ಶ್ರೀರಾಮನ ಭಕ್ತನಾದ ಹನುಮಂತನನ್ನು ಎಲ್ಲಾ ಜಾತಿ ಮತ್ತು ಧರ್ಮದ ಜನರು ಪೂಜಿಸುತ್ತಾರೆ. ಆತನನ್ನು ಪೂಜಿಸುವವರಿಗೆ ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾಗುವುದಿಲ್ಲ. : ದೇವಸ್ಥಾನ ಸಮಿತಿಯ ಅಧ್ಯಕ್ಷ ಮಹಾದೇವಪ್ಪ ಹಿತ್ತಲಮನಿ

ಚನ್ನಮ್ಮನ ಕಿತ್ತೂರು : ತಾಲೂಕಿನ ಸುಕ್ಷೇತ್ರ ಅಂಬಡಗಟ್ಟಿಯಲ್ಲಿ ನೂತನವಾಗಿ ನಿರ್ಮಿಸಲಾದ ಹನುಮಂತ ದೇವರ ದೇವಸ್ಥಾನದ ವಾಸ್ತು ಪೂಜಾ ಹಾಗೂ ಹನುಮಂತ ದೇವರ ಮೂರ್ತಿ ಪ್ರತಿಸ್ಥಾಪನೆ ಕಾರ್ಯಕ್ರಮ ಬುಧವಾರ ದಿನಾಂಕ 29.04 2026 ರರಿಂದ ರವಿವಾರ ದಿನಾಂಕ 3 5 2026 ರವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು ಕಾರ್ಯಕ್ರಮದ ಅಂಗವಾಗಿ ನಾಡಿನ ಪ್ರತಿಷ್ಠಿತ ಪೂಜ್ಯಶ್ರೀಗಳಿಂದ ಪ್ರವಚನ ಹಾಗೂ ಮಹಾಪ್ರಸಾದ ಭಜನಾ ಕಾರ್ಯಕ್ರಮಗಳು ಜರುಗಿದವು ಶಾಸಕ ಬಾಬಾ ಸಾಹೇಬ್ ಪಾಟೀಲ್ ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡ್ರು ಚನ್ನರಾಜ ಹಟ್ಟಿ ಹೊಳಿ ಅವರು ಸೇರಿದಂತೆ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗುರು ಮಡಿವಾಳೇಶ್ವರ ಮಠ ಅಂಬಡಗಟ್ಟಿಯ ಪೂಜ್ಯ ಸ್ವಾಮೀಜಿಗಳಾದ ವೀರೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ದೇವಸ್ಥಾನದ ನಿರ್ಮಾಣಕ್ಕೆ ಶ್ರಮಿಸಿದ ಮಹನೀಯರಿಗೆ ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರ ಪರವಾಗಿ ಸತ್ಕರಿಸಲಾಯಿತು ರವಿವಾರ ನಡೆದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ದೇವಸ್ಥಾನ ನಿರ್ಮಾಣದ ರುವಾರಿ ಮಾಜಿ ತಾಪಂ ಸದಸ್ಯ ಮಹದೇವಪ್ಪ ಮಲ್ಲಪ್ಪ ಹಿತ್ತಲ ಮನಿ ಅವರು ಮಾತನಾಡಿ ಹನುಮಂತ ದೇವರ ದೇವಸ್ಥಾನ ಅತ್ಯಂತ ಪುರಾತನವಾದ ದೇವಾಲಯ ಇದರ ಜೀರ್ಣೋದ್ಧಾರಕ್ಕೆ ಸುಮಾರು ಸತತ ಐದು ವರ್ಷಗಳ ಕಾಲ ಪ್ರಯತ್ನಿಸಿ ಗ್ರಾಮಸ್ಥರ ಹಾಗೂ ವಿವಿಧ ದಾನಿಗಳ ಸರ್ಕಾರದ ವಿವಿಧ ಇಲಾಖೆಗಳಿಂದ ಅನುದಾನ ಪಡೆದು ಭಕ್ತರಿಗೆ ಅನುಕೂಲ ಕಲ್ಪಿಸಲು ಸುಸಜ್ಜಿತ ದೇವಸ್ಥಾನ ನಿರ್ಮಿಸಲಾಗಿದೆ ತನು ಮನ ಧನ ನೀಡಿ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೂ ಶುಭವಾಗಲಿ ಆಂಜನೇಯ ಎಲ್ಲರಿಗೂ ಆಶೀರ್ವದಿಸಲಿ ಎಂದರು ಹೇಳಿದರು.

ವಿಜಯ್ ಕುಮಾರ್ ಇಟಗಿ ಹಾಗೂ ಶ್ರೀಶೈಲ್ ಹಿತ್ತಲಮನಿ ನಿರೂಪಿಸಿದರು. ಅಧ್ಯಕ್ಷತೆ ಜಗದೀಶ ಬ ಹಿತ್ತಲಮನಿ. ಜಿಲ್ಲಾ ಪಂಚಾಯತ್ ಇಓ ಉಡುಪಿ ಶಾಮ ಶಿ ಕಾದ್ರೋಳಿ. ಪಾಂಡುರಂಗ ಕುಲಕರ್ಣಿ. ಅದೃಶಪ್ಪ ಕೊಟಬಾಗಿ. ಅಂಬಪ್ಪ ತುರುಮರಿ. ಮಾಜಿ ತಾ. ಪಂ. ಅಧ್ಯಕ್ಷರು ಮೀನಾಕ್ಷಿ ಚಕ್ಕಡಿ. ಬಸವರಾಜ್ ದಾಸ್ತಿಕೊಪ್ಪ. ಅಜ್ಜಪ್ಪಗೌಡ್ರ ಪಾಟೀಲ. ಮಂಜುನಾಥ ಹಳೆಮನೆ. ಶಿವಾನಂದ ಬೆನಚಮರ್ಡಿ. ಬಸವರಾಜ್ ಅಕ್ಕಿ. ಹಾಗೂ ಗ್ರಾಮದ ಹಿರಿಯರು ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Comment

error: Content is protected !!