ಚನ್ನಮ್ಮನ ಕಿತ್ತೂರು : ತಾಲೂಕಿನ ಹಿರೇನಂದಿಹಳ್ಳಿಯ ಶ್ರೀ ನಾಗಭೂಷಣ ಶಿವಯೋಗಿಗಳವರ ಸರ್ಕಾರಿ ಪ್ರೌಢಶಾಲೆ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. 2025 ರ ಆಗಸ್ಟ್ 22 ರಂದು ಚೆನ್ನಮ್ಮನ ಕಿತ್ತೂರು ತಾಲೂಕು ಮಟ್ಟದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕುಸ್ತಿ, ಚೆಸ್ ಮತ್ತು ಯೋಗ ಕ್ರೀಡೆಗಳಲ್ಲಿ ಶಾಲೆಯ ಮಕ್ಕಳು ತಾಲೂಕು ಮಟ್ಟದಲ್ಲಿ ಮೊದಲ ಕ್ರೀಡಾ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾ ಪಟುಗಳ ಆಯ್ಕೆ ನಡೆಸುವಾಗ ಶಾಲೆಯಲ್ಲಿರುವ ಮಕ್ಕಳಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆ ? ಅವರ ದೈಹಿಕ ಸದೃಢತೆ, ಕೌಶಲಗಳನ್ನು ಗುರುತಿಸಿ, ಆ ಮಕ್ಕಳಿಗೆ ವಿಶೇಷ ತರಬೇತಿ ನೀಡುತ್ತೇವೆ. ಎಂದು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗಂಗಪ್ಪ ಫ ತಿಪ್ಪನ್ನವರ ಅವರು ‘ಸಮಯವಾಣಿ’ಗೆ ತಿಳಿಸಿದರು. ಕ್ರೀಡೆಯಲ್ಲಿ ಭಾಗವಹಿಸಿದ ಮಕ್ಕಳ ವಿವರಗಳನ್ನು ಈ ಕೆಳಗಿನಂತಿವೆ.
ಪುರುಷರ ತಂಡ
ಚೆಸ್ : ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕಾರ್ತಿಕ್ ಪೂಜಾರಿ 10ನೇಯ ತರಗತಿ, ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ನಾಗರಾಜ್ ಕುರುಬಗಟ್ಟಿ 67 ಕೆಜಿ ಮತ್ತು ವಿಜಯ್ ಜುಲ್ಪಿ 57 ಕೆಜಿ.
ಬಾಲಕರ ತಂಡ ಯೋಗ : ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 14 ವರ್ಷದ ವಯೋಮಿತಿಯಲ್ಲಿ ಬಾಲಕರ ತಂಡ ಸಂಪ್ರದಾಯ ಯೋಗ ಈರಯ್ಯ ಪೂಜೆರ, ಅಥ್ಲೆಟಿಕ್ ಸಿಂಗಲ್ ಶ್ರೀಶೈಲ್ ಪೂಜೆರ, ಕಲಾತ್ಮಕ ಜೋಡಿಯೋಗ ಬಸವರಾಜ ಹುರಕಡ್ಲಿ ಮತ್ತು ಆನಂದ ಹುಜರಾತಿ, ತಾಳಬದ್ಧ ಜೋಡಿ ಯೋಗ ಮಂಜು ಶೇಗುಣಸಿ ಮತ್ತು ಧನುಷ್ ಇಜಾರಿ.
ಬಾಲಕಿಯರ ತಂಡ ಯೋಗ : ಸಂಪ್ರದಾಯಕ ಯೋಗ ಜ್ಯೋತಿ ಪ ಪಟಾತ್, ಕಲಾತ್ಮಕ ಸಿಂಗಲ್ ಯೋಗ ಜ್ಯೋತಿ ಬಳಿಗಾರ, ಕಲಾತ್ಮಕ ಜೋಡಿ ಯೋಗ ಗೌರಮ್ಮ ದೊಡ್ಡಮನಿ ಮತ್ತು ಜ್ಯೋತಿ ಪಟಾತ, ತಾಳಬದ್ದ ಜೋಡಿ ಯೋಗ ಗೌರಮ್ಮ ದೊಡಮನಿ ಮತ್ತು ತನ್ಮಯ್ ಕೊಡ್ಲಿ.
17 ವರ್ಷದ ವಯೋಮಿತಿ ಯೋಗ ತಂಡ
ಬಾಲಕಿಯರ ವಿಭಾಗ : ಕಲಾತ್ಮಕ ಯೋಗ ಸಿಂಗಲ್ ನೇಹಾ ಹಿತ್ತಲಮನಿ, ಕಲಾತ್ಮಕ ಯೋಗ ಜೋಡಿ ಗೀತಾ ಹಂಚಿನಮನಿ ಮತ್ತು ಸಪ್ನ ದಳವಾಯಿ, ತಾಳಬದ್ದ ಜೋಡಿ ಯೋಗ ಪ್ರತಿಭಾ ಪೂಜೆರ ಮತ್ತು ಪ್ರಿಯಾ ದಳವಾಯಿ,
ಬಾಲಕರ ವಿಭಾಗ : ಕಲಾತ್ಮಕ ಸಿಂಗಲ್ ಯೋಗ ಮಡಿವಾಳಯ್ಯ ಮೆಟಲ್ ಮಠ, ತಾಳಬದ್ದ ಜೋಡಿ ಯೋಗ ಬಸವರಾಜ್ ಹಡಪದ ಮತ್ತು ವಿಜಯ್ ಪೂಜಾರಿ.
ಮೇಲಿನ ಎಲ್ಲಾ ಕ್ರೀಡಾಪಟುಗಳು ತಾಲೂಕು ಮಟ್ಟದ ಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಸಾಧನೆ ಮಾಡಿದ ಮಕ್ಕಳಿಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಶಾಲೆಯ ಮುಖ್ಯೋ ಪಾಧ್ಯಾಯರು ಹಾಗೂ ಗುರುವೃಂದ, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮದ ಗುರು ಹಿರಿಯರು ಮಕ್ಕಳ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.












