ಸಾಗುವಳಿ ಭೂಮಿಯಿಂದ ರೈತರನ್ನು ವಕ್ಕಲೆಬ್ಬಿಸಿದರೆ ಉಗ್ರ ಹೋರಾಟ ಎಮ್ ಎಫ್ ಜಕಾತಿ

ವರದಿ : ಎಂ ರಾಜಾಬಾಯಿ ಉಪಸಂಪಾದಕರು ಸಮಯವಾಣಿ ನ್ಯೂಸ್

ಬೆಳಗಾವಿ : ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಕಿತ್ತೂರು ಪಟ್ಟಣದ ಹೊರ ವಲಯದಲ್ಲಿರುವ ಸರಕಾರಿ ಭೂಮಿಯಲ್ಲಿ ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಈಗ ಆಭೂಮಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲು ಸರಕಾರ ಇಂಧನ ಇಲಾಖೆ ಮುಂದಾಗಿದ್ದು ರೈತರನ್ನು ಒಕ್ಕಲೆಬ್ಬಿಸುವ ಸಾಧ್ಯತೆಗಳಿದ್ದು ಅದನ್ನು ಖಂಡಿಸಿ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ವತಿಯಿಂದ ಶ್ರೀ ಕಲ್ಲನಗೌಡ ಪಾಟೀಲ್ ತಹಶಿಲ್ದಾರರ ಮೂಲಕ ಇಂಧನ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ರೈತರನ್ನು ಉಳುಮೆ ಮಾಡುತ್ತಿರುವ ಭೂಮಿಯಿಂದ ಒಕ್ಕಲ್ ಎಬ್ಬಿಸುವುದು ಕೆಲಸ ಕರ್ನಾಟಕ ಸರ್ಕಾರಕ್ಕೆ ಶೋಭೆ ತರುವುದಿಲ್ಲ ರೈತರ ಹೆಸರಿಗೆ ಭೂಮಿ ಮಾಡುವುದನ್ನು ಬಿಟ್ಟು ಅಲ್ಲಿದ್ದ ರೈತರನ್ನು ಅನಾಥ ಮಾಡುವುದು ಸರಿ ಅಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಜಕಾತಿ ತೀವ್ರವಾಗಿ ಖಂಡಿಸಿದರು ನಾವು ಸಾಂಕೇತಿಕವಾಗಿ ಮನವಿಯನ್ನು ಸಲ್ಲಿಸುತ್ತಿದ್ದೇವೆ ಮನವಿಗೆ ಸ್ಪಂದಿಸದೆ ಹೋದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು.

ಸಂಘದ ಜಿಲ್ಲಾಧ್ಯಕ್ಷರಾದ ಅಪೇಶ ದಳವಾಯಿ ಮಾತನಾಡಿ ರೈತರ ಬಾಳಿಗೆ ಆಸರೆಯಾದ ಭೂಮಿಯಿಂದ ರೈತರನ್ನು ವಕ್ಕಲೆಬ್ಬಿಸುವುದು ಸರಕಾರಕ್ಕೆ ಶೋಭೆ ತರುವುದಿಲ್ಲ ಸಂಕಷ್ಟದಲ್ಲಿರುವ ರೈತರ ಬೆನ್ನಿಗೆ ಸರಕಾರ ನಿಲ್ಲುವುದನ್ನು ಬಿಟ್ಟು ಏಕಾಏಕಿ ಸೋಲಾರ್ ಪ್ಯಾನೆಲ್ ಅಳವಡಿಸಿ ರೈತರನ್ನು ಧೃತಿಗೆಡಿಸುವುದು ಯಾವ ನ್ಯಾಯ ರೈತರ ಹೆಸರಿಗೆ ಜಮೀನು ಮಾಡುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದರು.

ಜಿಎಸ್ ಹಿರೇಮಠ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್ ಗಡ್ಕರಿ ಎಸ್ ಸಿ ಘಟಕದ ಅಧ್ಯಕ್ಷ ಅನ್ನಪ್ಪ ಗುಂಜಿ ಮುಖಂಡರಾದ ರೈತ ಹೋರಾಟಗಾರರಾದ ಮಡಿವಾಳಪ್ಪ ವರಗನ್ನವರ್ ರೈತ ಮುಖಂಡರು ನಿಂಗಪ್ಪ ತಡಕೋಡ ಮಹಿಳಾ ಜಿಲ್ಲಾ ಅಧ್ಯಕ್ಷರಾದ ನಾಗರತ್ನ ಪಾಟಿಲ್ ಗಡಿನಾಡು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬಂಗಿ ಮುಂತಾದವರು ಉಪಸ್ಥಿತರಿದ್ದರು.

Leave a Comment

और पढ़ें

Cricket Live Score

और पढ़ें

error: Content is protected !!