ಸೈನಿಕ್ ಶಾಲೆ ಕೊಡಗು ಸೇನಾ ರಾಫ್ಟಿಂಗ್ ಘಟಕದ ಸಹಯೋಗದೊಂದಿಗೆ ಕಾವೇರಿ ಮತ್ತು ಬರಪೋಲೆ ನದಿಗಳಲ್ಲಿ ಸೆಪ್ಟೆಂಬರ್ 20 ರಿಂದ 26 ರವರೆಗೆ ರೋಮಾಂಚಕ ರಿವರ್ ರಾಫ್ಟಿಂಗ್ ತರಬೇತಿಯನ್ನು ಯಶಸ್ವಿಯಾಗಿ ಆಯೋಜನೆ

ಕುಶಾಲನಗರ : ಸೈನಿಕ ಶಾಲೆ ಕೊಡಗಿನ ವಿದ್ಯಾರ್ಥಿಗಳು (ಕಡಟ್ ಗಳು) ಮತ್ತು ಸಿಬ್ಬಂದಿಗಾಗಿ ಕಾವೇರಿ ಮತ್ತು ಬರ್ಪೋಳ ನದಿಗಳಲ್ಲಿ ಸಪ್ಟೆಂಬರ್ 20 ರಿಂದ 26 ರವರೆಗೆ ರೋಚಕವಾದ ಏಳು ದಿನಗಳ ರಿವರ್ ರಾಫ್ಟಿಂಗ್ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವು ಶಾಲಾ ಸಮುದಾಯಕ್ಕೆ ವೈಟ್ -ವಾಟರ್ ರಾಫ್ಟಿಂಗ್ ಕ್ರೀಡೆಯ ಮೊದಲ ಅನುಭವವನ್ನು ಒದಗಿಸಿತು. ಈ ತರಬೇತಿಯನ್ನು ಕರ್ನಲ್ ಬಿ. ಎನ್. ಝಾ ಅವರ ನೇತೃತ್ವದ 48 ಸದಸ್ಯರ ಆರ್ಮಿ ರಾಫ್ಟಿಂಗ್ ಘಟಕ ನಡೆಸಿತು. ಅಂತರಾಷ್ಟ್ರೀಯ ಅನುಭವ ಮತ್ತು ಕಾರ್ಯನೈಪುಣ್ಯಕ್ಕಾಗಿ ಖ್ಯಾತಿ ಪಡೆದಿರುವ ಈ ಘಟಕವು ಪ್ರಸ್ತುತ ತನ್ನ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ ದಕ್ಷಿಣ ಭಾರತದ ಹಂತವನ್ನು ಕೈಗೊಂಡಿದೆ. ಲೆಫ್ಟಿನಂಟ್ ಕರ್ನಲ್ ಸಚಿನ್ ಟಿ, ನಿಕಮ್, ಲೆಫ್ಟಿನೆಂಟ್ ಕರ್ನಲ್ ಎಲ್ವಿನ್ ಲಿಂಕನ್, ಮೇಜರ್ ಆರ್, ಅಭಿಷೇಕ್, ಸುಭಾದ‌ ಅಬ್ರಹಾಂ, ಸುಬೇದಾರ್ ಶಿವಕುಮಾರ್, ನಾಯಬ್ ಸುಭಾದಾರ ಪಿ. ಮೊಹಾಪಾತ್ರ ಹಾಗೂ ನಾಯಬ್ ಸುಬೆದಾರ್ ರವಿ ಡಿ.ಆರ್. ಸೇರಿದಂತೆ 48 ಸದಸ್ಯರ ತಂಡಕ್ಕೆ ಸೈನಿಕ ಶಾಲೆ ಕೊಡಗು ಕ್ಯಾಂಪಸ್ ನಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕಳೆದ ಮೂರು ತಿಂಗಳಿನಿಂದ ಕೇರಳದಲ್ಲಿ ತರಬೇತಿ ಹಂತಗಳನ್ನು ಪೂರ್ಣಗೊಳಿಸಿರುವ ಈ ಘಟಕವು ಈಗ ಕರ್ನಾಟಕದಲ್ಲಿ ಶಿಬಿರವನ್ನು ಹೂಡಿದೆ.

