ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದ ಪಂಚ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗುತ್ತಿದ್ದು ಇದರ ನಿಮಿತ್ಯವಾಗಿ ಗಂಧಿಗವಾಡ ಗ್ರಾಮದ ಗ್ರಾಮದೇವಿ ದೇವಸ್ಥಾನದ ಟ್ರಸ್ಟ್ ಕಮಿಟಿಯ ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಮದೇವಿಯ ದೇವಸ್ಥಾನದಿಂದ ಸಾಂಪ್ರದಾಯಿಕ ವಾದ್ಯ ಮೇಳಗಳೊಂದಿಗೆ ದುರ್ಗಾದೇವಿ ದೇವಸ್ಥಾನದವರೆಗೆ ಆಗಮಿಸಿ ದೇವಿಗೆ ಉಡಿ ತುಂಬುವುದರ ಮುಖಾಂತರ ತಮ್ಮ ಭಕ್ತಿ ಭಾವಗಳನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಜನಪ್ರಿಯ ಶಿಕ್ಷಕ ನಾಗೇಶ್ ಮಾದಿಗರ್ ಅವರು ಮಾತನಾಡಿ ಗ್ರಾಮದ ದುರ್ಗಾದೇವಿಯ ಜಾತ್ರೆಯು ಪ್ರತಿ ಐದು ವರ್ಷಗಳಿಗೊಮ್ಮೆ ಅದ್ದೂರಿಯಿಂದ ಜರುಗುತ್ತದೆ ಭಕ್ತರು ತನು ಮನ ಧನದಿಂದ ಸಹಕರಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಜಾತ್ರೆಯ ನಿಮಿತ್ಯವಾಗಿ ಸಾಂಪ್ರದಾಯಿಕ ವಾದ್ಯ ಮೇಳಗಳೊಂದಿಗೆ ದೇವಿಯ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗುತ್ತದೆ ಮಹಾಪ್ರಸಾದ ದೇವಿಗೆ ಅಭಿಷೇಕ ಉಡಿ ತುಂಬುವ ಕಾರ್ಯಕ್ರಮ ಸಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಕೆಂಡ ಹಾಯುವ ಕಾರ್ಯಕ್ರಮ ಕೂಡ ಜರಗುತ್ತದೆ ಭಕ್ತರು ಬಗೆಬಗೆಯ ಖಾದ್ಯಗಳನ್ನು ಮಾಡಿ ದೇವಿಗೆ ಉಡಿತುಂಬಿ ತಮ್ಮ ಹರಕೆಗಳನ್ನು ಪೂರೈಸಿಕೊಳ್ಳುತ್ತಾರೆ ದುರ್ಗಾದೇವಿಯ ಕೃಪೆಗಾಗಿ ಐದು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ ಭಕ್ತರಲ್ಲಿ ನೆಮ್ಮದಿಯ ಜೀವನಕ್ಕೆ ನಾಂದಿ ಹಾಡುತ್ತದೆ ಎಂದರು.
ಗ್ರಾಮ ದೇವಿ ಟ್ರಸ್ಟ್ ಕಮಿಟಿಯ ಕಾರ್ಯದರ್ಶಿ ವಿಜಯ ಯಮಕನ ಮರಡಿ ಅವರು ಮಾತನಾಡಿ ಗ್ರಾಮದ ಎಲ್ಲಾ ಜಾತಿ ಧರ್ಮದ ಜನರು ಸೇರಿಕೊಂಡು ಸಾಮರಸ್ಯದಿಂದ ಜಾತ್ರೆಯನ್ನು ಯಶಸ್ವಿಗೊಳಿಸುತ್ತಾರೆ ಇದು ಜಾತ್ರೆಯ ವಿಶೇಷತೆ ಆಗಿದ್ದು ಗ್ರಾಮ ದೇವಿಯ ಟ್ರಸ್ಟ್ ವತಿಯಿಂದ ಪೂಜೆ ಸಲ್ಲಿಸಿ ದೇವಿಗೆ ಭಕ್ತಿಯನ್ನು ಸಮರ್ಪಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದೇವಿ ಟ್ರಸ್ಟ್ ಕಮಿಟಿಯ ಕಾರ್ಯದರ್ಶಿ ಡಾಕ್ಟರ್ ವಿಜಯ ಯಮಕನಮರಡಿ ರುದ್ರಪ್ಪ ಅಂಗಡಿ ಪುಂಡಲೀಕ ಕಮತಗಿ ಶೇಖರ್ ಕುರೇರ ಶಂಕರಗೌಡ ಪಾಟೀಲ್ ಕಲ್ಲಪ್ಪ ಮೂಲಿಮನಿ ಪಾರಿಸ್ ಬಾಗಾರ್ ರಾಜು ಅಂಬಡಗಟ್ಟಿ ಮಹಾರುದ್ರ ಪಟ್ಟಣಶೆಟ್ಟಿ ಬಸವರಾಜ್ ಬಂಗಿ ಗ್ರಾಮದ ಪ್ರಮುಖರಾದ ಮಲ್ಲಪ್ಪ ಗಾಳಿ ಬಸವರಾಜ್ ಕುರುಗುಂದ್ ಚಂದ್ರಶೇಖರ್ ಎಳ್ಳೂರ ಡಾಕ್ಟರ್ ಅದೃಷಪ್ಪ ಮಾದಿಗರ್ ರಾಣಿ ಶುಗರ್ಸ್ ನಿರ್ದೇಶಕ ಬಾಳಪ್ಪ ಪೂಜಾರ ಗ್ರಾಮ ಪಂಚಾಯತಿ ಸದಸ್ಯ ಸದಾನಂದ ದೊಡ್ಡಮನಿ ಅರ್ಜುನ್ ಹೊಸಮನಿ ರಮೇಶ್ ಮಾದಿಗರ್ ಬಸವರಾಜ್ ಪೂಜಾರ್ ಅಶೋಕ್ ಪೂಜಾರ ಶಿವಪ್ಪ ಇಂಚಲ್ ಶಂಕರ್ ಹೊಸಮನಿ ಶಿಕ್ಷಕ ಸದ್ಯಪ್ಪ ಮಾದಿಗರ್ ವಿಠ್ಠಲ್ ಬಿಳ ಮರಿ ಶಂಕರ್ ಹೊಸಮನಿ ಫಕೀರ ಪೂಜಾರ್ ರಮೇಶ್ ಬಿಳ ಮರಿ ಶಿವಪ್ಪ ಪೂಜಾರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉದಯ್ ಹಿರೇಮಠ ಎಲ್ಲಪ್ಪ ಮೇದಾರ್ ಮಲ್ಲಪ್ಪ ಮೂಲಿಮನಿ ಭೀಮಪ್ಪ ನಾಯ್ಕರ್ ಮಲ್ಲಪ್ಪ ಸತ್ಯಣ್ಣವರ್ ಪತ್ರಕರ್ತ ಎಂಎಂ ರಾಜೀಬಾಯಿ ಮುಂತಾದವರು ಉಪಸ್ಥಿತರಿದ್ದರು.

