ಬೈಲಹೊಂಗಲ: ಮಲ್ಲಮ್ಮನ ಬೆಳವಡಿ ಗ್ರಾಮದ ಬೆಳವಡಿ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಕಿತ್ತೂರು ಕರ್ನಾಟಕ ಸೇನಾ ಮಹಿಳಾ ಘಟಕವನ್ನು ಸ್ಥಾಪಿಸಲಾಯಿತು. ಕಾರ್ಯಕ್ರಮವು ಬುಧವಾರ, 28.05.2025 ರಂದು ಸಂಜೆ 7:00 ಗಂಟೆಗೆ ನಡೆಯಿತು. ರೊಟ್ಟಯ್ಯನವರಮಠದ ವೇದಮೂರ್ತಿ ರುದ್ರಯ್ಯ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಅಧ್ಯಕ್ಷತೆಯನ್ನು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈರಣ್ಣ ಕರಿಕಟ್ಟಿ ಮಾತನಾಡುತ್ತಾ ಕನ್ನಡ ನಾಡು ನುಡಿಗಾಗಿ ಹಗಲಿರು ಶ್ರಮಿಸಲಕ್ಕೆ ಮಹಿಳಾ ಘಟಕ ಸ್ಥಾಪಿಸುತ್ತಿದ್ದು ಹೆಮ್ಮೆಯ ಸಂಗತಿ ಇದರ ಜೊತೆ ಮಹಿಳಾ ಸಬಲೀಕರಣ ಮತ್ತು ಅನ್ಯಾಯದ ವಿರುದ್ಧ ದ್ವನಿ ಎತ್ತು ವಂತಾಗಬೇಕು ಎಂದು ಹೇಳಿದರು.
ತಾಲೂಕ ಅಧ್ಯಕ್ಷೆ ಶ್ರೀಮತಿ. ಸವಿತಾ ಪಾಟೀಲ್ ಜಿಲ್ಲಾಧ್ಯಕ್ಷರ ಅಪ್ಪಣೆ ಮೇರೆಗೆ ಬೆಳವಡಿ ಹೋಬಳಿಗೆ ಗೌರವ ಅಧ್ಯಕ್ಷೆಯನ್ನಾಗಿ ಶ್ರೀಮತಿ ಶೋಭಾ ಶಂಕರ್ ಪತ್ತಾರ್. ಅಧ್ಯಕ್ಷೆಯನ್ನಾಗಿ ಶ್ರೀಮತಿ ಮಲ್ಲವ್ವ ಗೋದೊಳ್ಳಿ. ಉಪಾಧ್ಯಕ್ಷರನ್ನಾಗಿ ಸಂಗೀತ ಕಿನೇಕರ. ಕಾರ್ಯದರ್ಶಿಯಾಗಿ ಶಿಲ್ಪಾ ಕಕ್ಕಯ್ಯನವರ್. ಖಜಾಂಚಿ ಸುಮಿತ್ರಾ ವೀರಣ್ಣ ಕರಿಕಟ್ಟಿ. ಸಂಚಾಲಕಿಯಾಗಿ. ಮಲಪ್ರಭಾ ಪೂಜಾರಿ. ಸಹ ಕಾರ್ಯದರ್ಶಿಯಾಗಿ. ಶ್ರೀಮತಿ ಸುಮಂಗಲ ಪರಮನಾಯ್ಕರ್. ಇವರನ್ನು ಆಯ್ಕೆಮಾಡಿ ಸಾಮೂಹಿಕವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯ ವಿಶ್ವನಾಥ್ ಕರಿಕಟ್ಟಿ ಗಜಾನಂದ ರಾನೋಜಿ. ಕಿತ್ತೂರು ಕರ್ನಾಟಕ ಸೇನೆಯ ಬಸವರಾಜ್ ಗುಡ್ಡದಮಠ ಮಹಾಂತೇಶ್ ಕರಿಕಟ್ಟಿ ರಮಜಾನ್ ನದಾಫ್ ಉಪಸ್ಥಿತರಿದ್ದರು ಈ ಕಾರ್ಯಕ್ರಮದಲ್ಲಿ ನೂರಾರು ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು. ಲಲಿತಾ ಹುಂಬಿ ನಿರೂಪಿಸಿದರು. ನೇತ್ರ ಬಿಸರೊಳ್ಳಿ. ಸ್ವಾಗತಿಸಿ ವಂದಿಸಿದರು




2 thoughts on “ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಕಿತ್ತೂರು ಕರ್ನಾಟಕ ಸೇನೆ ಮಹಿಳಾ ಘಟಕ ಸ್ಥಾಪನೆ”
Drive sales, collect commissions—join our affiliate team! https://shorturl.fm/rKlRf
Boost your income—enroll in our affiliate program today! https://shorturl.fm/WwAmu