ಶಾಲೆಯ ಮೂರು ಜನ ಅಧಿಕಾರಿಗಳು, 18 ಸಿಬ್ಬಂದಿಗಳು (13 ಪುರುಷರು ಮತ್ತು 5 ಮಹಿಳೆಯರು) ಸೇರಿದಂತೆ 141 ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿದರು. ಕಾವೇರಿ ನದಿಯಲ್ಲಿ ನಡೆದ ಈ ತರಬೇತಿಯಲ್ಲಿ ಮುಖ್ಯವಾದ ರಾಫ್ಟಿಂಗ್ ತಂತ್ರಗಳು, ನದಿ ಸುರಕ್ಷತಾ ನಿಯಮಗಳು ಮತ್ತು ತಂಡ ಆಧಾರಿತ ಜಲ ಕ್ರೀಡಾ ಚಟುವಟಿಕೆಗಳ ಮೂಲಕ ನಾಯಕತ್ವದ ಗುಣಗಳನ್ನು ಕಲಿಸಿ ಕೊಡಲಾಯಿತು. ಶಾಲೆಯ ಅಧಿಕಾರಿಗಳಾದ ಕರ್ನಲ್ ಅಮರಫ್ ಜೀತ್ ಸಿಂಗ್ (ಪ್ರಿನ್ಸಿಪಾಲ್), ವಿಂಗ್ ಕಮಾಂಡರ್ ಪ್ರಕಾಶ್ ರಾವ್ (ಅಡ್ಮಿನಿಸ್ಟ್ರೇಟಿವ್ ಆಫೀಸರ್) ಮತ್ತು ಸ್ಕ್ಯಾಡ್ರನ್ ಲೀಡರ್ ಮೊಹಮ್ಮದ್ ಶಾಜಿ (ವೈಸ್ ಪ್ರಿನಶಿಪಾಲ) ಅವರು ಈ ತರಬೇತಿ ಅಧಿವೇಶನಗಳನ್ನು ಸ್ವತಃ ವೀಕ್ಷಿಸಿ ಆರ್ಮಿ ರಾಫ್ಟಿಂಗ್ ಘಟಕದ ವೃತ್ತಿಪರತೆಯನ್ನು ಹಾಗೂ ಕಡಟ್ ಗಳ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಶಿಬಿರವು ಕಡಟ್ ಗಳಿಗೆ ರೋಚಕ ಸಾಹಸ ಕ್ರೀಡೆಯ ಪರಿಚಯ ನೀಡಿದಷ್ಟೇ ಅಲ್ಲದೆ, ಧೈರ್ಯ, ಸಹನೆ ಮತ್ತು ತಂಡ ಭಾವನೆಯಂತಹ ಮಹತ್ವದ ಜೀವನ ಕೌಶಲ್ಯಗಳನ್ನು ಬೆಳೆಸಿತು. ಅಂತರಾಷ್ಟ್ರೀಯ ಅನುಭವ ಹೊಂದಿರುವ ಆರ್ಮಿ ಘಟಕದೊಂದಿಗೆ ತರಬೇತಿ ಪಡೆಯುವ ಅವಕಾಶವು ಪ್ರತಿಯೊಬ್ಬರಿಗೂ ಅದ್ಭುತ ಸುವರ್ಣವಾಕಾಶವನ್ನು ಹಾಗೂ ಪ್ರೇರಣಾದಾಯಕ ಅಧ್ಯಯನ ವಾತಾವರಣವನ್ನು ಒದಗಿಸಿತು. ಸೈನಿಕ ಶಾಲೆ ಕೂಡಗು, ಕರ್ನಲ್ ಬಿ. ಎನ್. ಝಾ ಮತ್ತು ಸಂಪೂರ್ಣ ಆರ್ಮಿ ರಾಫ್ಟಿಂಗ್ ಘಟಕಕ್ಕ, ಅವರ ಅದ್ಭುತ ಕೂಡುಗೆ, ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿತು ಅವರ ಸಾನ್ನಿಧ್ಯ ಮತ್ತು ಮಾರ್ಗದರ್ಶನವು ಕಡಟ್ ಗಳು ಮತ್ತು ಸಿಬ್ಬಂದಿಗಳ ಮೇಲೆ ಅಪಾರವಾದ ಪ್ರಭಾವನ್ನು ಬೀರಿದೆ.

ಪೋಟೋ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ 👇

Leave a Comment

और पढ़ें

Cricket Live Score

और पढ़ें

error: Content is protected !!