PLANE CRASH : ಉಕ್ಕಿನ ಹಕ್ಕಿಗೆ ಪೆಟ್ಟು ಹತ್ತಿತ್ತಪ್ಪ – ಭವಿಷ್ಯ ನುಡಿದಿದ್ದ ಬೆಳಗಾವಿ ಜಿಲ್ಲೆಯ ನಯನಗರದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ! VIDEO VIRAL

ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರದ ಸುಖದೇವಾನಂದ ಮಠದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಅವರ ಭವಿಷ್ಯ ನಿಜವಾಗಿದೆ. ಭೂಮಿ ನಲುಗುತ್ತೆ.. ಬೆಂಕಿ ಉರಿಯುತ್ತೆ.. ಮಕ್ಕಳು ಹುಷಾರು.. ಉಕ್ಕಿನ ಹಕ್ಕಿಗೆ ಪೆಟ್ಟ ಹತ್ತಿತ್ತಪ್ಪ ಎಂದು ಭವಿಷ್ಯ ನುಡಿದಿದ್ದು ವಿಡಿಯೋ ಈಗ ಸೊಸಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. 

2025 Apr  20ರಂದು ಸುಖದೇವಾನಂದ ಮಠದ ಜಾತ್ರೆಯಲ್ಲಿ ಬೆಂಕಿ ಕೆಂಡದ ಮೇಲೆ ನಡೆದ ಶ್ರೀಗಳು ಈ ವರ್ಷದ ಭವಿಷ್ಯ ನುಡಿದಿದ್ದು, ಈ ವರ್ಷ ಮಳೆ, ಬೆಳೆ ಚೆನ್ನಾಗಿ ಆಗಲಿದೆ ಎಂದು ಕಾಲಜ್ಞಾನ ನುಡಿದಿದ್ದರು. ಅದರ ಜೊತೆಗೆ ಉಕ್ಕಿನ ಹಕ್ಕಿಗೆ ಪೆಟ್ಟ ಹತ್ತಿತ್ತಪ್ಪ ಎಂದು ಕೂಡ ಹೇಳಿದ್ದರು.

ಶ್ರೀಗಳು ತಮ್ಮ ಭವಿಷ್ಯದಲ್ಲಿ, ಗಾಳಿ ಗದರಿಸುತ್ತಪ್ಪ, ಬೆಂಕಿ ಪ್ರಬಲವಾಗೈತ್ತಪ್ಪ, ಭೂಮಿ ನಲುಗುತ್ತೆ. ಉಕ್ಕಿನ ಹಕ್ಕಿಗೆ ಪೆಟ್ಟ ಹತ್ತಿತ್ತಪ್ಪ.. ಮಕ್ಕಳು ಮರಿ ಹುಷಾರು ಎಂದು ಹೇಳಿದ್ದರು. ಇದೀಗ ಶ್ರೀಗಳ ಭವಿಷ್ಯದಂತೆ ಗುರುವಾರ ಏರ್ ಇಂಡಿಯಾ ವಿಮಾನ ಪತನಗೊಂಡಿದ್ದು, ಮಕ್ಕಳು ಸೇರಿದಂತೆ 241 ಜನ ಮೃತಪಟ್ಟಿದ್ದರು.

ಅಲ್ಲದೇ ವಿಮಾನ ಪತನಗೊಳ್ಳುತ್ತಿದ್ದಂತೆ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡಗಳೆಲ್ಲ ಸಂಪೂರ್ಣ ನಾಶವಾಗಿದೆ. ಅಷ್ಟೇ ಅಲ್ಲದೆ ವಿಮಾನ ನೇರವಾಗಿ ಹಾಸ್ಟೆಲ್ ವೊಂದಕ್ಕೆ ಅಪ್ಪಳಿಸಿದ್ದು, ಹಾಸ್ಟೆಲ್ ನಲ್ಲಿದ್ದ ಸುಮಾರು ಜನರು ನಾಪತ್ತೆಯಾಗಿದ್ದಾರೆ ಇನ್ನು ಕೆಲವು ಸಾವನ್ನಪ್ಪಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಶ್ರೀಗಳ ಭವಿಷ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ಅಲ್ಲದೇ ವಿಮಾನ ಪತನಗೊಳ್ಳುತ್ತಿದ್ದಂತೆ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡಗಳೆಲ್ಲ ಸಂಪೂರ್ಣ ನಾಶವಾಗಿದೆ. ಅಷ್ಟೇ ಅಲ್ಲದೆ ವಿಮಾನ ನೇರವಾಗಿ ಹಾಸ್ಟೆಲ್ ವೊಂದಕ್ಕೆ ಅಪ್ಪಳಿಸಿದ್ದು.

ಈ ಘಟನೆಯ ಬೆನ್ನಲ್ಲೇ ಶ್ರೀಗಳ ಭವಿಷ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ.

Leave a Comment

और पढ़ें

Cricket Live Score

और पढ़ें

error: Content is protected !!