ಹೆತ್ತ ತಾಯಿ ಹೊತ್ತ ಮಾತೃಭೂಮಿಗೆ ಯಲ್ಲಪ್ಪ ಇಟ್ಟಪ್ಪನವರ್ ಕೀರ್ತಿ ತಂದಿದ್ದಾರೆ : ರವಿ ಪಾಟೀಲ್

ಖಾನಾಪುರ : ತಾಲೂಕಿನ ಗಂದಿಗವಾಡ ಗ್ರಾಮದ ಭಾರತೀಯ ಸೈನಿಕ ಯಲ್ಲಪ್ಪ ರುದ್ರಪ್ಪ ಇಟ್ಟಪ್ಪನವರ ಭಾರತೀಯ ಸೈನ್ಯದಲ್ಲಿ ಸುದೀರ್ಘ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದರು ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಗ್ರಾಮಕ್ಕೆ ಯಲ್ಲಪ್ಪ ಅವರು ಆಗಮಿಸುತ್ತಿದ್ದಂತೆ ಬೀಡಿ ಗ್ರಾಮದ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು ನಂತರ ಗ್ರಾಮದೇವಿಯ ದೇವಸ್ಥಾನಕ್ಕೆ ತೆರಳಿ ದಂಪತಿಗಳು ಮಕ್ಕಳೊಂದಿಗೆ ಪೂಜೆ ಸಲ್ಲಿಸಿದರು ಬಳಿಕ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಛತ್ರಪತಿ ಶಿವಾಜಿ ಮಂದಿರಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು ಮಂದಿರದಲ್ಲಿ ಬೃಹತ್ ಸನ್ಮಾನ ಸಮಾರಂಭವನ್ನು ಯಲ್ಲಪ್ಪ ಹಾಗೂ ಅವರ ಧರ್ಮಪತ್ನಿ ಅವರು ಆಯೋಜಿಸಿದ್ದರು.

ರೈತ ಹೋರಾಟಗಾರ ನೇಗಿಲು ಯೋಗಿ ಸುರಕ್ಷಾ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ರವಿ ಪಾಟೀಲ್ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿ ಭಾರತೀಯ ಸೈನ್ಯದಲ್ಲಿ 28 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿರುವ ಯಲ್ಲಪ್ಪ ಇಟ್ಟಪ್ಪನವರ್ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಭಾರತಮಾತೆಯ ಸೇವೆಯನ್ನು ಮಾಡಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಇವರ ನಿವೃತ್ತಿ ಜೀವನ ಸುಖಮಯವಾಗಲಿ ಹಾಗೂ ಭಾರತೀಯ ಸೈನ್ಯದಲ್ಲಿ ಸೇರುವವರಿಗೆ ಪ್ರೇರಣೆ ಆಗಲಿ ಎಂದರು.

28 ವರ್ಷಗಳ ಕಾಲ ಸೈನಿಕನಾಗಿ ಭಾರತಮಾತೆಯ ಸೇವೆಯನ್ನು ಮಾಡಿದ್ದು ಖುಷಿ ತಂದಿದೆ ದೇಶದ ಭದ್ರತೆಗಾಗಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದೂ ಯಲ್ಲಪ್ಪ ಇಟ್ಟಪ್ಪನವರ್ ತಿಳಿಸಿದರು.

ಯಲ್ಲಪ್ಪ ಹನಬರ್ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದಿನ ಯುವಕರು ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಕೇವಲ ಕೆಟ್ಟ ಅಭ್ಯಾಸಗಳಿಂದ ಸಮಾಜಕ್ಕೆ ಭಾರವಾಗದೆ ಒಳ್ಳೆಯವರಾಗಿ ಬದುಕಿ ಹೆತ್ತ ತಾಯಿ ಹಾಗೂ ಹೊತ್ತ ಮಾತೃಭೂಮಿಗೆ ಗೌರವ ತರಬೇಕು ಅದಕ್ಕೆ ಯಲ್ಲಪ್ಪ ಇಟ್ಟಪ್ಪನವರ ಅವರ ಜೀವನವೇ ಮಾದರಿಯಗಿದೆ ಎಂದರು.

ಯಲ್ಲಪ್ಪ ಅವರ ಧರ್ಮಪತ್ನಿ ತುಳಸಾ ಮಕ್ಕಳದ ಕುಮಾರಿ ತೇಜಸ್ವಿನಿ ಸ್ನೇಹ ಆರ್ಯನ ರೋಹನ್ ಹಾಗೂ ರಾಮನಗೌಡ ಪಾಟೀಲ್ ಪ್ರಾಧ್ಯಾಪಕ ಶಿವಪ್ಪ ಕಾತಗಾರ ಯುವ ನಾಯಕ ಸಂಜು ಪಂಡಿ ಬೀಡಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೀವ್ ಪೇಜೊಳ್ಳಿ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!