ರೈತರು ಬದುಕಿದರೆ ನಾಡು ಬದುಕುತ್ತದೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ವಾಸುದೇವ ಮೇಟಿ

ಬೆಳಗಾವಿ :  ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬೆಂಗಳೂರು ವಾಸುದೇವ್ ಮೇಟಿ ಬನ ಸಂಘಟನೆಯ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತಾ ತೆರಳಿ ರಾಜ್ಯದ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ ಅವರಿಗೆ ಮನವಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ವಾಸುದೇವ್ ಮೇಟಿ ಅವರು ಮಾತನಾಡಿ ರಾಜ್ಯದಲ್ಲಿ ಮಳೆ ಅಭಾವದಿಂದ ತೀವ್ರ ಬರಗಾಲ ಎದುರಿಸುತ್ತಿದ್ದು ರೈತಾಪಿ ವರ್ಗ ಕಂಗಾಲಾಗಿದೆ ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೀಜಗಳು ಮೊಳಕೆ ಒಡೆಯದೆ ಹಾಳಾಗಿವೆ ಹಾಗೂ ಬಂದ ಅಷ್ಟಿಷ್ಟು ಫಸಲು ಮಳೆ ಯಾಗದೆ ಸಂಪೂರ್ಣ ಹಾಳಾಗಿದೆ ಇದರಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ರೈತರು ಬದುಕಿದರೆ ಎಲ್ಲರೂ ಬದುಕುತ್ತಾರೆ ರೈತರು ತೊಂದರೆ ಅನುಭವಿಸಿದರೆ ಎಲ್ಲಾ ವಲಯಗಳು ತೊಂದರೆ ಅನುಭವಿಸುತ್ತವೆ ಕಾರಣ ಈ ಕೂಡಲೇ ರಾಜ್ಯ ಸರ್ಕಾರ ಬರಗಾಲ ಕಾಮಗಾರಿಯನ್ನು ಆರಂಭಿಸಬೇಕು ಹಾಗೂ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಈ ಕೂಡಲೇ ಪ್ರತೀ ಎಕರೆಗೆ 50,000 ಬೆಳೆ ನಷ್ಟ ಪರಿಹಾರ ಘೋಷಿಸಬೇಕು ವಿದ್ಯುತ್ ವಲಯವನ್ನು ಖಾಸಗಿ ಕರಣ ಗೊಳಿಸುವುದನ್ನು ಕೈ ಬಿಡಬೇಕು ಎಂದು ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಪೊರ್ಟ್ರಿ ಫಾರ್ಮ್ ಕಾಮಗಾರಿಯನ್ನು ಈ ಕೂಡಲೇ ಸ್ಥಗಿತಗೊಳಿಸಬೇಕು ಪೋರ್ಟರಿ ಫಾರ್ಮ ನಿರ್ಮಾಣದಿಂದ ಸುತ್ತಮುತ್ತಲಿನ ಕಾದರವಳ್ಳಿ ಹುಲಿಕಟ್ಟಿ ತುರಮರಿ ಗುಡಿ ಕೊಟ್ಟಬಾಗಿ ಸೇರಿದಂತೆ ಬಹುತೇಕ ಹಳ್ಳಿಗಳ ಜನಜೀವನಕ್ಕೆ ತೊಂದರೆ ಉಂಟಾಗಲಿದೆ ಕಾಮಗಾರಿಯನ್ನು ನಿಲ್ಲಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು ಖಾನಾಪುರ ತಾಲೂಕಿಗೆ ಮಲಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸ ಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಬೆಳಗಾವಿ ಜಿಲ್ಲಾಧ್ಯಕ್ಷ ಕಲ್ಮೇಶ್ ಗೋಕಾಕ್ ಚಿಕ್ಕೋಡಿ ಜಿಲ್ಲಾಧ್ಯಕ್ಷ ಪುಟ್ಟು ಖಾನಾಪುರಿ. ಗೋಕಾಕ್ ತಾಲೂಕ ಅಧ್ಯಕ್ಷ ಗೋಪಾಲ್ ಗೋಪಾಲಿ ಶ್ರೀಮತಿ ಕಮಲಾ ಪಾಟೀಲ್ ಅನುಶ್ರೀ ಹೊಸಮನಿ ಕಿತ್ತೂರು ತಾಲೂಕ ಅಧ್ಯಕ್ಷ ಮಹಾಬಲೇಶ್ವರ ಅಂಗಡಿ ಸತೀಶ ಇಟ್ನಾಳ್ ಶೇಖರ್ ಗುಂಡಿ ಪ್ರಕಾಶ್ ಅಂಗಡಿ ಬಸವರಾಜ್ ಬುಡ ಶೆಟ್ಟಿ ಖಾನಾಪುರ್ ತಾಲೂಕ ಅಧ್ಯಕ್ಷ ಮಹಾವೀರ ಗೌಡ್ರು ಅಪ್ಪಾಜಿ ಮಡಾಕರ ಈರಪ್ಪ ಹುಬ್ಬಳ್ಳಿ ರಾಮನಗೌಡ ಪಾಟೀಲ್ ಬಸವರಾಜ್ ಭಂಗಿ ಎಂ ಎಂ ರಾಜೀಬಾಯಿ ಮುಂತಾದವರು ಉಪಸ್ಥಿತರಿದ್ದರು ಹೋರಾಟಗಾರರು ಜನಪ್ರಿಯ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಇದೇ ಸಂದರ್ಭದಲ್ಲಿ ಸಂಘಟನೆಯ ಪರವಾಗಿ ಸತ್ಕರಿಸಿದರು.

ವರದಿ ಎಂ ಎಂ ರಾಜೀಬಾಯಿ

Leave a Comment

error: Content is protected !!