Search
Close this search box.

ದುಂದು ವೆಚ್ಚ ಮಾಡದೇ ಅರ್ಥಪೂರ್ಣವಾಗಿ ಯುವ ಉದ್ಯೋಗಿ ಶ್ರೀ ಶಿವಕುಮಾರ್ ವಿ. ದಾಸನಕೊಪ್ಪ

ಚನ್ನಮ್ಮನ ಕಿತ್ತೂರು : ತಾಲ್ಲೂಕಿನ ಹಿರೇನಂದಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸಮೃದ್ಧಿ ಕೃಷಿ ಕೇಂದ್ರ ಮಾಲಿಕರು, ಯುವ ಉದ್ಯೋಗಿ ಶ್ರೀ ಶಿವಕುಮಾರ ವೀರೂಪಕ್ಷಿ ದಾಸನಕೊಪ್ಪ ಅವರು 26 ನೇ ವರ್ಷದ ಹುಟ್ಟು ಹಬ್ಬ ಹಾಗೂ ಸಮೃದ್ಧಿ ಕೃಷಿ ಕೇಂದ್ರದ ಮೂರನೆಯ ವಾರ್ಷಿಕೋತ್ಸವದ ಶುಭ ಸಂದರ್ಭದ ಅಂಗವಾಗಿ ದುಂದು ವೆಚ್ಚ ಮಾಡದೇ ಅರ್ಥಪೂರ್ಣವಾಗಿ ತಾನು ಕಲಿತ ಸರಕಾರಿ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಬಾಟಲಗಳು ಹಾಗೂ ಸಿಹಿ ಪ್ರತಿಯೊಂದು ಮಕ್ಕಳಿಗೆ ವಿತರಿಸುವುದರ ಮೂಲಕ ಹುಟ್ಟು ಹಬ್ಬ ಹಾಗೂ ಸಮೃದ್ಧಿ ಕೃಷಿ ಕೇಂದ್ರದ ಮೂರನೆಯ ವಾರ್ಷಿಕೋತ್ಸವ ಆಚರಿಸಿಕೊಂಡರು.

ಶಿವಕುಮಾರ ಮಾತನಾಡಿ ನನ್ನದೊಂದು ದೊಡ್ಡ ಕನಸು ಇತ್ತು  ಸ್ವಉದ್ಯೋಗ ಮಾಡಬೇಕು ಕೃಷಿ ಕ್ಷೇತ್ರದಲ್ಲಿ ಅಂತ ಅದು ಇಂದು ಕನಸು ನನಸಾಗಿದೆ ಅದು ರೈತ ಕ್ಷೇಮಾಭಿವೃದ್ಧಿ ಕೇಂದ್ರ ಬಹಳ ಸಂತೋಷ ಕೊಡುತ್ತದೆ ನನ್ನ ಬೆಳವಣಿಗೆ ಜೊತೆಗೆ ನನ್ನ ಉದ್ಯೋಗ ಸಹ‌ ಬೆಳವಣಿಗೆ ಹೊಂದಿದೆ ಸದಾ ತಮ್ಮಲ್ಲರ ಪ್ರೊತ್ಸಾಹ ಆಶ್ರಿರ್ವಾದ ಇರಲಿ ಪ್ರತಿ ವರ್ಷ ನಿಮ್ಮ ಜೊತೆಗೆ ಹೊಸ ಯೋಜನೆಯೊಂದಿಗೆ ನಿಮ್ಮೊಂದಿಗೆ ಇರುತ್ತಾನೆ ಎಂದು ಶಾಲೆ ಮಕ್ಕಳ ಜೊತೆಗೆ ಖುಷಿ ಹಚ್ಚಿಕೊಂಡರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷ ಗುರುಶಿದ್ದಪ್ಪ ದಾಸನಕೊಪ್ಪ, ಎಸ್ ಡಿ ಎಮ್ ಸಿ‌ ಅಧ್ಯಕ್ಷ ಮಲ್ಲಪ್ಪ ಹಿತ್ತಲಮನಿ,‌ ಅಜ್ಜಪ್ಪ ಸರಸಟ್ಟಿ, ಉಳವಪ್ಪ ಫಕ್ಕಿರನ್ನವರ, ಬಿಜೆಪಿ ಯುವ ಮುಖಂಡ ರಮೇಶ ದಾಸನಕೊಪ್ಪ, ನಾಗರಾಜ ದೊಡಮನಿ, ವಿರೂಪಾಕ್ಷಪ್ಪ ದಾಸನಕೊಪ್ಪ, ಮಡಿವಾಳಪ್ಪ ದಾಸನಕೊಪ್ಪ ಹಾಗೂ ಸಮಯವಾಣಿ ಸಂಪಾದಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಇಂದಿನ ಯುವ ಪೀಳಿಗೆ ಹಾಗೂ ಈ ಶಾಲೆ ಮಕ್ಕಳಿಗೆ ಇದೊಂದು ಉತ್ತಮ ಉದಾಹರಣೆ ವಾಗಿದ್ದು ನಾಳೆ ನೀವು ಸಹ ನೌಕರಿ ಇರಬಹುದು ಉದ್ಯೋಗ, ಇನ್ನಿತರ ಪ್ರಮುಖ ಸ್ಥಾನವನ್ನು ಪಡೆದಾಗ ನಾವು ಕಲಿತ ಶಾಲೆ ಊರಿನ ಸಂಸ್ಕಾರ ಗುರು ಹಿರಿಯರನ್ನು ಗೌರವುಸುವ ಕೆಲಸ ನಿಮ್ಮಿಂದವಾಗಬೇಕು ಇಂದಿನ ಈ ಕಾರ್ಯಕ್ರಮ ನಿಮಗೆ ಒಳ್ಳೆಯ ಮಾರ್ಗದರ್ಶನ ಎಂದು ಆಶಯ ಪ್ರಾಸ್ತಾವಿಕ ಭಾಷಣ ಮಾಡಿದರು. ಶಾಲೆಯ ಹಿರಿಯ ಶಿಕ್ಷಕ ಶ್ರೀ ನಾಗಭೂಷಣ ಹುಲೆಪ್ಪನವರಮಠ ಮಾತನಾಡಿ ಪ್ರಸ್ತುತ ಸಮಯದಲ್ಲಿ ಹುಟ್ಟು ಹಬ್ಬದ ಹೆಸರಿನಲ್ಲಿ ಯುವ ಪೀಳಿಗೆಯಿಂದ ಹಿಡಿದು ಹಿರಿಯರು ಸಹ ಇಂದು ಕೇಕ್ ಕತ್ತರಿಸುವುದು ಪಟಾಕಿ ಹಾರಿಸುವುದು ಮುಂತಾದ ದುಂದು ವೆಚ್ಚಗಳನ್ನು ಮಾಡುತ್ತಿದ್ದಾರೆ ಅದನ್ನು ಬಿಟ್ಟು ಇಂಥ ಒಳ್ಳೆಯ ಸಾರ್ವಜನಿಕ ಹಿತಾ ಶಕ್ತಿ ಕಾರ್ಯಕ್ರಮ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯ ಪ್ರತಿಯೊಬ್ಬರಿಗೂ ಈ ಕಾರ್ಯಕ್ರಮ ಒಂದು ಮಾದರಿ ಆಗಿದೆ ಎಂದು ಪ್ರಸ್ತಾವಿಕ ನುಡಿಗಳನ್ನು ನುಡಿದರು,

ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ SDMC ಅದ್ಯಕ್ಷ ‌ಮಲ್ಲಪ್ಪ ಹಿತ್ತಲಮನಿ ಮಾತನಾಡಿ ವಿದ್ಯೆಯ ಮಹತ್ವವನ್ನು ತಿಳಿಸಿಕೊಡುತ್ತಾ ಈ ಒಂದು‌ ಕಾರ್ಯಕ್ರಮ ನಮಗೆ ಬಹಳ ಸಂತೋಷ ಕೊಡುತ್ತದೆ ‌ಸರ್ಕಾರಿ ಶಾಲೆಗಳಿಗೆ ಪ್ರಸ್ತುತ ಸಮಯದಲ್ಲಿ ಯುವ ಜನರು ಬಂದು ಪ್ರತಿಯೊಬ್ಬರು ಸರ್ಕಾರದ ‌ಜೊತೆಗೆ ಕೈ ಜೋಡಿಸಿ ಸಮಾಜಮುಖಿ ಕಾರ್ಯಗಳನ್ನು ‌ಮಾಡಬೇಕು ನೀರಿನ ಬಾಟಲಗಳನ್ನು ವಿತರಿಸಿ ಧಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಎಸ್ ಎಸ್ ಗಾಣಗಿ, ಗುರುಗಳು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಜೆ ಎನ್‌ ಆಲದಕಟ್ಟಿ ನಿರೂಪಿಸಿದರು. ಶಾಲೆಯ ಶ್ರೀ ಎಂ ಆರ್ ಬೋಗೂರ, ಪ್ರಧಾನ ಗುರುಗಳು, ಶ್ರೀ ಎನ್ ಆಯ್ ಹುಲೆಪ್ಪನವರಮಠ,  ಶ್ರೀ ಎಸ್ ಎಸ್ ಗಾಣಗಿ, ಶ್ರೀ ಎಸ್ ಸಿ ದೊಡಮನಿ,  ಶ್ರೀ ಜಿ ಆಯ್ ಕರಿಸಿದ್ಧನವರ ಶ್ರೀ ಆರ್ ಬಿ ಪಾಟೀಲ,  ಶ್ರೀ ಎಸ್ ಡಿ ತೋಪಖಾನೆ, ಶ್ರೀ ಜೆ ಎನ್‌ ಆಲದಕಟ್ಟಿ, ಸಹ ಶಿಕ್ಷಕರು. ಸರಕಾರಿ ಶಾಲಾ ಮಕ್ಕಳಿಂದ ಗೌರವಪೂರ್ವಕವಾಗಿ ದಾನಿಗಳನ್ನು ‌ಸನ್ಮನಿಸಿದರು ಈ ಸಂದರ್ಭದಲ್ಲಿ ಊರಿನ ಪ್ರಮುಖರು ಸಹ ಭಾಗಿಯಾಗಿದ್ದರು.

Leave a Comment

error: Content is protected !!