ಬೆಂಗಳೂರು : ಹೈದರಾಬಾದ್ ನಿಂದ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟಿದ್ದ ೧೫ ವರ್ಷದ ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ ಆರಿಪ್ ನೀಡಿದ್ದು ಆರಿಪ್ ಬಸ್ಸಿನಲ್ಲಿ ಕೋ ಡ್ರೈವರ್ ಕೆಲಸ ನಿಮಿತ್ತ ಇದ್ದು ಯುವತಿ ಮಾರ್ಗಮಧ್ಯೆ ಮೊಬೈಲ್ ಸ್ವಿಚ್‌ಆಫ್ ಆಗಿದ್ದರಿಂದ ಚಾಲಕನಿಗೆ ಚಾರ್ಜ್ ಹಾಕುವಂತೆ ಮೊಬೈಲ್ ಕೊಟ್ಟಿದ್ದು, ಸ್ವಲ್ಪ ಸಮಯದ ಬಳಿಕ ಮೊಬೈಲ್ ತೆಗೆದುಕೊಳ್ಳಲು ಹೋದಾಗ ಬಾಲಕಿ ಜೊತೆ ಆತ ಅಸಭ್ಯವಾಗಿ ವರ್ತಿಸಿದ್ದಾನೆ. ಕಿಸ್ ಕೊಟ್ಟರೆ ಮೊಬೈಲ್ ವಾಪಸ್ ಕೊಡುವುದಾಗಿ ಯುವತಿಗೆ ಹೇಳಿದ್ದಾನೆ ಸ್ಪೇರ್ ಡ್ರೈವರ್ ಆರೀಫ್.
ಯುವತಿ ವಿರೋಧಿಸಿದಾಗ ನಂತರ ಬಸ್ಸು ಚಲಿಸುವಾಗ ಯುವತಿ ಮಲಗಿದ್ದ ಸೀಟ್ ಗೆ ಬಂದು ಕಿಸ್ ಕೊಡಲು ಪದೆ ಪದೇ ಕಾಟಮಾಡುತ್ತಿದ್ದು ರಾತ್ರಿಯಿಡೀ ಯುವತಿಗೆ ಲೈಂಗಿಕ ಕಿರುಕುಳ ಮಾಡಿದ್ದಾನೆ ಯುವತಿ ಬೇಸತ್ತು ಅಣ್ಣ ತಾಯಿಗೆ ಕರೆಮಾಡಿ ವಿಷಯ ತಿಳಿಸಿದ್ದಾಳೆ.
ನಂತರ ಬಸ್ಸು ಬರುವುದನ್ನೆ ಕಾಯುತ್ತ ನಿಂತಿದ್ದ ಈ ಬಸ್ ಇಂದು ಬೆಳಗ್ಗೆ ನಗರದ ಬಸವೇಶ್ವರ ವೃತ್ತದ ಬಳಿ ಬರುತ್ತಿದ್ದಂತೆ ಚಾಲಕನನ್ನು ಹೊರಗೆಳೆದು ಅರೆ ಬೆತ್ತಲೆಗೊಳಿಸಿ, ಥಳಿಸಿದ್ದಾರೆ. ಆರೋಪಿ ಆರಿಪ್ ವಿಚಾರಣೆ ಸಮಯ ತಪ್ಪಾಯ್ತು ಎಂದು ತಪ್ಪು ಒಪ್ಪಿಗೆ ನಿಡಿದ್ದಾನೆ.
ನಂತರ ಯುವತಿಯ ಅಣ್ಣ ತಾಯಿಯ ಮಹಿಳಾ ಸಹಾಯವಾಣಿ ಕಾಲ ಮಾಡಿ ಪೋಷಕರು ಆರೋಪಿಯನ್ನು ಪೋಲಿಸರಿಗೆ ಒಪ್ಪಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೈಗ್ರೌಂಡ್ ಠಾಣೆ ಪೊಲೀಸರು ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
“ಬೇಟಿ ಬಚಾವ ಬೇಟಿ ಪಡಾವ”












