Search
Close this search box.

ಚನ್ನಮ್ಮನ ಕಿತ್ತೂರು ಉತ್ಸವ-2025 : ಪೂರ್ವಭಾವಿ ಸಭೆ

ಬೆಳಗಾವಿ ಜಿಲ್ಲೆ : ಚನ್ನಮ್ಮನ ಕಿತ್ತೂರು ಉತ್ಸವ-2025ರ ಕಾರ್ಯಕ್ರಮವನ್ನು ಅಚ್ವುಕಟ್ಟಾಗಿ ಆಯೋಜಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು 2025 ನೇ ಸಾಲನ ಕಿತ್ತೂರು ಉತ್ಸವವನ್ನು ಆಚರಿಸುವುದಕ್ಕಾಗಿ ಚರ್ಚಿಸಲು ಹಾಗೂ ಸಲಹೆ ಪಡೆಯಲು ಸಭೆ ಜರುಗಿಸುವ ಕುರಿತು. ಶ್ರೀ ಪ್ರವೀಣ ಜೈನ ಮಾನ್ಯ ಉಪವಿಭಾಗಾಧಿಕಾರಿಗಳು ಬೈಲಹೊಂಗಲ ಇವರ ಪತ್ರ ಸಂಖ್ಯೆ:ಕಿತ್ತೂರ ಉತ್ಸವ/ವಿವ-01/2025, ದಿನಾಂಕ : 29-09-2025. ಭಾರತ ಸ್ವಾತಂತ್ರ್ಯ ಹೋರಾಟದ ವೀರರಾಣಿ ಕಿತ್ತೂರ ಚೆನ್ನಮ್ಮನವರ ಗೌರವಾರ್ಥ ಪ್ರತಿ ವರ್ಷ ಅಕ್ಟೋಬರ-23 ರಿಂದ ಮೂರು ದಿನಗಳ ಕಾಲ ಕಿತ್ತೂರಿನ ಕೋಟೆ ಆರವರಣದಲ್ಲಿ ಬೆಳಗಾವಿ ಜಿಲ್ಲಾಡಳತದಿಂದ ಕಿತ್ತೂರ ಉತ್ಸವವನ್ನು ಆಚರಿಸಲಾಗುತ್ತಿದೆ.

ಹಾಗೂ ಈ ವರ್ಷವೂ ಕೂಡಾ “ ಕಿತ್ತೂರು ಉತ್ಸವವನ್ನು ಆಚರಿಸುವ ವಿಷಯದಲ್ಲಿ ಚರ್ಚಿಸಲು ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆಯಲು ಮಾನ್ಯ ಶ್ರೀ ಸತೀಶ ಲ ಜಾರಕಿಹೊಳಿ, ಮಾನ್ಯ‌ ಲೋಕೋಪಯೋಗಿ ಸಚಿವರು ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ ” ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ ಅರಳಕಟ್ಟೆ ವರ್ತುಳ (ಸರ್ಕಲ್‌) ಕಿತ್ತೂರಿನಲ್ಲಿ ಸೋಮವಾರ ದಿನಾಂಕ : 06-10-2025 ರಂದು ಮಧ್ಯಾಹ್ನ 02-30 ಗಂಟೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.

ರಾಜ್ಯ ಮಟ್ಟದ ಕಿತ್ತೂರು ಉತ್ಸವ ವಾಗಿದ್ದು ಕಿತ್ತೂರು ಹಾಗೂ ಸುತ್ತಮುತ್ತಲಿನ ನಾಗರಿಕರು, ವಿವಿಧ ಸಂಘಟನೆಗಳ ಹಾಗೂ  ಸ್ವಸಹಾಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನ ಪ್ರತಿನಿಧಿಗಳು, ಮಹಿಳಾ ಸಂಘ ಸಂಸ್ಥೆಗಳು, ಸರ್ಕಾರದ ನಾಮನಿರ್ದೇಶಿತ ಸದಸ್ಯರುಗಳು, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿಗಳ ಪ್ರತಿನಿಧಿಗಳು, ಎಲ್ಲರೂ ಸಭೆಯಲ್ಲಿ ಭಾಗಿಯಾಗಿ, ಉತ್ಸವದ ರೂಪರೇಷಗಳ ಕುರಿತು ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಉಪವಿಭಾಗಾಧಿಕಾರಿಗಳು ಬೈಲಹೊಂಗಲ ಹಾಗೂ ಚನ್ನಮ್ಮನ ಕಿತ್ತೂರು ತಹಶಿಲ್ದಾರ ಈ ಮೂಲಕ ಪ್ರಕಟಣೆಯಲ್ಲಿ ತಿಳಸಲಾಗಿದೆ.

Leave a Comment

और पढ़ें

Cricket Live Score

और पढ़ें

error: Content is protected !!