Search
Close this search box.

ಒಂದೇ ಸೂರಿನಡಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಅಸ್ತಿತ್ವಕ್ಕೆ !

ಬೆಳಗಾವಿ‌ : ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ (ರಿ) ರಚನೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರು ಸೇರಿ ಸಭೆ ನಡೆಸಿದರು. ಈ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ (ರಿ) ಎಂಬ ಸಂಘಟನೆಯನ್ನು ರಚಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಪದಾಧಿಕಾರಿಗಳ ಆಯ್ಕೆ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ (ರಿ) ನ ಗೌರವಾಧ್ಯಕ್ಷರಾಗಿ ನ್ಯೂಸ್ ಫಸ್ಟ್ ಹಿರಿಯ ವರದಿಗಾರ ಶ್ರೀಕಾಂತ ಕುಬಕಡ್ಡಿ, ಅಧ್ಯಕ್ಷರಾಗಿ ಪವರ್ ಟಿವಿ ಜಿಲ್ಲಾ ವರದಿಗಾರ ಮಂಜುನಾಥ ಪಾಟೀಲ್, ಉಪಾಧ್ಯಕ್ಷರಾಗಿ ಪ್ರಜಾ ಟಿವಿ ಜಿಲ್ಲಾ ವರದಿಗಾರ ಚಂದ್ರು ಶ್ರೀರಾಮುಡು, ಪ್ರಧಾನ ಕಾರ್ಯದರ್ಶಿಯಾಗಿ ನ್ಯೂಸ್18 ಕನ್ನಡ ಜಿಲ್ಲಾ ವರದಿಗಾರ ಚಂದ್ರಕಾಂತ ಸುಗಂಧಿ, ಸಹ ಕಾರ್ಯದರ್ಶಿಯಾಗಿ ಟಿವಿ9 ವಿಡಿಯೋ ಜರ್ನಲಿಸ್ಟ್ ಪ್ರವೀಣ ಶಿಂಧೆ ಹಾಗೂ ಖಜಾಂಚಿಯಾಗಿ ಸುವರ್ಣನ್ಯೂಸ್ ಜಿಲ್ಲಾ ವರದಿಗಾರ ಅನಿಲ್ ಕಾಜಗಾರ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಭಾಗಿಯಾದವರು ಈ ಸಭೆಯಲ್ಲಿ ಕಸ್ತೂರಿ ಟಿವಿ ಜಿಲ್ಲಾ ವರದಿಗಾರ ಸಂತೋಷ ಶ್ರೀರಾಮುಡು, ಟಿವಿ5 ಕನ್ನಡ ಜಿಲ್ಲಾ ವರದಿಗಾರ ಶ್ರೀಧರ ಕೊಟಾರಗಸ್ತಿ, ಪಿಟಿಐ(ವಿಡಿಯೋ) ಸುದ್ದಿಸಂಸ್ಥೆಯ ಜಿಲ್ಲಾ ವರದಿಗಾರ ಮಹಾಂತೇಶ ಕುರಬೇಟ, ಟಿವಿ9 ಜಿಲ್ಲಾ ವರದಿಗಾರ ಸಹದೇವ ಮಾನೆ, ರಿಪಬ್ಲಿಕ್ ಕನ್ನಡ ಜಿಲ್ಲಾ ವರದಿಗಾರ ಮೈಲಾರಿ ಪಟಾತ್, ರಾಜ್ ನ್ಯೂಸ್ ಜಿಲ್ಲಾ ವರದಿಗಾರ ಮಂಜುನಾಥ ರೆಡ್ಡಿ, ಈಟಿವಿ ನ್ಯೂಸ್ ಜಿಲ್ಲಾ ವರದಿಗಾರ ಸಿದ್ದನಗೌಡ ಪಾಟೀಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಮೀಡಿಯಾದ ವರದಿಗಾರರು ಉಪಸ್ಥಿತರಿದ್ದರು.

