ಯೋಗ ಸ್ಪರ್ಧೆಯಲ್ಲಿ ಹಿರೇನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು “ತಾಲೂಕು ಮಟ್ಟದಲ್ಲಿ ಪ್ರಥಮ – ಜಿಲ್ಲಾ ಮಟ್ಟಕ್ಕೆ ಪಯಣ” 

ಹಿರೇನಂದಿಹಳ್ಳಿ : ಶ್ರೀ ನಾಗಭೂಷಣ ಶಿವಯೋಗಿಗಳವರ ಸರ್ಕಾರಿ ಪ್ರೌಢಶಾಲೆ, ಹಿರೇನಂದಿಹಳ್ಳಿ, ತಾಲೂಕು ಚನ್ನಮ್ಮನ ಕಿತ್ತೂರು ಶಾಲೆಯ ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಶಾಲೆಯ 8ನೇ ತರಗತಿಯ ಬಾಲಕ/ಬಾಲಕಿರಿಯರ ಯೋಗ ತಂಡವು ತಾಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಇದೇ ಸಂದರ್ಭದಲ್ಲಿ 17ನೇ ವರ್ಷ ವಯೋಮಿತಿಯ ಯೋಗ ತಂಡವು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದೆ.

ವಿದ್ಯಾರ್ಥಿಗಳ ಈ ಸಾಧನೆಯು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದು, ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಸ್ತು ಹಾಗೂ ಯೋಗಾಭ್ಯಾಸಕ್ಕೆ ಈ ಗೆಲುವು ಸಾಕ್ಷಿಯಾಗಿದೆ.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಪ್ರಧಾನ ಗುರುಗಳು, ಬಸವರಾಜ ಬಿದರಿ,  ದೈಹಿಕ ಶಿಕ್ಷಣ ಶಿಕ್ಷಕರಾದ ಜಿ ಎಪ್ ತಿಪ್ಪನ್ನವರ್, ಎಸ್‌ಡಿಎಂಸಿ ಸದಸ್ಯ ಬಸವರಾಜ ಸ ಅಂಗಡಿ, ಮಾಜಿ ಸೈನಿಕ ಹಾಗೂ ಗಂಗಪ್ಪ ಹುರಕಡ್ಲಿ ಗ್ಯಾರೆಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ, ಪೋಷಕರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ಹಂತದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

“ತಾಲೂಕು ಮಟ್ಟದಲ್ಲಿ ಪ್ರಥಮ – ಜಿಲ್ಲಾ ಮಟ್ಟಕ್ಕೆ ಪಯಣ” ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಸಮುದಾಯವೇ ಹೆಮ್ಮೆ ವ್ಯಕ್ತಪಡಿಸಿದೆ.

Leave a Comment

error: Content is protected !!