Search
Close this search box.

ಬೆಳ್ಳಂಬೆಳಗ್ಗೆ ಕಿತ್ತೂರಲ್ಲಿ ಗುಂಡಿನ ಸದ್ದು : ಗ್ಯಾಂಗ್ ರೇಪ್ ಆರೋಪಿ ರಮೇಶ್ ಕಿಲ್ಲಾರ್ ಕಾಲಿಗೆ ಗುಂಡೇಟು

ಚನ್ನಮ್ಮನ ಕಿತ್ತೂರು : ದರೋಡೆ, ಗ್ಯಾಂಗ್ ರೇಪ್ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ಕಿತ್ತೂರು ಪಟ್ಟಣದ ಹೊರ ವಲಯದಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ. ಆರೋಪಿ ರಮೇಶ್ ಕಿಲ್ಲಾರ್ ನನ್ನು ಬೆಳಗಿನ ಜಾವ 6 ಗಂಟೆಗೆ ಆರೋಪಿ ಬಂಧಿಸಲು ಹೋದಾಗ ಘಟನೆ ನಡೆದಿದೆ.

ಪೊಲೀಸ್ ಪೇದೆ ಷರೀಫ್ ದಫೇದಾರ್ ಗೆ ಚಾಕು ಇರಿದು ಪರಾರಿಯಾಗುವ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಪಿಎಸ್‌ಐ ಪ್ರವೀಣ್ ಗಂಗೊಳ್ಳಿ ಎಚ್ಚರಿಕೆ ನೀಡಿದರೂ ದಾಳಿ ಮಾಡಿ ತಪ್ಪಿಸಿಕೊಳ್ಳಲು ‌ಪ್ರಯತ್ನ ಹಿನ್ನೆಲೆ ಆರೋಪಿ ಕಾಲಿಗೆ ಗುಂಡೇಟು ನೀಡಿದ್ದಾರೆ.

ಆರೋಪಿ ಮೇಲೆ ನಾಲ್ಕು ಡಕಾಯಿತಿ, ತಲಾ ಒಂದು ದರೋಡೆ, ಸಾಮೂಹಿಕ ಅತ್ಯಾಚಾರ, ಶಸ್ತ್ರಾಸ್ತ್ರ ಪ್ರಕರಣ ಮತ್ತು ಇತರೆ‌ ಮೂರು ಪ್ರಕರಣಗಳಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ. ಹಲವು ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದ ಎನ್ನಲಾಗಿದೆ. ಸ್ವಯಂ ರಕ್ಷಣೆಗಾಗಿ, ಸಬ್‌ ಇನ್‌ಸ್ಪೆಕ್ಟರ್ ಪ್ರವೀಣ ಗಂಗೋಳ್ಳಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಆರೋಪಿ ಮತ್ತು ಪಿಎಸ್ಐ ಸೇರಿ ಮೂವರು ಸಿಬ್ಬಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಸ್ಪತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಭೇಟಿ ನೀಡಿ, ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿದರು.

 

Leave a Comment

error: Content is protected !!