ಚನ್ನಮ್ಮನ ಕಿತ್ತೂರು : ಐತಿಹಾಸಿಕ ಸ್ಥಳ ರಾಣಿ ಚೆನ್ನಮ್ಮಾಜಿಯ ಹೋರಾಟದ ಪುಣ್ಯಭೂಮಿಯಾಗಿರುವ ಕಿತ್ತೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಜೋರಾಗಿತ್ತು ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕಿನ ತಹಶಿಲ್ದಾರರ ಕಲ್ಲನ್ನಗೌಡ ಧ್ವಜಾರೋಹಣ ಕಾರ್ಯಕ್ರಮ ಜರುಗಿತು ನಂತರ ರಾಣಿ ಚೆನ್ನಮ್ಮಾಜಿಯ ಅಶ್ವರೂಢ ಪುತ್ಥಳಿ ಎದುರಿಗೆ ತಾಲೂಕ ಆಡಳಿತ ವತಿಯಿಂದ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಜನಪ್ರಿಯ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರ್ನಾಟಕದ ಏಕೀಕರಣಕ್ಕಾಗಿ ಹಲವಾರು ಮಹನೀಯರು ಶ್ರಮಿಸಿದ್ದು ಅವರಿಗೆ ನಾವು ಗೌರವ ಸಲ್ಲಿಸಬೇಕಾದರೆ ಕನ್ನಡಿಗರೆಲ್ಲರೂ ಒಂದಾಗಿ ಜಾತಿ ಮತ ಧರ್ಮಗಳನ್ನು ದೂರವಿಟ್ಟು ನಾವೆಲ್ಲರೂ ಕನ್ನಡಿಗರು ಎಂಬ ಭಾವನೆ ತಾಳಿ ಸಾಮರಸ್ಯದ ಬದುಕನ್ನು ಬದುಕಬೇಕು ಎಂದರು ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಕರ್ನಾಟಕ ಸಂಪತ್ ಭರಿತವಾದ ರಾಜ್ಯ ಇಲ್ಲಿಯ ಗಿರಿ ಶಿಖರಗಳು ಪವಿತ್ರವಾದ ನದಿಗಳು ಜನರ ಜೀವನಾಡಿ ಯಾಗಿವೆ ಬಸವಾದಿ ಶರಣರು ಕಟ್ಟಿದ ನಾಡು ದಾಸ ಶ್ರೇಷ್ಠ ಕನಕದಾಸ ಕುವೆಂಪು ರಂತಹ ಮಹಾನ್ ದಾರ್ಶನಿಕರು ರಾಣಿ ಚೆನ್ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟಿಪ್ಪು ಸುಲ್ತಾನ್ ರಂತಹ ಹೋರಾಟಗಾರರನ್ನು ಜನ್ಮ ವಿತ್ತ ಭೂಮಿ ಇಲ್ಲಿ ನಾವು ಹುಟ್ಟಿರುವುದು ಒಂದು ಸೌಭಾಗ್ಯ ಭಾರತ ದೇಶದಲ್ಲಿ ಅಭಿವೃದ್ಧಿಶೀಲ ರಾಜ್ಯಗಳಲ್ಲಿ ಕರ್ನಾಟಕ ಗುರುತಿಸಿಕೊಂಡಿದ್ದು ಸಂಪತ್ ಭರಿತ ರಾಜ್ಯವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ನಾಗರತ್ನ ಕೊಳ್ಳಿ ಸಾಹಿತಿ ಎಂಎಂ ಸಂಗನವರ್, ಉಮಾದೇವಿ ಪಾಟೀಲ್, ಮಹದೇವ ತುರುಮರಿ, ಮಹದೇವ್ ಬಿ ಬಿ ಕಾದ್ರೊಳ್ಳಿ ಅವರನ್ನು ಸತ್ಕರಿಸಲಾಯಿತು. ತಹಶಿಲ್ದಾರರ ಕಲ್ಲನಗೌಡ ಪಾಟೀಲ, ತಾಪಂ ಇ ಓ ಮಸಳಿ ಸಿ ಪಿ ಐ ಶಿವಾನಂದ ಗುಡುಕನಟ್ಟಿ, ಪಿಎಸ್ ಐ ಪ್ರವೀಣ್ ಜೀ, ಬಿಇಒ ಚನ್ನಬಸಪ್ಪ ತುಬಾಕಿ ಪಪಂ ಮುಖ್ಯ ಅಧಿಕಾರಿ ಮಲ್ಲಯ್ಯ ಹಿರೇಮಠ್ ಪಪಂ ಅಧ್ಯಕ್ಷ ಜೈ ಸಿದ್ದರಾಮ ಮಾರಿಹಾಳ, ಅಪ್ಸಾಕ ಹವಾಲ್ದಾರ್ ಕೃಷ್ಣ ಬಾಳೆಕುಂದರಗಿ, ಬಸವರಾಜ ಸಂಗೊಳ್ಳಿ ಸೇರಿದಂತೆ ಪಟ್ಟಣ ಪಂಚಾಯ್ತಿಯ ಸರ್ವ ಸದಸ್ಯರು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ನಂತರ ಭುವನೇಶ್ವರಿಯ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು ಮೆರವಣಿಗೆಯಲ್ಲಿ ವಿವಿಧ ಇಲಾಖೆ ಹಾಗೂ ಶಾಲೆಗಳಿಂದ ಆಗಮಿಸಿದ ರೂಪಕಗಳು ಜನರನ್ನು ಆಕರ್ಷಿಸಿದವು