ಸಂಘಟನೆಯ ಉದ್ದೇಶ ಎಲ್ಲಾ ಎಲೆಕ್ಟ್ರಾನಿಕ್ ಮೀಡಿಯಾದ ವರದಿಗಾರರು ಒಂದೇ ಸೂರಿನಡಿ ಬರುವ ಸಕಾರಾತ್ಮಕ ದೃಷ್ಟಿಯಿಂದ ಈ ಸಂಘಟನೆಯನ್ನು ರಚಿಸಲಾಗಿದೆ. ಶೀಘ್ರದಲ್ಲಿಯೇ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಗುವುದು ಎಂದು ನೂತನ ಅಧ್ಯಕ್ಷ ಮಂಜುನಾಥ ಪಾಟೀಲ್ ತಿಳಿಸಿದ್ದಾರೆ.
ಈ ಸಂಘಟನೆಯ ರಚನೆಯಿಂದ ಬೆಳಗಾವಿ ಜಿಲ್ಲೆಯ ಎಲೆಕ್ಟ್ರಾನಿಕ್ ಮಾಧ್ಯಮದ ವರದಿಗಾರರಿಗೆ ಒಂದು ವೇದಿಕೆ ದೊರೆತಂತಾಗಿದೆ.

ಎಲೆಕ್ಟ್ರಾನಿಕ್ ಮಾಧ್ಯಮ ಎಂದರೇನು?

ಎಲೆಕ್ಟ್ರಾನಿಕ್ಸ್ ಮಾಧ್ಯಮವು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಜನರಲ್ಲಿ ರಚಿಸಬಹುದಾದ ಮತ್ತು ವಿತರಿಸಬಹುದಾದ ಒಂದು ರೀತಿಯ ಮಾಧ್ಯಮವಾಗಿದೆ. ಮುದ್ರಣ ಮಾಧ್ಯಮಕ್ಕಿಂತ ಭಿನ್ನವಾಗಿ, ಈ ರೀತಿಯ ಮಾಧ್ಯಮವು ವ್ಯಾಪಕ ಶ್ರೇಣಿಯ ಪ್ರೇಕ್ಷಕರನ್ನು ಹೊಂದಿದೆ. ಆದ್ದರಿಂದ, ಇದು ಸ್ಥಿರ ಅಥವಾ ಮುದ್ರಣ ಮಾಧ್ಯಮಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ. ಆದ್ದರಿಂದ, ಸರಳವಾಗಿ ಹೇಳುವುದಾದರೆ, ವಿದ್ಯುತ್ ಶಕ್ತಿ ಮತ್ತು ವೇದಿಕೆಗಳೊಂದಿಗೆ ತೊಡಗಿಸಿಕೊಂಡಿರುವ ಪ್ರತಿಯೊಂದು ಮಾಧ್ಯಮವನ್ನು ಎಲೆಕ್ಟ್ರಾನಿಕ್ ಮಾಧ್ಯಮ ಎಂದು ಕರೆಯಲಾಗುತ್ತದೆ. 

ಎಲೆಕ್ಟ್ರಾನಿಕ್ ಮಾಧ್ಯಮ ಡೊಮಿನ  ಮತ್ತು ಹೋಸ್ಟಿಂಗ್  ಮುಖಾಂತರ ಹಾಗೂ ಕೆಲವು ಸೊಸೆಲ್ ಮೀಡಿಯಾ ಮುಖಾಂತರನು ಸುದ್ದಿ ಬಿತ್ತರಿಸುವ ವ್ಯಕ್ತಿಗಳಿಗೆ ಎಲೆಕ್ಟ್ರಾನಿಕ್ ಮೀಡಿಯಾ ಮಾಧ್ಯಮ ಮಿತ್ರ ಅನ್ನುತ್ತಾರೆ.

ಆದರೆ ಕೆಲವು ಸಂಘಟನೆಗಳು ಇಂಥ ವ್ಯಕ್ತಿಗಳನ್ನು ನಕಲಿ ಅಥವಾ ಯೂಟ್ಯೂಬರ್ ಇತ್ಯಾದಿ ಅವರನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳುವುದಿಲ್ಲ ಅವರದೇ ಆದ ಪ್ರಿನ್ಸಿಪಲ್ ನಲ್ಲಿ ಹೋಗುತ್ತಾರೆ ಈ ಮಾಧ್ಯಮ ಸಂಘಕ್ಕೆ ಶುಭಾಶಯಗಳು ಕೋರುತ್ತಾ ಇವರು ಇನ್ನೊಂದು ಘೋಷಣೆ ಮಾಡಬೇಕು ಈ ಮಾಧ್ಯಮದಲ್ಲಿ ಯಾರ್ಯಾರಿಗೆ ರಿಜಿಸ್ಟ್ರೇಷನ್ ಮಾಡಲು ಅವಕಾಶವಿದೆ.

Leave a Comment

error: Content is protected !!