ಖಾನಾಪುರ : ತಾಲೂಕಿನ ಸುಕ್ಷೇತ್ರ ಕಸಮಳಗಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಎನ್ ಎಸ್ ಎಸ್ ಶಿಬಿರವನ್ನು ಆಯೋಜಿಸಲಾಗಿದ್ದು ಏಳು ದಿನಗಳ ಕಾಲ ನಡೆಯುವ ಶಿಬಿರವನ್ನು ನಂದಗಡ ಪೊಲೀಸ್ ಠಾಣೆಯ ಜನಪ್ರಿಯ ಪಿಎಸ್ಐ ಎಸ್ ಎಸ್ ಬದಾಮಿ ಯವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೀಡಿ ಗ್ರಾಮದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಶಿಬಿರವನ್ನು ಆಯೋಜಿಸಲಾಗಿದೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪದವಿ ಕಾಲೇಜಿನ ಪ್ರಾಚಾರ್ಯರಾದ ನಾಸಿರುದ್ದೀನ್ ಜಂಗುಬಾಯಿ ವಹಿಸಿಕೊಂಡಿದ್ದರು. ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹಾಗೂ ದುರ್ಗಾದೇವಿ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಭೀಮಪ್ಪ ಬೊಕ್ಡೇಕರ್, ಬಸವರಾಜ ಬೇಕನಿ, ಉದಯ ಬಡಸ್ಕರ್, ಈರಪ್ಪ ಹುಬ್ಬಳ್ಳಿ, ಬಸವರಾಜ್ ಬಂಗಿ, ಶೋಕತಲಿ ಬಿಚ್ಚುನವರ್, ಹಾಗೂ ಮಹಾವೀರ್ ಗೌಡ್ರು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಿಎಸ್ಐ ಎಸ್ ಎಸ್ ಬದಾಮಿಯವರು ಶಿಬಿರಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಕುರಿತು ಮಾತನಾಡಿದರು ಮನುಷ್ಯ ಜನ್ಮ ದೊಡ್ಡದು ಹಾಳಾಗಬೇಡಿ ಹುಚ್ಚಪ್ಪಗಳಿರ ಎಂಬಂತೆ ನಾವು ನಮ್ಮ ಜೀವನವನ್ನು ಮಾದರಿಯಾಗಿಸಿ ಸಾಮರಸ್ಯ ಶೈಲಿಯ ಜೀವನ ಜೀವಿಸಬೇಕು ನಾವು ಜೀವಿಸುವ ಸಮಾಜಕ್ಕೂ ತಂದೆ ತಾಯಿಗಳಿಗೂ ಕೀರ್ತಿ ತಂದುಕೊಡಬೇಕು ದುಶ್ಚಟಗಳಿಂದ ದೂರವಿರಬೇಕು ಸಾಧಕರ ಸಾಲಿನಲ್ಲಿ ನಾವು ನಿಲ್ಲಬೇಕು ಎಂದು ವಿದ್ಯಾರ್ಥಿಗಳಿಗೆ ಉಪದೇಶ ಮಾಡಿದರು ಗ್ರಾಮಸ್ಥರ ಪರವಾಗಿ ಅವರನ್ನು ಸತ್ಕರಿಸಲಾಯಿತು.



