ಚನ್ನಮ್ಮನ ಕಿತ್ತೂರು : ಸಾರ್ವಜನಿಕರ ಬಳಕೆಗೆ ಇದ್ದ ಹಳೆ ಬಸ್ ನಿಲ್ದಾಣವನ್ನು ವ್ಯಾಪಾರ ಮಳಿಗೆಗಳನ್ನಾಗಿ ಪರಿವರ್ತಿಸಿರುವುದನ್ನು ವಿರೋಧಿಸಿ, ಅವುಗಳನ್ನು ಕೂಡಲೇ ತೆರವುಗೊಳಿಸಿ ಪುನಃ ಬಸ್ ನಿಲ್ದಾಣವನ್ನಾಗಿ ಮಾಡುವವರೆಗೆ ನಾಳೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಪ್ರವೀಣ ಸರದಾರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಬೇಕಿದ್ದ ಬಸ್ ನಿಲ್ದಾಣದ ಜಾಗವನ್ನು ವಾಣಿಜ್ಯ ಮಳಿಗೆಗಳನ್ನಾಗಿ ಮಾಡಿರುವುದು ಜನವಿರೋಧಿ ಧೋರಣೆಯಾಗಿದೆ. ಈ ಮಳಿಗೆಗಳನ್ನು ತಕ್ಷಣವೇ ತೆರವುಗೊಳಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತೆ ಬಸ್ ನಿಲ್ದಾಣವನ್ನಾಗಿ ಪುನರಾರಂಭಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹೋರಾಟಕ್ಕೆ ಕಬ್ಬು ಬೆಳೆಗಾರರ ಸಂಘದ ಸದಸ್ಯರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆಯ ರಾಜ್ಯ ಘಟಕ ಸೇರಿದಂತೆ ಹಲವು ಪ್ರಮುಖ ಸಂಘಟನೆಗಳು ಸಂಪೂರ್ಣ ಬೆಂಬಲ ಘೋಷಿಸಿದ್ದು, ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿವೆ.
ಬ್ರೇಕಿಂಗ್ ನ್ಯೂಸ್: ಹಳೆ ಬಸ್ ನಿಲ್ದಾಣ ತೆರವಿಗೆ ನಾಳೆ ಬೃಹತ್ ಹೋರಾಟದ ಕರೆ !

