Search
Close this search box.

ಸ್ಪರ್ಧೆಯು ಕ್ರೀಡಾಸ್ಪೂರ್ತಿ, ಶಿಸ್ತು, ಸಂಘಿಕ ಹೋರಾಟ ಆರೋಗ್ಯಯುತ ಮನಸ್ಸಿನೊಂದಿಗೆ ಸಂಯೋಜಿಸಿದಾಗ ಯಶಸ್ಸು ಸಾಧಿಸಬಹುದು : ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಕೊಡಗು ಸೈನಿಕ ಶಾಲೆ

ವರದಿ : ಪ್ರಸಾದ ಎಮ್ಎಚ್, ಕೂಡಿಗೆ

ಕೊಡಗು : ಕುಶಾಲನಗರ, ಅಖಿಲ ಭಾರತೀಯ ಸೈನಿಕ ಶಾಲೆಗಳ ಗುಂಪು – ಎಚ್ ಡಿವಿಷನ್ ಹಾಕಿ ಟೂರ್ನಮೆಂಟ್ – 2025 ಜೂನ್ 09 ರಿಂದ 13 ರವರೆಗೆ ಕೊಡಗಿನ ಸೈನಿಕ ಶಾಲೆ ಆಯೋಜಿಸಿದ್ದ ಕೂಡಿಗೆ ಕ್ರೀಡಾ ಶಾಲೆಯ ಆಸ್ಟ್ರೋ ಟರ್ಫ್ ಹಾಕಿ ಮೈದಾನದಲ್ಲಿ ನಡೆಯಿತು.

ಪ್ರಸ್ತುತ ಪಂದ್ಯಾವಳಿಯಲ್ಲಿ ಕೇರಳದ ಸೈನಿಕ ಶಾಲೆ ಕಝಕೂಟಂ, ಆಂಧ್ರಪ್ರದೇಶದ ಸೈನಿಕ ಶಾಲೆ ಕಲಿಕಿರಿ, ತಮಿಳುನಾಡಿನ ಸೈನಿಕ ಶಾಲೆ ಅಮರಾವತಿನಗರ ಮತ್ತು ಅತೀಥೆಯ ತಂಡವಾದ ಸೈನಿಕ ಶಾಲೆ ಕೊಡಗು ಭಾಗವಹಿಸಿದ್ದವು. ಇದರೊಂದಿಗೆ ಪಂದ್ಯಾವಳಿಯಲ್ಲಿ ಪ್ರತಿ ಶಾಲೆಯಿಂದ ಬಾಲಕರ ಜೂನಿಯರ್‌, ಬಾಲಕರ ಸಬ್‌ ಜೂನಿಯರ್‌ ಹಾಗೂ ಬಾಲಕಿಯರ ಜೂನಿಯರ್‌ ಎಂಬ 03 ತಂಡಗಳಿದ್ದವು.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಜೂನ್ 09 ರಂದು ಜರುಗಿತು ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಲೆಯ ಪ್ರಭಾರೆ ಪ್ರಾಂಶುಪಾಲರಾಗಿದ್ದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆಯನ್ನು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಭಾಗವಹಿಸಿದ ತಂಡಗಳು ಮನೋಜ್ಞವಾದ ಪಥಸಂಚಲನ ನಡೆಸಿಕೊಡುವುದರೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳು ಭಾಗವಹಿಸಿದ ಸ್ಪರ್ಧಾಳುಗಳು ತೋರಿದ ಶಿಸ್ತು, ಕ್ರೀಡಾಸ್ಫೂರ್ತಿ ಮತ್ತು ಉತ್ಸಾಹವನ್ನು ಪ್ರಶಂಸಿಸಿದರು. ಪ್ರಸ್ತುತ ಸ್ಪರ್ಧೆಯು ಕ್ರೀಡಾಸ್ಪೂರ್ತಿ ಹಾಗೂ ಸಂಘಿಕ ಹೋರಾಟದಿಂದ, ಆರೋಗ್ಯಯುತ ಮನಸ್ಸಿನೊಂದಿಗೆ ಕೂಡಿರಬೇಕು ಎಂಬ ಸಂದೇಶವನ್ನು ನೀಡಿದರು. ಇದರೊಂದಿಗೆ ಸ್ಪರ್ಧಾಳುಗಳು ತಮ್ಮೆಲ್ಲಾ ಸ್ಪರ್ಧೆಗಳಲ್ಲಿ ಸ್ನೇಹಪೂರ್ವಕವಾದ ಹಾಗೂ ನ್ಯಾಯಯುತವಾದ ಆಟದ ಮೌಲ್ಯಗಳನ್ನು ಪಾಲಿಸಲು ಸ್ಪರ್ಧಾಳುಗಳಿಗೆ ಕರೆನೀಡಿದರು. ಅಂತಿಮವಾಗಿ 2025ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ ಪುಟ್ಬಾಲ್ ಕ್ರೀಡಾಕೂಟ ಪ್ರಾರಂಭವಾಗಿದೆ ಎಂಬ ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಪೂರ್ಣಗೊಳಿಸಿದರು.

