|| ಗುರು ಬ್ರಹ್ಮ, ಗುರು ವಿಷ್ಣು ಗುರು ದೇವೋ ಮಹೇಶ್ವರ||
|| ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ||
ಬೈಲಹೊಂಗಲ : ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳ ಬೈಲಹೊಂಗಲ ಘಟಕದ ವತಿಯಿಂದ ಗುರುಪೂರ್ಣಿಮೆ ನಿಮಿತ್ಯ ಗುರುವಂದನೆ ಸಲ್ಲಿಸಲಾಯಿತು. ಗುರು ಪೂರ್ಣಿಮೆಯು ಹಿಂದೂ ಸನಾತನ ಧರ್ಮದಲ್ಲಿ ಬಹಳ ಮಹತ್ವದ ದಿನ, ಈ ನಿಮಿತ್ಯ ಗುರುವಂದನೆ ಸಲ್ಲಿಸಿ, ವ್ಯಕ್ತಿಯನ್ನು ಕತ್ತಲಿನಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ದಾರಿ ತೋರುವವನೇ ಗುರು. ವ್ಯಕ್ತಿಯು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಗುರಿ ತಲುಪಲು ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಇಂತಹ ಪರಮ ಗುರುಗಳನ್ನು ನೆನೆಯುವ ಶ್ರೇಷ್ಠವಾದ ದಿನ ಗುರುಪೂರ್ಣಿಮೆ ಎಂದು ವಿಶ್ವ ಹಿಂದೂ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಪ್ರಮೋದಕುಮಾರ ವಕ್ಕುಂದಮಠ ಹೇಳಿದರು.
ಶ್ರೀ ಮಹಾಂತ ದುರದುಂಡಿಶ್ವರ್ ಮಠ, ಮುರುಗೋಡ ಪರಮ ಪೂಜ್ಯ ಶ್ರೀ ಮ, ನಿ, ಪ್ರ, ಸ್ವ ನೀಲಕಂಠ ಸ್ವಾಮೀಜಿ, ಶಾಖಾ ಮೂರುಸಾವಿರ ಮಠ ಶ್ರೀ ಮ, ನಿ, ಪ್ರ, ಸ್ವ ಪ್ರಭು ನೀಲಕಂಠ ಸ್ವಾಮೀಜಿ ಬೈಲಹೊಂಗಲ, ಶ್ರೀ ಗುರು ಮಡಿವಾಳೇಶ್ವರ ಮಠ ಹೊಸೂರ ಪರಮ ಪೂಜ್ಯ ಶ್ರೀ ಗಂಗಾಧರ ಮಹಾಸ್ವಾಮಿಜಿ. ಶ್ರೀ ಶಿವ ಚಿದಂಬರೇಶ್ವರ ಮಠ ಕೆಂಗೇರಿ ಮುರುಗೋಡ ಪ. ಪೂಜ್ಯ ದಿವಾಕರ ದಿಕ್ಷಿತ ಗುರು ಮಹಾರಾಜರು, ಕುಮಾರೇಶ್ವರ ವಿರಕ್ತಮಠ ಯಕ್ಕುಂಡಿ ಪಂಚಾಕ್ಷರಿ ಮಹಾಸ್ವಾಮೀಜಿ,ನಿತ್ಯಾನಂದ ಆಶ್ರಮ ವಿಜಯಾನಂದ ಸ್ವಾಮೀಜಿ ಬೇವಿನಕೊಪ್ಪ, ಅಲೌಕಿಕ ಧ್ಯಾನ ಮಂದಿರ ಜಾಲಿಕೊಪ್ಪ ಶ್ರೀ ಶಿವಾನಂದ ಗುರೂಜಿ, ಶ್ರೀ ಶ್ರೀವಾತ್ಮನಂದ ಗುರೂಜೀ. ಶ್ರೀ ಸುಖದೇವಾನಂದ ಪುಣ್ಯಾಶ್ರಮದ ಶ್ರೀ ಅಭಿನವ ಸಿದ್ದಲಿಂಗ ಮಹಾ ಸ್ವಾಮೀಜಿ ನಯಾನಗರ, ಶ್ರೀ ನಿತ್ಯಾನಂದ ಆಶ್ರಮ ಬೇವಿನಕೊಪ್ಪ ವಿಜಯಾನಂದ ಸ್ವಾಮೀಜಿ, ಶ್ರೀ ಜಡಿಸಿದ್ದೇಶ್ವರ್ ಶಿವಾಚಾರ್ಯ ಮಹಾ ಸ್ವಾಮೀಜಿ ದೊಡವಾಡ, ಶ್ರೀ ಮ ನಿ ಪ್ರ ಸ್ವ ಮುರುಘರಾಜೇಂದ್ರ ಮಹಾಸ್ವಾಮೀಜಿ ಮುನವಳ್ಳಿ. ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಲಹೊಂಗಲ ವತಿಯಿಂದ ಗುರುಪೂರ್ಣಿಮೆ ನಿಮಿತ್ಯ ಗುರುವಂದನೆ ಸಲ್ಲಿಸಲಾಯಿತು. ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಯೋಗ ಗುರುಕುಲ ಆರೋಗ್ಯಾಲಯ ಹಳೇ ಪ್ರೇರಣಾ ಶಾಲೆಯಲ್ಲಿ ಬಳ್ಳಾರಿ ಅಜ್ಜನವರ ಆಶೀರ್ವಾದ ಪಡೆದು ದರ್ಶನ ಮಾಡಲಾಯಿತು.
ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಪ್ರಮೋದಕುಮಾರ ವಂಕ್ಕುಂದಮಠ, ಸಹ ಕಾರ್ಯದರ್ಶಿ ವಿವೇಕಾನಂದ ಪೂಜಾರ,ವಸಂಪರ್ಕ ಪ್ರಮುಖ ದಯಾನಂದ ಗೆಜ್ಜಿ, ಬೈಲಹೊಂಗಲ ತಾಲೂಕ ಕಾರ್ಯದರ್ಶಿ ಅಶೋಕ ಸವದತ್ತಿ, ಮಠ -ಮಂದಿರ ಸಂಪರ್ಕ ಪ್ರಮುಖ ಮಲ್ಲಿಕಾರ್ಜುನ ಏನಗಿಮಠ, ತಾಲೂಕ ಸಂಪರ್ಕ ಪ್ರಮುಖ ನಾರಾಯಣ ನಲವಡೆ, ವ್ಹಿ ಎಚ್ ಪಿ ನಗರ ಘಟಕ ಅಧ್ಯಕ್ಷರು ಗೌತಮ ಇಂಚಲ, ಸಂಪರ್ಕ ಪ್ರಮುಖ ರಾಜು ಬೊಂಗಾಳೇ, ಕಾರ್ಯದರ್ಶಿ ರಾಜು ಹರಕುಣಿ, ಪ್ರಮುಖ ಕಾರ್ಯಕರ್ತರು ಜಗದೀಶ ಲೋಕಾಪುರ, ಮಹಾಂತೇಶ ಗುಮತಿ, ಚಂದ್ರು ಹನುಮನಾಳ, ಉಳವಪ್ಪ ಬೆಟಗೇರಿ, ಮಹೇಶ ಜಾಧವ, ಚಿದಂಬರ ಮೇಟಿ ಕಾರ್ಯಕರ್ತರು ಉಪಸ್ಥಿತರಿದ್ದರು.




1 thought on “ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಮಾರ್ಗದರ್ಶನ ನೀಡುವವನೇ ಗುರು: ಶ್ರೀ ಪ್ರಮೋದ್ ಕುಮಾರ್ ವಕ್ಕುಂದಮಠ”
Tap into unlimited earnings—sign up for our affiliate program! https://shorturl.fm/OCYsk