Search
Close this search box.

ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಗುಟ್ಕಾ ತಿನ್ನಂಗಿಲ್ಲ, ಸಾರಾಯಿ ಕುಡಿಯಂಗಿಲ್ಲ..! ಗರ್ಭಗುಡಿ ಪ್ರವೇಶಕ್ಕೆ 10 ಪೂಜಾರಿಗಳಿಗೆ ಮಾತ್ರ ಅವಕಾಶ ಪ್ರಾಧಿಕಾರದಿಂದ ಮಹತ್ವದ ಆದೇಶ

ಬೆಳಗಾವಿ : ಐತಿಹಾಸಿಕ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗಾಗಿ ಜಿಲ್ಲಾಡಳಿತ ಹಾಗೂ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಹಗಲಿರುಳು ಶ್ರಮಿಸುತ್ತಿದ್ದು, ಕ್ಷೇತ್ರದ ಸ್ವಚ್ಚತೆಗೆ ಬಿಗಿಯಾದ ರೂಲ್ಸ್ ತರಲು ಮುಂದಾಗಿದೆ. ಇನ್ಮುಂದೆ ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಗುಟಕಾ ತಿಂದು ಸಿಕ್ಕಲ್ಲಿ ಉಗುಳುವ ಹಾಗಿಲ್ಲ, ಹಾಗೆಯೆ ಮದ್ಯ ಸೇವನೆಯನ್ನು ನಿರ್ಬಂಧಿಸಲಾಗಿದೆ. ಯಲ್ಲಮ್ಮ ಗುಡ್ಡ‌ ಪ್ರವೇಶದ ಸಂದರ್ಭದಲ್ಲಿ ತಪಾಸಣೆ ನಡೆಯಲಿದೆ.

ವಾಸ್ತು ಪ್ರಕಾರವೇ ಸವದತ್ತಿ ಯಲ್ಲಮ್ಮ ದೇವಸ್ಥಾನ ಗರ್ಭಗುಡಿ ಹಾಗೂ ಒಳಾಂಗಣ ನಿರ್ಮಾಣಕ್ಕೆ ಕ್ರಮವಹಿಸಲಾಗಿದ್ದು, ಈಗಾಗಲೇ ಕೇಂದ್ರ ಹಾಗೂ
ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ಮೀಸಲಿಟ್ಟಿವೆ. ಇನ್ನೂ ದೇವಸ್ಥಾನ ಗರ್ಭಗುಡಿಯಲ್ಲಿ ಪೂಜೆ ಸೇರಿದಂತೆ ಸೇವಾ ಕಾರ್ಯ ಮಾಡಲು ಕೇವಲ 10 ಪೂಜಾರಿಗಳಿಗೆ ಮಾತ್ರ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.

Leave a Comment

error: Content is protected !!