ಪರಮಜೋತಿ ಪ್ರೌಢಶಾಲೆಯ 2002 2003 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಖಾನಾಪುರ ತಾಲೂಕಿನ ಗಂಧಿಗವಾಡ ಗ್ರಾಮದ ಜೀ ಈ ಸೊಸೈಟಿಯ ಪರಮ ಜ್ಯೋತಿ ಪ್ರೌಢಶಾಲೆಯ 2003 ಮತ್ತು 2004ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ತಮಗೆ ವಿದ್ಯೆಯನ್ನು ಕರುಣಿಸಿದ ಗುರುಗಳಿಗೆ ಬೃಹತ್ ಸನ್ಮಾನ ಸಮಾರಂಭವನ್ನು ಏರ್ಪಡಿಸಿ ವಿದ್ಯಾರ್ಥಿಗಳು ಗುರುಗಳ ಋಣ ಭಾರದಿಂದ ಮುಕ್ತರಾದರು.

ಈ ಕುರಿತು ನಡೆದ ಭವ್ಯ ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು ವಹಿಸಿದ್ದರು ಜೀ ಈ ಸೊಸೈಟಿಯ ಅಧ್ಯಕ್ಷ ನ್ಯಾಯವಾದಿ ಉಮೇಶ್ ಮೂಲಿಮನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು ಗುರುಗಳಾದ ಪಿ ವೈ ಪಾಟೀಲ್ ಎಸ್ ಜಿ ಕುಲಕರಣಿ ಎಸ್ ಆರ್ ಎಮ್ಮಿ ಬಿ ವಿ ಮೂಲಿಮನಿ ಪಿ ಎಸ್ ಹುಲಮನಿ ಎಲ್ಎಸ್ ಕುಂದೇಕಾರ್ ಬೀ ಬಿ ಕರವೀರ ನವರ. ರುದ್ರಪ್ಪ ಕೋಲ್ಕಾರ್ ಎನ್ ಎಸ್ ನಾಯಕ್ ಅವರನ್ನು ಸತ್ಕರಿಸಲಾಯಿತು ಪರಮ ಜ್ಯೋತಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿಧನರಾದ ಗುರುಗಳಿಗೂ ಸಿಬ್ಬಂದಿಯವರಿಗೂ ಮೌನ ಆಚರಣೆಯ ಮುಖಾಂತರ ಗೌರವ ನಮನಗಳನ್ನು ಸಲ್ಲಿಸಲಾಯಿತು.

ಪ್ರೊಫೆಸರ್ ಶಿವಾನಂದ ಮೂಲಿಮನಿ ಮುಖ್ಯೋಪಾಧ್ಯಾಯ ಎಸ್ ಎಂ ನಾಯಕ. ಮುಂತಾದವರು ಉಪಸ್ಥಿತರಿದ್ದರು ಪ್ರಾಧ್ಯಾಪಕ ವಿಜಯ್ ಇಟಗಿ ಹಾಗೂ ಸವಿತಾ ಟಕಾಯಿ ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಡಾಕ್ಟರ್ ವಿಜಯ್ ಯಮಕನಮರಡಿ ಮಹೇಶ್ ಕಂಬಳಿ ತೌಶಿೀಪ ಬಾಗವಾನ ಯಾಸೀನ್ ಅತ್ತಾರ ಸಾಧಿಕ್ ಮನಿಯಾರ ಪುಂಡಲೀಕ ಕಾ ತಗಾರ ರಾಜು ಜಯ ಗೌಡ್ರ, ಸುಭಾನಿ. ಜೀರಗಿ ಮಂಜುನಾಥ್ ಬಡಸದ ರವಿ ಹುಲಿ ಕವಿ ಮಹಾವೀರ ಮಂಡೇದ ನಾಗರಾಜ ಹುಬ್ಬಳ್ಳಿ ಶೈಲಾ ಕಂಬಳಿ ಶಿಲ್ಪಾ ದೊಡವಾಡ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿ ಮೆಚ್ಚುಗೆಗೆ ಪಾತ್ರರಾದರು.

ಸನ್ಮಾನವನ್ನು ಸ್ವೀಕರಿಸಿ ಜನಪ್ರಿಯ ನಿವೃತ್ತ ಪ್ರಾಧ್ಯಾಪಕ ಪೀ ವೈ ಪಾಟೀಲ್ ಗುರುಗಳು ಮಾತನಾಡುತ್ತಾ ದಶಕಗಳು ಕಳೆದರೂ ವಿದ್ಯಾರ್ಥಿಗಳು ನಮ್ಮ ಸೇವೆಯನ್ನು ಗುರುತಿಸಿ ಭಕ್ತಿ ಪೂರ್ವಕವಾಗಿ ನಮ್ಮನ್ನು ಸತ್ಕರಿಸಿದ್ದು ನಿಜವಾಗಿಯೂ ಸಂತಸದ ಸಂಗತಿ ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕು ಉಜ್ವಲವಾಗಲಿ ಎಂಬುವುದೇ ಎಲ್ಲ ಗುರುಗಳ ಹಾರೈಕೆ ಎಂದರು.

ಜೀವನದಲ್ಲಿ ಮುಂದೆ ಬರಲು ಒಳ್ಳೆಯ ಗುರುವಿನ ಆಶೀರ್ವಾದ ಬೇಕು ಅದು ನಿಮಗೆ ಸಿಕ್ಕಿದೆ ಎಂದರು ದಶಕಗಳ ನಂತರ ಒಂದು ವೇದಿಕೆಯಲ್ಲಿ ಸೇರಿದ ಗೆಳೆಯರು ಕೆಲಕಾಲ ತಮ್ಮ ತಮ್ಮ ತಮ್ಮ ಕುಶಲೋಪ ಪರಿಯನ್ನು ಹಂಚಿಕೊಂಡು ಶಾಲಾ ಜೀವನದ ಕ್ಷಣಗಳನ್ನು ಮೆಲಕು ಹಾಕಿದರು ವರದಿ ಎಂ ಎಂ ರಾಜಾಬಾಯಿ.

Leave a Comment

error: Content is protected !!