ಬೆಳಗಾವಿ : ಸಮೀಪದ ಬಸವನ ಕುಡಚಿ ಶಿವಬಸವ ಶಿವಾಲಯ ನವಗ್ರಹ ಮಂದಿರದಲ್ಲಿ ರಾಜ್ಯಮಟ್ಟದ ಉಚಿತ ವಧು-ವರರ ಸಮ್ಮೇಳನವನ್ನು ನಮ್ಮ ಕನ್ನಡಿಗರ ಬಳಗ ಬನವಿ ಫೌಂಡೇಶನ್ ಗೋಕಾಕ್ ಇವರಿಂದ ಆಯೋಜಿಸಲಾಗಿತ್ತು ಸಮ್ಮೇಳನದಲ್ಲಿ ನಾಲ್ಕು ಸಾವಿರ ಜನ ಸೇರಿದ್ದರು ಪರಮಪೂಜ್ಯ ನೀಲಕಂಠ ಶಾಸ್ತ್ರಿಗಳು ಹಾಗೂ ಕೇದಾರ ಪೀಠದ ಮು ತ್ನಾಳದ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆಯ ನಿರ್ದೇಶಕ ಬಾಳು ಮೂತಗಿ ಕರವೇ ಅಧ್ಯಕ್ಷ ಮಹಾಂತೇಶ್ ರಣಗಟ್ಟಿಮಠ ಗಡಿನಾಡು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ್ ಬಂಗಿ ನಮ್ಮ ಕನ್ನಡಿಗರ ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ್ ಶಿಗ್ಗಾವಿ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಫರೀದಾ ನದಾಫ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸತ್ಯವ ಕಾಂಬಳೆ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಸವಿತಾ ಶಿಗ್ಗಾವಿ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಪ್ರಜ್ವಲನೆ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು ನಮ್ಮ ಕನ್ನಡಿಗರ ಬಳಗದ ರಾಜ್ಯಾಧ್ಯಕ್ಷರಾದ ಬಾಲಚಂದ್ರ ಬನವಿ ಸರ್ವರನ್ನು ಉದ್ದೇಶಿಸಿ ಮಾತನಾಡಿದರು ಆಗಮಿಸಿದ ಎಲ್ಲರಿಗೂ ಸವಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಮದುವೆ ಮಾಡಿಸುವುದು ಪುಣ್ಯದ ಕೆಲಸವಾಗಿದ್ದು ಪುಣ್ಯದ ಬದಲು ಇಂದು ಏಜೆಂಬನವಿ ಹಣಗಳಿಸುವುದಕ್ಕೆ ಮುಂದಾಗಿದ್ದಾರೆ ಇದರಿಂದ ತಂದೆ ತಾಯಿಗಳಿಗೆ ವಧು ವರರನ್ನು ಸೇರಿಸುವುದು ಕಷ್ಟವಾಗಿದೆ ಹಣ ಕಳೆದುಕೊಳ್ಳುವ ಭೀತಿ ಎದುರಾಗಿದೆ ಇದನ್ನು ತಪ್ಪಿಸಲು ಉಚಿತ ವಧು ವರರ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಬಾಲಚಂದ್ರ ಬನವಿ ಹೇಳಿದರು.












