ವರದಿ : ಎಮ್ ಎಮ್ ರಾಜಾಬಾಯಿ
ಖಾನಾಪುರ : ತಾಲೂಕಿನ ನಂದಗಡ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿತನಿಗೆ 20 ವರ್ಷ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಶೀಘ್ರವಾಗಿ ನ್ಯಾಯ ಸಿಕ್ಕಿದೆ ಘಟನೆ ಸಂಭವಿಸಿ ಒಂದು ವರ್ಷದಲ್ಲಿಯೇ ಘನ ನ್ಯಾಯಾಲಯದಿಂದ ವಿಚಾರಣೆಯಾಗಿ ಆರೋಪಿಗೆ ಶಿಕ್ಷೆಯಾಗಿದೆ.
ಘಟನೆ ವಿವರ : ಕಳೆದ ವರ್ಷ ಫೆಬ್ರವರಿ 24 ರಂದು ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಾಲ್ಕು ವರ್ಷದ ಬಾಲಕಿಗೆ ಚಾಕಲೇಟ್ ಕೊಟ್ಟು ಪುಸಲಾಯಿಸಿ ತನ್ನ ಮನೆಗೆ ಕರೆದು ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ನಿಸಾರ್ ಅಹ್ಮದ್ ಫಕ್ರು ಸಾಬ್ ಚಾಪ್ಗಾವಿ 68 ವರ್ಷ ಕಾಕರ ಗಲ್ಲಿ ನಂದಗಡ ಈತನ ವಿರುದ್ಧ ದಿನಾಂಕ 27.02.24 ರಂದು ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು ಈ ದೂರನ್ನು ನಂದಗಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಸ್ ಸಿ ಪಾಟೀಲ್ ರವರು ದಾಖಲಿಸಿ ತನಿಖೆ ಪೂರೈಸಿ ದಿನಾಂಕ 17.04.2024 ರಂದು ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪನ ಪತ್ರವನ್ನು ಸಲ್ಲಿಸಿದರು ಸದರಿ ಆರೋಪಿತನಗೆ ದಿನಾಂಕ 28.02.2024 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು ತನಿಕಾ ಸಹಾಯಕ ರಾಗಿ ಶ್ರೀ ಆರ್ ಎಸ್ ಕೆಮಾಲೆ ರವರು ಕರ್ತವ್ಯ ನಿರ್ವಹಿಸಿದ್ದರು.
ಈ ದಿವಸ ದಿನಾಂಕ 03.04.2025 ರಂದು ಮಾನ್ಯ ಪೋಕ್ಸೋ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾಧ ಶ್ರೀಮತಿ ಸಿ ಎಮ್ ಪುಷ್ಪಲತಾ ರವರು ಆರೋಪಿತನಿಗೆ 20 ವರ್ಷ ಜೈಲು ಕಾರಾವಾಸ ಶಿಕ್ಷೆ ಮತ್ತು 10 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದು ಇರುತ್ತದೆ. ಸರ್ಕಾರದ ಪರವಾಗಿ ಶ್ರೀ ಎಲ್ ವಿ ಪಾಟೀಲ್ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು ಸದರಿ ಆರೋಪಿತನು ಈಗ ಹಿಂಡಲಗಾ ಜೈಲಿನಲ್ಲಿ ಇರುತ್ತಾನೆ.











