Search
Close this search box.

ಮಾದ್ಯಮವು ಯಾರಿಗೂ ಸಮನ್ವಯ ಇರುವುದಿಲ್ಲ ‌: ಶಾಸಕ‌ ಬಾಬಾ ಸಾಹೇಬ ಪಾಟೀಲ

ಚನ್ನಮ್ಮನ ಕಿತ್ತೂರು : ತಾಲ್ಲೂಕಿನ ಡೊಂಬರಕೊಪ್ಪ  ಪ್ರವಾಸಿ ಮಂದಿರದಲ್ಲಿ ‌“ದಲಿತವಾಣಿ” ಡಿಜಿಟಲ್ ಮೀಡಿಯಾ ಸುದ್ದಿ ವಾಹಿಣಿಯ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ಸಂಭ್ರಮದಿಂದ ನೆರವೇರಿತು. ಈ ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದರ ಶಾಸಕ ಬಾಬಸಾಹೇಬ ಪಾಟಿಲ್ ಮಾಹಾನಾಯಕರಾದ ಬುದ್ದ, ಬಸವ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಹಾಗೂ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಬಾಬಸಾಹೇಬ ಪಾಟಿಲ ಸಮಾಜಮುಖಿ ಕಾರ್ಯದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು ಮಿಡಿಯಾಗಳು ಸಾರ್ವಜನಿಕರ ನೋವು-ನಲಿವಿಗೆ ಸ್ಪಂದಿಸಬೇಕು. ಇಂದಿನ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ಲಾಷ್
ಹೋಲಿಸಿಕೊಂಡಂತೆ ಕ್ಷಣಿಕವಾಗಿ ಮಿನುಗಿ ಮಾಯವಾಗುತ್ತವೆ. ಆದರೆ ಪ್ರಿಂಟ್ ಮಾಧ್ಯಮ ಹಾಗಲ್ಲ, ನಿನ್ನೆದಿನದ ಸುದ್ದಿಯೂ ನಾಳೆ ಜನಮನದಲ್ಲಿ ಉಳಿಯುತ್ತದೆ. ಮನುಷ್ಯ ತಿಳಿಯದೆ ತಪ್ಪು ಮಾಡಿದಾಗ ಅವನನ್ನು ತಿದ್ದುವುದು ಮಾಧ್ಯಮದ ಕರ್ತವ್ಯ ಹಾಗೆಯೇ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸುವ ದೊಡ್ಡ ಜವಾಬ್ದಾರಿ ಪತ್ರಕರ್ತರ ಮೇಲಿದೆ.

ರಾಜಕಾರಣಿಗಳು ಹಾಗೂ ಅಧಿಕಾರಿಗಳಷ್ಟೇ ಅಲ್ಲ, ಕೆಲವೊಮ್ಮೆ ಪತ್ರಕರ್ತರೂ ತಪ್ಪು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು ತಮ್ಮ ಅನುಭವದಿಂದ ಅವರನ್ನು ತಿದ್ದಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಫ್. ಜಕಾತಿ ಮಾತನಾಡಿ ಸಾರ್ವಜನಿಕರಿಗೆ ಆಗುವ ಅನ್ಯಾಯಗಳನ್ನು ಎತ್ತಿ ತೋರಿಸಿ, ಅವರಿಗೆ ನ್ಯಾಯ ಒದಗಿಸುವ ಸೇತುವೆಯಂತೆ ಮಾಧ್ಯಮ ಕೆಲಸ ಮಾಡಬೇಕು. ದಲಿತೆವಾಣಿ ಇಂತಹ ಸಮಾಜಮುಖಿ ಕಾರ್ಯದಲ್ಲಿ ಉತ್ತರೋತ್ತರವಾಗಿ ಬೆಳೆಯಲಿ ಎಂದು ಎಂದು ಶುಭ ಹಾರೈಸಿದರು. ಅಪ್ಪೆಸಿ ದಳವಾಯಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ ಬುದ್ಧ, ಬಸವ, ಅಂಬೇಡ್ಕರರ ತತ್ವಾಧಾರದಲ್ಲಿ ದಲಿತವಾಣಿ ತಲುಪದ ಧ್ವನಿಗೆ ಸ್ಪಂದಿಸಿ ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸಲಿ ಎಂದರು.

ಸಂಪಾದಕ ರಾಜು ಜಾಂಗಟಿ ಮಾತನಾಡಿ “ದಲಿತ ವಾಣಿ” ಕೇವಲ ದಲಿತರಿಗಾಗಿ ಮಾತ್ರವಲ್ಲ, ಇದು ಎಲ್ಲಾ ವರ್ಗದ ಜನರ ಪರವಾಗಿ ಧ್ವನಿಯೆತ್ತುವ ಡಿಜಿಟಲ್ ಮಿಡಿಯಾ. ಸಮಾಜದ ಪ್ರತಿಯೊಂದು ವರ್ಗದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ವೇದಿಕೆಯಾಗುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವರದಿಗಾರ ಬಸವರಾಜ ಚಿನಗುಡಿ,  ಮಹಾಂತೇಶ ಹಿರೇಮಠ, ಪ್ರದೀಪ ಮೇಲಿನಮನಿ, ಕಲ್ಲಪ್ಪ ಅಗಸಿಮನಿ, ಪ್ರವೀಣ ಗೀರಿ ಕಿತ್ತೂರು ಕಾಂಗ್ರೇಸ್ ಮಂಡಳ ಅಧ್ಯಕ್ಷ ಸಂಗನಗೌಡ ಪಾಟೀಲ, ವಿಜಯಕುಮಾರ ಶಿಂಧೆ, ನ್ಯಾಯವಾದಿ ಚಿಕ್ಕನ್ನವರ ಸೇರಿದಂತೆ ಹಲವರು ಕಾರ್ಯಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮುದಕಪ್ಪ ಮರಡಿ, ಸುರೇಶ ಹೂಲಿಕಟ್ಟಿ, ಮಡಿವಾಳಪ್ಪ ವರಗಣ್ಣವರ, ವೈಡಿ ಗೋಪಾಲ, ಸುನೀಲ ಘೀವಾರಿ, ರಮೇಶ ಮೋಖಾಶಿ, ಕ್ರಿಷ್ಣ ಬಾಳೆಕುಂದರಗಿ ಅಶೋಕ ಮಾಳಗಿ ಸೇರಿದಂತೆ ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರದ ಅತಿಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತಿ ಇದ್ದರು.

Leave a Comment

error: Content is protected !!