ಪ್ರಸ್ತುತ ಪಂದ್ಯಾವಳಿಯ ಸಮಾರೋಪ ಸಮಾರಂಭ ಜೂನ್ 13 ರಂದು ಆಯೀಜಿಸಲಾಗಿದ್ದಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಲೆಯ ಪ್ರಭಾರೆ ಪ್ರಾಂಶುಪಾಲರಾಗಿದ್ದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಆಗಮಿಸಿದ್ದರು. ಈ ಪಂದ್ಯಾವಳಿಯಲ್ಲಿ ಜೂನಿಯರ್‌ ವಿಭಾಗದಿಂದ ಸೈನಿಕ ಶಾಲೆ ಕಝಕೂಟಂ, ಸಬ್‌ ಜೂನಿಯರ್‌ ವಿಭಾಗದಿಂದ ಸೈನಿಕ ಶಾಲೆ ಅಮರಾವತಿನಗರ ಹಾಗೂ ಬಾಲಕಿಯರ ಜೂನಿಯರ್‌ ವಿಭಾಗದಿಂದ ಸೈನಿಕ ಶಾಲೆ ಕಲಿಕಿರಿ ಪ್ರಥಮ ಸ್ಥಾನವನ್ನು ಪಡೆದವು. ಆತಿಥೇಯ ಶಾಲೆಯಾಗಿದ್ದ ಸೈನಿಕ ಶಾಲೆ ಕೊಡಗು ಉತ್ತಮ ಪ್ರದರ್ಶನ ನೀಡಿ ಎರಡನೇ ಸ್ಥಾನವನು ತನ್ನದಾಗಿಸಿಕೊಂಡಿತು. ಈ ಸಾಧನೆಯು ಕಳೆದ ವರ್ಷದ ಸಾಧನೆಗಿಂತ ಉತ್ತಮವಾದ ಸಾಧನೆಯಾಗಿದೆ.

ಈ ಸಂದರ್ಭದಲ್ಲಿ ವಿಜೇತ ತಂಡಗಳಿಗೆ ಪಾರಿತೋಷಕ, ಪದಕ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಮುಖ್ಯ ಅತಿಥಿಗಳು ಆಟಗಾರರ ಆತ್ಮವಿಶ್ವಾಸ, ಕ್ರೀಡಾ ಮನೋಭಾವನೆ ಮತ್ತು ಸಾಂಘಿಕ ಹೋರಾಟದ ಪ್ರದರ್ಶನಕ್ಕೆ ತಮ್ಮ ಶ್ಲಾಘನೆ ವ್ಯಕ್ತಪಡಿಸಿದರು. ಇದರೊಂದಿಗೆ ಅತ್ಯುತ್ತಮ ಆಟಗಾರರು ಮತ್ತು ಗೋಲ್ಕೀಪರ್‌ಗಳ ಅದ್ಭುತ ಪ್ರದರ್ಶನವನ್ನು ಪ್ರಶಂಸಿಸಿದರು. ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದ ಕ್ರೀಡಾ ಶಾಲೆ ಹಾಗೂ ಕರ್ನಾಟಕ ಸರ್ಕಾರದ ಅಭೂತಪೂರ್ವ ಸಹಕಾರಕ್ಕೆ ಅವರು ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಭಾಗವಹಿಸಿದ ಸೈನಿಕ ಶಾಲೆಗಳ ಮೇಲ್ವಿಚಾರಕರು, ಶಾಲೆಯ ಎನ್ ಸಿ ಸಿ ಸಿಬ್ಬಂದಿ ವರ್ಗ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.

2 thoughts on “ಸ್ಪರ್ಧೆಯು ಕ್ರೀಡಾಸ್ಪೂರ್ತಿ, ಶಿಸ್ತು, ಸಂಘಿಕ ಹೋರಾಟ ಆರೋಗ್ಯಯುತ ಮನಸ್ಸಿನೊಂದಿಗೆ ಸಂಯೋಜಿಸಿದಾಗ ಯಶಸ್ಸು ಸಾಧಿಸಬಹುದು : ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಕೊಡಗು ಸೈನಿಕ ಶಾಲೆ”

Leave a Comment

error: Content is protected !!