ಕಸಮಳಗಿಯಲ್ಲಿ ಮುಕುಟ ಸಪ್ತಮಿ ಸಂಭ್ರಮ : 10 ಸಾವಿರಕ್ಕೂ ಅಧಿಕ ಜಿನಭಕ್ತರು ಭಾಗಿ

ಖಾನಾಪುರ : ತಾಲೂಕಿನ ಸುಕ್ಷೇತ್ರ ಕಸಮಳಗಿಯಲ್ಲಿ ಮುಕುಟ ಸಪ್ತಮಿ ನಿಮಿತ್ತ ಇತಿಹಾಸ ಪ್ರಸಿದ್ಧ ತ್ರಿವರ್ಣ ಪರಿವರ್ತಿತ ಭಗವಾನ್ ಶ್ರೀ 1008 ವರಸಿದ್ಧಿ ಪಾರ್ಶ್ವನಾಥ ಜೈನ ಬಸದಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಸಡಗರ–ಸಂಭ್ರಮದಿಂದ ಜರುಗಿದವು.

ಮುಕುಟ ಸಪ್ತಮಿಯ ಅಂಗವಾಗಿ ಭಗವಾನ್ ಶ್ರೀ ವರಸಿದ್ಧಿ ಪಾರ್ಶ್ವನಾಥ ತೀರ್ಥಂಕರರಿಗೆ ವಿಶೇಷ ಪಂಚಾಮೃತ ಅಭಿಷೇಕ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 10 ಸಾವಿರಕ್ಕೂ ಅಧಿಕ ಜಿನಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನ ದರ್ಶನ ಪಡೆದು ಪುನೀತರಾದರು. ಇಡೀ ಕಸಮಳಗಿ ಕ್ಷೇತ್ರದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು.ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜೇಂದ್ರ ಜಕ್ಕನ್ನವರ್ ಅವರ ಅಧ್ಯಕ್ಷತೆಯಲ್ಲಿ ಸಂಪೂರ್ಣ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು. ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು, ಸದಸ್ಯರು, ಜಿನಭಕ್ತರು ಹಾಗೂ ಸ್ಥಳೀಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕಸಮಳಗಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಪೂಜಾ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿತ್ತು.

ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜೇಂದ್ರ ಜಕ್ಕನವರ ಸಭೆಯ ಅಧ್ಯಕ್ಷತೆವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬೆಳಿಗ್ಗೆ 6 ಗಂಟೆಗೆ ಭಗವಂತರಿಗೆ ಪಂಚಾಮೃತ ಅಭಿಷೇಕ, ಸರ್ವ ದೋಷ ನಿವಾರಣೆ ನಿರ್ವಾಣ ಲಡ್ಡು ಸಮರ್ಪಣೆ, ಪದ್ಮಾವತಿ ದೇವಿಗೆ ಅಲಂಕಾರ ಮತ್ತು ಉಡಿ ಸಮರ್ಪಣೆ, ಶ್ರೀಕ್ಷೇತ್ರಪಾಲ ಬ್ರಹ್ಮದೇವನಿಗೆ ಉಡುಗೊರೆ, ಸವಾಲ, ಹೀಗೆ ಹಲವಾರು ಕಾರ್ಯಕ್ರಮ ಜರುಗಿದವು.

ಶ್ರವಣಬೆಳಗೊಳ ಸ್ವಸ್ತಿಶ್ರೀ ಡಿ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪುರದ ನಾಂದಣಿ ಜಿನಸೇನ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪುರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಶ್ರವಣಬೆಳಗೊಳ ನೂತನವಾಗಿ ಪಟ್ಟಾಧೀಶರಾದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಪಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ, ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಇವರ ಮಾರ್ಗದರ್ಶದಲ್ಲಿ ಕಾರ್ಯಕ್ರಮ ಜರುಗಿದವು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಗಳಾದ ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಎನ್‌ಡಬ್ಲ್ಯು ಕೆಎಸ್‌ಆರ್‌ಟಿಸಿ ರಾಜ್ಯ ಉಪಾಧ್ಯಕ್ಷ ಸುನೀಲ್ ಹನಮನ್ನವರ, ಎಸ್‌ಡಿಎಂ ಕಾರ್ಯದರ್ಶಿ ಜೀವಂದರ ಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಸುಬಾಸ ಪಾಟೀಲ, ಮುಖಂಡ ಪ್ರಮೋದ ಕೊಚೇರಿ, ಮಾಜಿ ಜಿಪಂ ಸದಸ್ಯ ಜ್ಯೋತಿಬಾ ರೇಮಾನಿ, ಕಾರ್ಯದರ್ಶಿ ಅಭಿನಂದನ ಕೊಚೇರಿ, ಕಾರ್ಯದರ್ಶಿ ಸದಸ್ಯರು ಅಭಯ ಅವಲಕ್ಕಿ, ಡಿ.ಡಿ. ಪಾಟೀಲ, ರಾಜು ಕಟಗೇನವರ, ಸಿ.ಡಿ. ಪಾಟೀಲ, ಸುನೀಲ ಮಡ್ಡಿಮನಿ, ಉದಯ ದಡೋತಿ, ರಾಜಕುಮಾರ ಕಂಚಿ, ದೇವೇಂದ್ರ ಗೌಡರ, ರಾಜುಗೌಡ ಪಾಟೀಲ, ಸಂಜೀವ ಕಂಚಿ, ಅಶೋಕ ಬೆಂಡಿಗೇರಿ, ಗ್ರಾಮದ ಹಿರಿಯರು, ಟ್ರಸ್ಟ್ ಕಮಿಟಿ ಸರ್ವಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು, ರಾಜ್ಯ-ಹೊರರಾಜ್ಯ ಜೈನ ಶ್ರಾವಕ-ಶ್ರಾವಕೀಯರಿದ್ದರು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವರದಿ : ಎಂ ರಾಜಾಬಾಯಿ

Leave a Comment

error: Content is protected !!