ಬೆಳಗಾವಿಯಲ್ಲಿ ಭವ್ಯ ಬಸವ ಮೆರವಣಿಗೆ ಯುವ ಸಮುದಾಯ ಪಾಲ್ಗೊಳ್ಳಿ: ಗುರು ಮೆಟಗುಡ್ಡ ಮನವಿ

ಬೈಲಹೊಂಗಲ : ಲಿಂಗಾಯತ ಸಮಾಜ ಸ್ಥಾಪಕ, ವಿಶ್ವಗುರು ಬಸವೇಶ್ವರರ ಜಯಂತಿ ನಿಮಿತ್ತ ಬಸವ ಜಯಂತಿ ಮಹೋತ್ಸವ ಸಮಿತಿ, ಬೆಳಗಾವಿ ವತಿಯಿಂದ ಗಡಿಭಾಗ ಬೆಳಗಾವಿ ನಗರದಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರದ ಬೃಹತ ಮೆರವಣಿಗೆಯು ಏ.26 ರಂದು , ಸಂಜೆ 4 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಜರಗಲಿದ್ದು, ಯುವ ಜನತೆ, ಸೇರಿ ಎಲ್ಲರೂ ಈ ಮಹಾ ಮೆರವಣಿಗೆಯಲ್ಲಿ ಪಾಲ್ಗೊಂಡು ಬಸವ ವೈಭವಕ್ಕೆ ಮೆರಗು ತರಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಗುರು ಮೆಟಗುಡ್ಡ ಮನವಿ ಮಾಡಿದರು.

ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಜಿಲ್ಲೆಯ ಸರ್ವ ಬಸವಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಈಗಾಲೇ ಕಾರ್ಯಕ್ರಮದ ಅಂಗವಾಗಿ ಹಲವಾರು ಪೂರ್ವಭಾವಿ ಸಭೆಗಳನ್ನು ಆಯೋಜಿಸಲಾಗಿದ್ದು ಸಮಾಜಕ್ಕೆ ಕರ್ನಾಟಕ ಸಾಂಸ್ಕೃತಿಕ ನಾಯಕ, ಬಸವಣ್ಣನವರ ಕೊಡುಗೆ ಅಪಾರವಾಗಿದ್ದು, ಅವರು ಸಮಾಜ ಸುಧಾರಣೆಗೆ ನೀಡಿದ ತತ್ವಗಳನ್ನು ಯುವಕರಲ್ಲಿ ಬಿಂಬಿಸುವ ನಿಟ್ಟಿನಲ್ಲಿ ಈ ಬ್ರಹತ ಕಾರ್ಯಕ್ರಮ ಆಯೋಜಿಲಾಗಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ ಪೂಜ್ಯರು, ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ ಸದಸ್ಯರು, ಉದ್ಯಮಿಗಳು, ಬಸವಾಭಿಮಾನಿಗಳು ಸೇರಿ ಸಹಸ್ರಾರು ಜನತೆ ಪಾಲ್ಗೊಳ್ಳಲಿದ್ದು, ಈ ಬ್ರಹತ್ತ ಮೆರವಣಿಗೆ ಸಮಾಜ ಸುಧಾರಣೆಗೆ ಯುವ ಸಮುದಾಯಕ್ಕೆ ಒಂದು ಸಂದೇಶವಾಗಲಿದೆ. ಜಾತಿ, ಮತ, ಪಕ್ಷ ಭೆದ ಮರೆತು ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು ಅವರು ಸಮಸ್ತ ಬಸವಾಭಿಮಾನಿಗಳಲ್ಲಿ ಮನವಿ ಮಾಡಿದರು.

ವರದಿ:ಈಶ್ವರ ಶಿಲ್ಲೇದಾರ.

Leave a Comment

error: Content is protected !!