ವಿದ್ಯಾ ಬುದ್ಧಿ ಕಲಿಸಿದ ಗುರುಗಳಿಗೆ ಸನ್ಮಾನ ಮಾಡಿ ಋಣ ಮುಕ್ತರಾಗಿದ್ದೀರಿ : ಪರಮಪೂಜ್ಯ ಮೃತ್ಯುಂಜಯ ಸ್ವಾಮಿ

ವರದಿ, ಎಂ ರಾಜಿಬಾಯಿ, ಸಮಯವಾಣಿ ನ್ಯೂಸ್ ರಾಜ್ಯ ಉಪಸಂಪಾದಕರು

ಖಾನಾಪುರ : ತಾಲೂಕಿನ ಗಂದಿಗವಾಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 93 – 94ನೇ ಸಾಲಿನ ಹಾಗೂ ಪರಮ ಜ್ಯೋತಿ ಪ್ರೌಢಶಾಲೆಯ 96 – 97ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮೇಳನವನ್ನು ಪರಂ ಜ್ಯೋತಿ ಪ್ರೌಢಶಾಲೆಯ ಆವರಣದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಗಂಧಿಗವಾಡ ಗ್ರಾಮದ ರಾಜಗುರು ಕಲ್ಮಠದ ಪರಮಪೂಜ್ಯ ಮೃತ್ಯುಂಜಯ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು ನ್ಯಾಯವಾದಿ ಉಮೇಶ್ ಮೂಲಿಮನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಪ್ರಧಾನ ಗುರುಗಳಾದ ಎಸ್ ಎಂ ನಾಯಕ್ ಹಾಗೂ ಬಿಎಂ ಹಿರೇಮಠ ಅವರು ಆಗಮಿಸಿದ್ದರು ಪ್ರಾಥಮಿಕ ಶಾಲೆಯ ನಿವೃತ್ತ ಗುರುಗಳಾದ ಆರ್ ಸಿ ಪಾಟೀಲ್ ಜಿ ವಿ ಭಂಡಾರಿ ಎಂಜಿ ಭಜಂತ್ರಿ ಎಸ್ಎಫ್ ಬೀಳ ಮರಿ ಕೆಆರ್ ದೇಸೂರಕರ ಆಯ ಎಮ್ ಭಾಗವಾನ್ ಎಸ್ ಎಸ್ ಹೋಟೆಗನ್ನವರ್ ಶ್ರೀಮತಿ ಆರ್ ಸಿ ಕಾಪ್ಸೆ ಹಾಗೂ ಪ್ರೌಢಶಾಲೆಯ ನಿವೃತ್ತಿ ಗುರುಗಳಾದ ವಿ ಆರ್ ಪಾಟೀಲ್ ಎಸ್ ಆರ್ ಎಮ್ಮಿ ಎಬಿ ಮೂಲಿಮನಿ ಪಿಎಸ್ ಹುಲಮನಿ ಪಿ ವೈ ಪಾಟೀಲ್ ಎಸ್ ಜಿ ಕುಲಕರ್ಣಿ ಬಿವಿ ಕರವೀರ ನವರ ಎಲ್ಎಸ್ ಕುಂದೆ ಕಾರ್ ಗುರುಗಳನ್ನು ವಿದ್ಯಾರ್ಥಿಗಳು ಆತ್ಮೀಯವಾಗಿ ಸತ್ಕರಿಸಿ ಗುರುಗಳ ಋಣದಿಂದ ಮುಕ್ತರಾದರು.

ಈ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಹಾಗೂ ಗುರುಗಳ ಬಗ್ಗೆ ಮಾತನಾಡುತ್ತಾ ಭಾವುಕರಾದರು ಡಾಕ್ಟರ್ ಪವನ್ ಕುಲಕರ್ಣಿ ಉದ್ಯಮಿ ಮಹಾಂತೇಶ್ ಚಿಕ್ಕಮಠ ಅಶ್ಪಾಕ್ ಭಾಗವಾನ್ ಪ್ರತಿಭಾ ಬೈಲೂರ ಸವಿತಾ ಕುಡಚಿ ವೇದಿಕೆ ಮೇಲೆ ತಮ್ಮ ಅನುಭವ ನುಡಿಗಳನ್ನು ಹಂಚಿಕೊಂಡರು ಉಮೇಶ ಚಿಕ್ಕಮಠ ಮಂಜುನಾಥ್ ಚಿಕ್ಕಮಠ ವಾಸುದೇವ್ ಮಿರಜ್ಕರ್ ರಮೇಶ್ ವೇರನೆ ಕರ್ ರಮೇಶ್ ದೇವಲತ್ತಿ ಸಿದ್ದಗೌಡ ಕರಲಿಂಗನವರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಿದ್ದಗೊಳಿಸಿದ್ದರು ಪ್ರಸನ್ನ ಕುಲಕರ್ಣಿ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಶಿಕ್ಷಕ ಚೆನ್ನಪ್ಪ ಯಲಮಕ್ ನವರ್ ಸರ್ವರನ್ನು ಸ್ವಾಗತಿಸಿದರು ಜನಪ್ರಿಯ ಶಿಕ್ಷಕರಾದ ಮಂಜುನಾಥ್ ಶೆಟ್ಟಿ ನವರ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕಿ ಸಾಕೀರ ಕಿತ್ತೂರ್ ವಂದಿಸಿದರು ಕಾರ್ಯಕ್ರಮಕ್ಕಿಂತ ಮುಂಚೆ ಆಗಮಿಸಿದ ಎಲ್ಲಾ ಗುರುಗಳ ಮೇಲೆ ಪುಷ್ಪವೃಷ್ಟಿ ಗೈದು ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ಸವಿ ನೆನಪಿಗಾಗಿ ಸಸಿ ನೆಟ್ಟು ನೀರು ಉಣಿಸಲಾಯಿತು ಗುರು ವೃಂದದವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ವಿದ್ಯಾರ್ಥಿಗಳಿಂದ ಗುರುಗಳಿಗೆ ಅಭೂತಪೂರ್ವ ಸನ್ಮಾನ ಕಾರ್ಯಕ್ರಮ ಜರುಗಿತು ಸಭೆಯನ್ನು ಉದ್ದೇಶಿಸಿ ಪೂಜ್ಯ ಮೃತ್ಯುಂಜಯ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡುತ್ತಾ ಈ ಕಾರ್ಯಕ್ರಮ ಜೀವನದ ಸಾರ್ಥಕ ಕ್ಷಣವಾಗಿದ್ದು ತಮಗೆ ವಿದ್ಯಾ ಬುದ್ಧಿಯನ್ನು ಕರುಣಿಸಿದ ಗುರುಗಳಿಗೆ ಸನ್ಮಾನವನ್ನು ಮಾಡಿ ತಾವೆಲ್ಲರೂ ಕೂಡ ಋಣ ಮುಕ್ತರಾಗಿದ್ದೀರಿ ಎಲ್ಲಾ ಗುರುಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ನಿಮ್ಮ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು

Leave a Comment

error: Content is protected !!