ವ ಹಿಂದೂ ಪರಿಷತ್ ಬೈಲಹೊಂಗಲ ಘಟಕವು ದಿನಾಂಕ 24-08-2025 ರಂದು ಭಾನುವಾರ ಬೈಲಹೊಂಗಲ ಪಟ್ಟಣದ ಜವಳಿ ಕೂಟ ಹತ್ತಿರ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಸಭೆ ನಡೆಸಿತು.
ಪಂಚಾಕ್ಷರಿ ಮಂತ್ರ ಎಂದರೆ “ಓಂ ನಮಃ ಶಿವಾಯ” ಎಂಬ ಐದು ಅಕ್ಷರಗಳ ಮಂತ್ರ. ಈ ಮಂತ್ರವು ಶಿವನಿಗೆ ಅರ್ಪಿತವಾದ ಪವಿತ್ರ ಮಂತ್ರವಾಗಿದ್ದು, ಯಜುರ್ವೇದದ ಮೂಲ ಎಂದು ಪರಿಗಣಿಸಲಾಗಿದೆ. ಇದನ್ನು ಪಠಿಸುವುದರಿಂದ ಆಧ್ಯಾತ್ಮಿಕ ಶಾಂತಿ, ಸಂತೋಷ, ಸಮೃದ್ಧಿ, ಮತ್ತು ಯಶಸ್ವಿ ಜೀವನವನ್ನು ಸಾಧಿಸಬಹುದು.
ಪಂಚಾಕ್ಷರಿ ಮಂತ್ರದ ಅರ್ಥ ಮತ್ತು ಮಹತ್ವ :
ಮಂತ್ರ : ಓಂ ನಮಃ ಶಿವಾಯ. ಅರ್ಥ : “ಓಂ” ಶಬ್ದದೊಂದಿಗೆ, “ನಮಃ” ಎಂದರೆ ನಮಸ್ಕಾರ ಮತ್ತು “ಶಿವಾಯ” ಎಂದರೆ ಶಿವನಿಗೆ, ಒಟ್ಟಾರೆಯಾಗಿ “ಓಂ ಶಿವನಿಗೆ ನಮಸ್ಕಾರ” ಎಂದರ್ಥ.
ಮೂಲ : ಇದು ಯಜುರ್ವೇದದ ಮೂಲ ಎಂದು ಹೇಳಲಾಗುತ್ತದೆ ಮತ್ತು ಶ್ರೀ ರುದ್ರಂ ಚಮಕಂ ಎಂಬ ಧಾರ್ಮಿಕ ಗ್ರಂಥದಲ್ಲೂ ಉಲ್ಲೇಖಿಸಲಾಗಿದೆ.
ಲಾಭಗಳು : ವ್ಯಕ್ತಿಗೆ ಆಧ್ಯಾತ್ಮಿಕ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತದೆ. ಸಂತೋಷ, ಸಮೃದ್ಧಿ ಮತ್ತು ಯಶಸ್ವಿ ಜೀವನವನ್ನು ತರುತ್ತದೆ. ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆಂತರಿಕ ಆಲೋಚನೆಗಳನ್ನು ಪ್ರಬುದ್ಧಗೊಳಿಸುತ್ತದೆ ಮತ್ತು ನರಕೋಶಗಳಿಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಪಠಣದ ವಿಧಾನ : “ಓಂ ನಮಃ ಶಿವಾಯ” ಎಂದು ಜಪಿಸುವುದರಿಂದ ಶಿವನ ಪೂಜೆ ಮತ್ತು ಸ್ಮರಣೆ ಮಾಡುವಂತಾಗುತ್ತದೆ. ಈ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಜೀವನದಲ್ಲಿ ಅನೇಕ ಲಾಭಗಳನ್ನು ಪಡೆಯಬಹುದು ಎಂದು ನಂಬಲಾಗಿದೆ.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಪ್ರಮೋದಕುಮಾರ ವಕ್ಕುಂದಮಠ, ಹಾಗೂ ಬೈಲಹೊಂಗಲ ತಾಲೂಕ ಅಧ್ಯಕ್ಷರು ಕಾಶಿನಾಥ ಬಿರಾದಾರ ಆಶಯ ನುಡಿಗಳನ್ನು ಮಾತನಾಡಿದರು. 👇
ಈ ಸಂದರ್ಭದಲ್ಲಿ ಜಿಲ್ಲಾ ಸಹ ಕಾರ್ಯದರ್ಶಿ ವಿವೇಕಾನಂದ ಪೂಜಾರ, ತಾಲೂಕಾ ಕಾರ್ಯದರ್ಶಿ ಅಶೋಕ ಸವದತ್ತಿ, ಸತ್ಸಂಗ ಪ್ರಮುಖ ಸಂಗಮೇಶ ಸವದತ್ತಿಮಠ, ನಗರ ವ್ಹಿ ಹಿಂ ಪ್ ಅಧ್ಯಕ್ಷರು ಗೌತಮ ಇಂಚಲ, ಮಠ -ಮಂದಿರ ಸಂಪರ್ಕ ಪ್ರಮುಖ ಮಲ್ಲಿಕಾರ್ಜುನ ಏಣಗಿಮಠ, ಸಂಪರ್ಕ ಪ್ರಮುಖ ರಾಜು ಬೋಂಗಳೇ, ವಿಜಯ ಪತ್ತಾರ, ರಾಜು ಹರಕುಣಿ, ನಾರಾಯಣ ನಲವಡೆ, ಚನ್ನಪ್ಪ ಹಾದಿಮನಿ, ಕೃಷ್ಣ ಭಸ್ಮೆ, ಚಂದ್ರು ಗೌಡರ, ಪುರಸಭೆ ಸದಸ್ಯರು ಶ್ರೀಮತಿ ವಾಣಿ ಪತ್ತಾರ, ವಿಜಯಕುಮಾರ, ಶಾಂತು ದೋತರ್ ಶೈಲಾ ಜಾಕ್ಕಣ್ಣವರ, ಮಂಗಲಾ, ಇಂದಿರಾ ವನ್ನೂರ್, ಸುಜಾತಾ ಕೆಂಚಪ್ಪನವರ, ತಾರವ್ವಾ ಬೆಟಗೇರಿ ದೇವಸ್ಥಾನದ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.












