ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದ ನೂತನ ದ್ವಾರವನ್ನು ಘನ್ಯರಿಂದ ಉದ್ಘಾಟನೆ

ಬೈಲಹೊಂಗಲ : ತಾಲೂಕಿನ ಊಡಿಕೆರಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ದೇವಸ್ಥಾನದ ನೂತನ ದ್ವಾರ ಬಾಗಿಲು ಉದ್ಘಾಟನಾ ಸಮಾರಂಭ ರವಿವಾರದಂದು ನಡೆಯಿತು.

ಪೂಜ್ಯನೀಯ ಗೂಳಪ್ಪನವರ್ ಪರಿವಾರದ ಹಿರಿಯರಾದ ದಿವಂಗತ ಶ್ರೀಮತಿ ಸಂಗಮ್ಮ ಬಸಪ್ಪ ಗೂಳಪ್ಪನವರ ದಿವಂಗತ ಶ್ರೀ ಗೂಳಪ್ಪ ಬಸಪ್ಪ ಗೂಳಪ್ಪನವರ್ ದಿವಂಗತ ಶ್ರೀ ಬಸಪ್ಪ ಗೂಳಪ್ಪ ಗೂಳಪ್ಪನವರ್ ಇವರ ಸ್ಮರಣಾರ್ಥವಾಗಿ ಶ್ರೀಮತಿ ಗಂಗಮ್ಮ ಕೋ ಗೂಳಪ್ಪ ಗೊಳಪ್ಪನವರ್ ,ಶ್ರೀಮತಿ ಮಾಹದೇವಿ ಕೋ ಬಸಪ್ಪ ಗೂಳಪ್ಪನವರ್, ಶ್ರೀಮತಿ ಶ್ರೀದೇವಿ & ಸೋಮಪ್ಪ ಗೂಳಪ್ಪನವರ ಶ್ರೀಮತಿ ಶಾರದಾ & ಮಹಾಬಲೇಶ್ವರ ಗೂಳಪ್ಪನವರ್,(ನಿವೃತ್ತ ಶಿಕ್ಷಕರು) ಶ್ರೀಮತಿ ಸುರೇಖಾ & ಈರಪ್ಪ ಗೂಳಪ್ಪನವರ್ ಶಿಕ್ಷಕರು ಗೂಳಪ್ಪನವರು ಬಂಧುಗಳಿಂದ.

ತದನಂತರ ನೂತನ ದ್ವಾರ ಬಾಗಿಲು ಉದ್ಘಾಟನೆಯನ್ನು ಗಂಗಮ್ಮ ಗೂಳಪ್ಪ ಗೂಳಪ್ಪನವರ್ ಉದ್ಘಾಟಿಸಿದರು. ತದನಂತರ ವೇದಿಕೆ ಕಾರ್ಯಕ್ರಮ ಜರಗಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದೊಡವಾಡದ ಶ್ರೀ ಜಡಿಸಿದ್ದೇಶ್ವರ ಶ್ರೀಗಳು, ಏಣಿಗಿ ಬಂಗಾರ ಅಜ್ಜನ ಮಠದ ವಿರುಪಾಕ್ಷ ಮಹಾಸ್ವಾಮಿಗಳು, ಮುಖ್ಯ ಅತಿಥಿಗಳಾಗಿ ಬೈಲಹೊಂಗಲದ ಜನಪ್ರಿಯ ಶಾಸಕರಾದ ಶ್ರೀ ಮಹಾಂತೇಶ್ ಕೌಜಲಗಿ, ಊಡಿಕೇರಿ ಪಿ ಕೆ ಪಿ ಎಸ ನ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಗೊಳಪ್ಪನವರ ಹಾಗೂ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಮಹಾಬಲೇಶ್ವರ ಗೂಳಪ್ಪ ಗೂಳಪ್ಪನವರ್, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಿ ಜಿ ಬಿಲ್ ಶಿವಣ್ಣವರ, ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯ ಅಧ್ಯಕ್ಷರಾದ ಮಂಜುನಾಥ್ ಬೋಳಶೆಟ್ಟಿ, ದೊಡವಾಡ ಠಾಣೆಯ ಪಿಎಸ್ಐ ಎಚ್ ಕೆ ಪಾಟೀಲ್, ಕಿತ್ತೂರಿನ ಸಿಪಿಐ ಶಿವಾನಂದ ಗುಡುಗನಟ್ಟಿ ಆಗಮಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಬಿ ಎಸ್ ಧೆಮನಗೌಡ್ರ ನಿರ್ದೇಶಕರು ಸಮನ್ವಿ ನವೋದಯ ತರಬೇತಿ ಕೇಂದ್ರ ಊಡಿಕೆರಿ, ಸ್ವಾಗತವನ್ನು; ಆರ್ ಎನ್ ಅಬ್ಬಾರ ಶಿಕ್ಷಕರು ವಂದನಾರ್ಪಣೆಯನ್ನು : ಕಲ್ಲಪ್ಪ ಹಿತ್ತಿಲಮಣಿ ನಡೆಸಿದರು. ಹಾಗೂ ಇದೇ ಸಂದರ್ಭದಲ್ಲಿ ಗ್ರಾಮದ ಗಣ್ಯರು ಹಿರಿಯರು ಯುವಕರು ಮಹಿಳೆಯರು ಪಾಲ್ಗೊಂಡಿದ್ದರು.

Leave a Comment

error: Content is protected !!